ಆ್ಯಪ್ನಗರ

ಹಾಡಹಗಲೇ ಗ್ರಾಪಂ ಸದಸ್ಯನ ಕೊಲೆ

ವಿವಾಹಿತ ಮಹಿಳೆಯೊಬ್ಬರ ಕಾಣೆ ಪ್ರಕರಣದಲ್ಲಿ ಕೈವಾಡವಿದೆ ಎಂದು ಶಂಕಿಸಿ, ಗ್ರಾ.ಪಂ.ಸದಸ್ಯರೊಬ್ಬರನ್ನು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗದ್ದಿಗೆಯಲ್ಲಿ ಬುಧವಾರ ನಡೆದಿದೆ.

Vijaya Karnataka 30 Aug 2018, 5:00 am
ಹುಣಸೂರು: ವಿವಾಹಿತ ಮಹಿಳೆಯೊಬ್ಬರ ಕಾಣೆ ಪ್ರಕರಣದಲ್ಲಿ ಕೈವಾಡವಿದೆ ಎಂದು ಶಂಕಿಸಿ, ಗ್ರಾ.ಪಂ.ಸದಸ್ಯರೊಬ್ಬರನ್ನು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗದ್ದಿಗೆಯಲ್ಲಿ ಬುಧವಾರ ನಡೆದಿದೆ.
Vijaya Karnataka Web the murder of grama panchayath member in day
ಹಾಡಹಗಲೇ ಗ್ರಾಪಂ ಸದಸ್ಯನ ಕೊಲೆ


ಗದ್ದಿಗೆ ಬಳಿಯ ಕುಟ್ಟುವಾಡಿ ಗ್ರಾಮದ ಸೋಮೇಶ್‌ಗೌಡರ ಪುತ್ರ, ಕರೀಮುದ್ದನಹಳ್ಳಿ ಗ್ರಾ.ಪಂ.ಸದಸ್ಯ ನಾಗರಾಜ್‌(33) ಮೃತರು. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ನಾಗರಾಜ್‌ ಗದ್ದಿಗೆಯಲ್ಲಿ ಶಾಮಿಯಾನ ಅಂಗಡಿ ನಡೆಸುತ್ತಿದ್ದು, ಈತ 8 ವರ್ಷಗಳ ಹಿಂದೆ ಪಕ್ಕದ ಹತ್ತಿನಿಂಗಣ್ಣರ ಪುತ್ರಿ ಉಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಡಲು ಮನೆಯವರು ನಿರಾಕರಿಸಿದ್ದರು. ಆ ನಂತರ ಉಷಾಳನ್ನು ಶ್ರೀರಂಗಪಟ್ಟಣ ತಾಲೂಕು ಸೋಮವಾರಪೇಟೆಗೆ ಮದುವೆ ಮಾಡಿಕೊಡಲಾಗಿದೆ. ನಾಗರಾಜ್‌ ಸಹ ಬೇರೆ ಮದುವೆಯಾಗಿದ್ದು, ಇಬ್ಬರಿಗೂ ಮಕ್ಕಳಿವೆ.

ನಂತರವೂ ಇಬ್ಬರ ನಡುವೆ ಪ್ರೀತಿ ಮುಂದುವರಿದಿದ್ದು, ಎರಡು ತಿಂಗಳಿನಿಂದ ಉಷಾ ಕಾಣೆಯಾಗಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಉಷಾಳನ್ನು ನಾಗರಾಜನೇ ಅಪಹರಿಸಿ ಎಲ್ಲೋ ಕೂಡಿಟ್ಟಿರಬೇಕೆಂದು ಶಂಕಿಸಿ, ಬುಧವಾರ ತನ್ನ ಸಹಚರರೊಂದಿಗೆ ಸಹೋದರ ಕಾರ್ತಿಕ್‌ ಶಾಮಿಯಾನ ಅಂಗಡಿ ಬಳಿ ಬಂದು ವಿಚಾರಿಸಿದ್ದಾನೆ.
‘‘ಉಷಾ ಎಲ್ಲಿ? ಮಕ್ಕಳು ತಾಯಿಗಾಗಿ ಹಂಬಲಿಸುತ್ತಿವೆ. ಕಳುಹಿಸಿಕೊಡು’’ ಎಂದು ಏರುದನಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕಾರ್ತಿಕ್‌ ಹಾಗೂ ಸ್ನೇಹಿತರು ಮಚ್ಚಿನಿಂದ ನಾಗರಾಜ್‌ ತಲೆಗೆ ಹೊಡೆದು, ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ನಾಗರಾಜನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದರಾದರೂ ಪರೀಕ್ಷಿಸಿದಾಗ ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಕಾರ್ತಿಕ್‌ ಹಾಗೂ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಇವರ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ವೃತ್ತ ನಿರೀಕ್ಷ ಕ ಪೂವಯ್ಯ ತಿಳಿಸಿದ್ದಾರೆ.

ಎಸ್‌ಪಿ ಅಮಿತ್‌ಸಿಂಗ್‌, ಎಎಸ್‌ಪಿ ಅಳಶಿಂಗಿರಿ, ಡಿವೈಎಸ್‌ಪಿ ಭಾಸ್ಕರ ರೈ, ವೃತ್ತ ನಿರೀಕ್ಷ ಕ ಪೂವಯ್ಯ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ