ಆ್ಯಪ್ನಗರ

ತೂತುಕುಡಿ ಗೋಲಿಬಾರ್‌ ಖಂಡಿಸಿ ಪ್ರತಿಭಟನೆ

ತೂತುಕುಡಿಯಲ್ಲಿ ರೈತರ ಮೇಲಿನ ಗೋಲಿಬಾರ್‌ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

Vijaya Karnataka 24 May 2018, 5:00 am
ಮೈಸೂರು : ತೂತುಕುಡಿಯಲ್ಲಿ ರೈತರ ಮೇಲಿನ ಗೋಲಿಬಾರ್‌ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
Vijaya Karnataka Web thoothukudi condemned the goalibar protest
ತೂತುಕುಡಿ ಗೋಲಿಬಾರ್‌ ಖಂಡಿಸಿ ಪ್ರತಿಭಟನೆ


ನಗರದ ಜಿಲ್ಲಾ ನ್ಯಾಯಾಲಯದ ಬಳಿ ಇರುವ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು, ತಾಮ್ರ ಮಿಶ್ರಣ ಘಟಕದಿಂದಾಗುವ ಅನಾಹುತ ಖಂಡಿಸಿ ತೂತುಕುಡಿಯಲ್ಲಿ ಮಂಗಳವಾರ ಚಳವಳಿ ನಡೆಸಿದ ರೈತರ ಮೇಲೆ ಗುಂಡು ಹಾರಿಸಿ ಹತ್ತು ಜನರನ್ನು ಕೊಂದಿರುವ ಘಟನೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.

ಗೋಲಿಬಾರ್‌ನಲ್ಲಿ ಸಾವಿಗೀಡಾದ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮುನ್ನೆಚ್ಚರಿಕೆವಹಿಸಿ ಶಾಂತಿ ಕಾಪಾಡಬಹುದಾಗಿದ್ದ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು. ತಾಮ್ರ ಮಿಶ್ರಣ ಘಟಕ ಸ್ಥಾಪನೆ ವಿರುದ್ಧ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈ ಘಟಕವನ್ನು ಸ್ಥಗಿತಗೊಳಿಸಬೇಕು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ತಮಿಳುನಾಡು ಸರಕಾರ ಘೋಷಣೆ ಮಾಡಬೇಕು. ಗೋಲಿಬಾರ್‌ ನಲ್ಲಿ ಮರಣಹೊಂದಿರುವವರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ, ಸರಗೂರು ನಟರಾಜ್‌, ಎಚ್‌.ಸಿ.ಲೋಕೇಶ್‌ ರಾಜೇ ಅರಸ್‌, ಹೊಸೂರು ಕುಮಾರ್‌, ಹೊಸಕೋಟೆ ಬಸವರಾಜ್‌, ಪಿ.ಮರಂಕಯ್ಯ, ವಿದ್ಯಾಸಾಗರ್‌, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕುಮಾರ ಸ್ವಾಮಿ ಸಂಪೂರ್ಣ ಸಾಲಾ ಮನ್ನಾ ಮಾಡಲಿ: ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ರಾಜ್ಯದ ರೈತರ ಕೃಷಿ ಸಾಲಮನ್ನಾ ಮಾಡುವುದಾಗಿ ಜನತೆಯ ಮುಂದೆ ಘೋಷಣೆ ಮಾಡಿದ್ದ ಎಚ್‌.ಡಿ.ಕುಮಾಸ್ವಾಮಿಯವರು ಮಾತು ತಪ್ಪದೇ ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ