ಆ್ಯಪ್ನಗರ

ಶ್ರೀರಾಮಲಿಂಗೇಶ್ವರನಿಗೆ ಕ್ಷೀರಾಭಿಷೇಕ

ಚುಂಚನಕಟ್ಟೆ: ಕಾರ್ತಿಕ ಮಾಸದ ಕೊನೆಯ ಸೋಮವಾರದ ಹಿನ್ನೆಲೆಯಲ್ಲಿಶ್ರೀ ಕ್ಷೇತ್ರ ಶ್ರೀರಾಮಲಿಂಗೇಶ್ವರ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂತು.

Vijaya Karnataka 26 Nov 2019, 2:03 pm
ಚುಂಚನಕಟ್ಟೆ: ಕಾರ್ತಿಕ ಮಾಸದ ಕೊನೆಯ ಸೋಮವಾರದ ಹಿನ್ನೆಲೆಯಲ್ಲಿಶ್ರೀ ಕ್ಷೇತ್ರ ಶ್ರೀರಾಮಲಿಂಗೇಶ್ವರ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂತು.
Vijaya Karnataka Web the milky way to sriramalingeshwara
ಶ್ರೀರಾಮಲಿಂಗೇಶ್ವರನಿಗೆ ಕ್ಷೀರಾಭಿಷೇಕ


ಚುಂಚನಕಟ್ಟೆ ಸಮೀಪದಲ್ಲಿನ, ಕಾವೇರಿ ನದಿ ದಡದಲ್ಲಿಪ್ರಕೃತಿ ನಿಸರ್ಗದ ನಡುವೆ ನೆಲೆಯಾಗಿ ರುವ ಇತಿಹಾಸ ಪ್ರಸಿದ್ಧ ಶ್ರೀರಾಮ ಲಿಂಗೇಶ್ವರ ದೇವಾಲಯದಲ್ಲಿನಾಲ್ಕನೇ ಕಾರ್ತಿಕ ಸೋಮವಾರ ಭಕ್ತಿ-ಭಾವದಿಂದ ನೆರೆ- ಹೊರೆಯ ಗ್ರಾಮಗಳ ಸಾವಿರಾರು ಭಕ್ತರು, ಸಂಜೆ ದೀಪೋತ್ಸವದೊಂದಿಗೆ ಪ್ರಾರ್ಥಿಸಿದರು.

ದೇವಾಲಯದಲ್ಲಿಹೊತ್ತೇರೊ ಮುನ್ನವೇ ಅರ್ಚಕ ವೃಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಎಳನೀರು, ಮೊಸರು, ಅರಿಶಿಣ-ಕುಂಕುಮ, ರುಧ್ರಾಭಿಷೇಕ ಸೇರಿದಂತೆ ಪಂಚಾಭಿಷೇಕ ಮಾಡಿ ಪವಿತ್ರ ಕಾವೇರಿ ನದಿಯ ಜಲದಿಂದ ಜಲಾಭಿಷೇಕ ಮಾಡಲಾಯಿತು. ಬಳಿಕ ಶಿವಲಿಂಗದ ಮೂರ್ತಿಗೆ ಮುಖವಾಡ ಧರಿಸಿ ವಿಶೇಷ ಅರ್ಚನೆ ಹೊಮ-ಹವನ ಹಾಗೂ ಸೇವಾ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿ ಸಿದ ನಂತರ ದೇವರ ಮೂರ್ತಿಗೆ ಬಿಲ್ವಪತ್ರೆ, ನಾನಾ ಬಗೆಯ ಹೂಗಳಿಂದ ಶೃಂಗರಿಸಿದ ಪ್ರಧಾನ ಅರ್ಚಕ ಅನಂತು ಭಕ್ತರ ಸಮ್ಮುಖದಲ್ಲಿದೇವರಿಗೆ ನೈವೇದ್ಯ, ಮಹಾ ಮಂಗಳಾರತಿ ನೆರವೇರಿಸಿ ದರು. ನೆರೆ-ಹೊರೆಯ ಗ್ರಾಮ ಸೇರಿದಂತೆ ಜಿಲ್ಲೆ, ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿಆಗಮಿಸಿದ್ದ ಭಕ್ತರ ಸಮೂಹ ಸರತಿ ಸಾಲಿನಲ್ಲಿನಿಂತು ಶಿವ ಸ್ಮರಣೆ ಮಾಡುತ್ತಾ ದೇವರಿಗೆ ಹಣ್ಣುಕಾಯಿ ನೀಡಿ ಶ್ರದ್ಧಾ ಭಕ್ತಿಯಿಂದ ಮನದಲ್ಲಿಇಷ್ಟಾರ್ಥ ನೆರವೇರಿಸು ವಂತೆ ಪ್ರಾರ್ಥಿಸಿ, ಶಿವನ ಕಣ್ತುಂಬಿಕೊಂಡರು. ದೇಗುಲದ ಆಡಳಿತದ ಸಹಕಾರದೊಂದಿಗೆ ದೇವಾಲಯದ ಅವರಣದಲ್ಲಿಪ್ರತಿ ವರ್ಷದಂತೆ ಈ ಬಾರಿಯೂ ದಿ.ಪೇರು ಕುಟುಂಬಸ್ಥರು ಬರುವ ಭಕ್ತಾಧಿಗಳಿಗೆ ಸಂಜೆವರೆಗೂ ಅನ್ನಸಂತರ್ಪಣೆ ಕಾರ‍್ಯಕ್ರಮ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ