ಆ್ಯಪ್ನಗರ

ಹುಲಿ, ಆನೆ ಹೆಜ್ಜೆ ಅರಸುತ್ತಾ ಗಣತಿ ನಡೆಸಿದ ವನ ಸಿಬ್ಬಂದಿ!

ಮತ್ತಿಗೋಡು ವಲಯದಲ್ಲಿ ಮಂಗಳವಾರ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿ ಸೋಮವಾರ-ಮಂಗಳವಾರವೂ ಹುಲಿ ನೇರವಾಗಿ ಕಾಣಿಸಿಕೊಂಡಿದೆ.

Vijaya Karnataka 26 Jan 2022, 12:10 am
ಹುಣಸೂರು: ರಾಷ್ಟ್ರೀಯ ಹುಲಿ ಗಣತಿಯ ಮೊದಲ ಹಂತದ ಭಾಗವಾಗಿ ಮಾಂಸಹಾರಿ ಹಾಗೂ ದೊಡ್ಡ ಸಸ್ಯಹಾರಿ ಪ್ರಾಣಿಗಳ ಸೈನ್‌ ಸರ್ವೆ (ಗುರುತು ಸಮೀಕ್ಷೆ) ಮಂಗಳವಾರ ಮುಕ್ತಾಯಗೊಂಡಿದೆ. ಮೊದಲ ಮೂರು ದಿನ ಹಲವು ವಲಯಗಳಲ್ಲಿ ಹುಲಿ, ಆನೆ, ಕಾಟಿ ಮತ್ತಿತರ ಪ್ರಾಣಿಗಳು ನೇರವಾಗಿ ಕಾಣಿಸಿಕೊಂಡಿದ್ದನ್ನು ಸಿಬ್ಬಂದಿ ಎಂ-ಸ್ಟೆ್ರತ್ರೖಫ್ಸ್‌ (ಮಾನಿಟರಿಂಗ ಸಿಸ್ಟಮ್‌ ಫಾರ್‌ ಟೈಗರ್‌ ಇಂಟೆನ್ಸಿವ್‌ ಪ್ರೊಟೆಕ್ಷನ್‌ ಅಂಡ್‌ ಎಕಾಲಜಿಕಲ್‌ ಸ್ಟೇಟಸ್‌) ಆ್ಯಪ್‌ನಲ್ಲಿ ದಾಖಲಿಸಿದರು.
Vijaya Karnataka Web ಹುಲಿ ಗಣತಿ
ಹುಲಿ ಗಣತಿ


ಭಾನುವಾರದಿಂದ ಮಂಗಳವಾರದವರೆಗೆ ನಡೆದ ಗಣತಿಯಲ್ಲಿ ನಿತ್ಯವೂ ಉದ್ಯಾನದ 91 ಬೀಟ್‌ಗಳಲ್ಲೂ ತಲಾ ಮೂವರು ಸಿಬ್ಬಂದಿ 5ಕಿ.ಮೀ.ವರೆಗೆ ಹೆಜ್ಜೆ ಹಾಕಿ ಪ್ರಾಣಿಗಳ ಚಲನವಲನದ ಚಿಹ್ನೆಗಳನ್ನು ದಾಖಲಿಸಿದ್ದಾರೆ.

ಚಾಮರಾಜನಗರ: ಅರಣ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳು, ಹರ್ಷದ ಜತೆ ಸಂಘರ್ಷದ ಆತಂಕ

ಮತ್ತಿಗೋಡು ವಲಯದಲ್ಲಿ ಮಂಗಳವಾರ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿಸೋಮವಾರ-ಮಂಗಳವಾರವೂ ಹುಲಿ ನೇರವಾಗಿ ಕಾಣಿಸಿಕೊಂಡಿದೆ. ಇದೇ ರೀತಿ ನಾಗರಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಹುಣಸೂರು, ಮೇಟಿಕುಪ್ಪೆ ವಲಯಗಳಲ್ಲಿ ಗಣತಿದಾರರಿಗೆ ಹುಲಿ ಕಾಣಿಸಿಕೊಂಡಿದ್ದರೆ, ವೀರನಹೊಸಹಳ್ಳಿ ವಲಯದಲ್ಲಿ ಜಾರ್‌ಗಲ್‌-ತುಪ್ಪದಕೊಳ ಗಸ್ತಿನ ಅಂಚಿನಲ್ಲಿ ಹುಲಿ ಘರ್ಜಿಸಿರುವುದನ್ನು ದಾಖಲಿಸಿದ್ದಾರೆ. ಎಲ್ಲ ವಲಯಗಳಲ್ಲೂ ಆನೆ, ಕಾಟಿಗಳ ನೇರ ಕಾಣಿಸಿಕೊಂಡಿರುವುದನ್ನು ಆಪ್‌ನಲ್ಲಿ ದಾಖಲಿಸಿದ್ದಾರೆ. ಅಲ್ಲದೆ ರಣಹದ್ದುಗಳು ಮತ್ತು ಇತರೆ ಪಕ್ಷಿಗಳನ್ನು ವೀಕ್ಷಿಸಿ, ಅವುಗಳನ್ನು ಕೂಡ ದಾಖಲೆ ಮಾಡಿದ್ದಾರೆ.

ಮಲ, ಹಿಕ್ಕೆ, ಲದ್ದಿ ಸಂಗ್ರಹ

ಎಲ್ಲಕಡೆಯೂ ಹುಲಿ, ಆನೆ, ಕಾಟಿ ಮತ್ತಿತರ ದೊಡ್ಡ ಸಸ್ಯಹಾರಿ ಪ್ರಾಣಿಗಳ ಮಲ, ಲದ್ದಿ ಹಾಗೂ ಹಿಕ್ಕೆಯ ಫೋಟೊವನ್ನು ಆಪ್‌ನಲ್ಲಿದಾಖಲಿಸಿ, ಅದರ ಮಾದರಿಯನ್ನು ಸಂಗ್ರಹಿಸಿದರು. ಇದನ್ನು ಡೆಹರಾಡೂನ್‌ನ ವೈಲ್ಡ್‌ ಲೈಫ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾಗೆ ಕಳುಹಿಸಲಾಗುವುದು. ಪ್ರಾಣಿಗಳ ಹೆಜ್ಜೆ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆಪ್‌ನಲ್ಲಿದಾಖಲಿಸಿದರು.

ಜ.27 ರಿಂದ ಲೈನ್‌ ಟ್ರಾತ್ರ್ಯಜಾಕ್ಟ್

ಜ.27 ರಿಂದ ಫೆ.1ರವರೆಗೆ 105 ಲೈನ್‌ ಟ್ರಾತ್ರ್ಯಜಾಕ್ಟ್ ಮೂಲಕ ಎರಡು ಕಿ.ಮೀ.ವರೆಗೆ ಸಂಚರಿಸಿ ಹುಲಿಯ ಆಹಾರವಾದ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯಪ್ರಭೇದಗಳ ಗಣತಿ ನಡೆಯಲಿದೆ ಎಂದು ಎಸಿಎಫ್‌ ಸತೀಶ್‌ ತಿಳಿಸಿದ್ದಾರೆ.
ಬಂಡೀಪುರ ಉದ್ಯಾನದಲ್ಲಿ ಪ್ರಭಾರ ಕಾರ್ಯ ಭಾರ; ಹಲವು ದಿನ ಕಳೆದರೂ ಪೂರ್ಣಾವಧಿ ಅಧಿಕಾರಿಗಳ ನೇಮಕವಿಲ್ಲ!
ಮುಂಜಾನೆ ಸಫಾರಿ: ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ಗಣತಿಗೆ ವಿರಾಮ ನೀಡಿದ್ದು, ಎಂದಿನಂತೆ ಎಲ್ಲೆಡೆ ಬೆಳಗಿನ ವೇಳೆಯೂ ಸಫಾರಿ ವ್ಯವಸ್ಥೆ ಇರಲಿದೆ ಎಂದು ಡಿಸಿಎಫ್‌ ಮಹೇಶ್‌ ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ