ಆ್ಯಪ್ನಗರ

ನಾಗರಹೊಳೆ ಉದ್ಯಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹೆಣ್ಣು ಹುಲಿ

ಸುಮಾರು 6-7 ವರ್ಷದ ಹೆಣ್ಣು ಹುಲಿಯೊಂದು ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ ನಡೆದಿದೆ.

Vijaya Karnataka Web 5 Jun 2020, 2:09 pm
ಹುಣಸೂರು: ಸುಮಾರು 6-7 ವರ್ಷದ ಹೆಣ್ಣು ಹುಲಿಯೊಂದು ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ ನಡೆದಿದೆ.
Vijaya Karnataka Web tiger


ವಲಯದ ತುಪ್ಪದ ಕೊಳ ಗಸ್ತಿನಲ್ಲಿ ಹುಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂರ್ನಾಲ್ಕು ಕಡೆ ಗಾಯ ಕಂಡುಬಂದಿದೆ. ಅಲ್ಲದೆ ಒಂದು ಹಲ್ಲು ಮುರಿದಿದ್ದು, ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿರಬಹುದು. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಸ್ಥಳದಲ್ಲಿ ರಣ ಹದ್ದುಗಳ ಹಾರಾಟದಿಂದ ಹುಲಿ ಶವ ಪತ್ತೆಯಾಗಿದೆ ಎಂದು ಹುಲಿಯೋಜನೆ ನಿರ್ದೇಶಕ ಮಹೇಶ್‌ಕುಮಾರ್‌ ತಿಳಿಸಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್‌, ಎಸಿಎಫ್‌ ಸತೀಶ್‌, ಆರ್‌ಎಫ್‌ಒ ರವೀಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ವೈಲ್ಡ್‌ ಲೈಫ್‌ ವಾರ್ಡನ್‌ ಕೃತಿಕಾ, ಎನ್‌.ಜಿ.ಒ.ದ ರಾಜ್‌ಕುಮಾರ್‌ ಅರಸ್‌ ಸಮ್ಮುಖದಲ್ಲಿ ಮಹಜರ್‌ ನಡೆಯಿತು. ಉದ್ಯಾನದ ಪಶು ವೈದ್ಯ ಡಾ.ಮುಜೀಬ್‌ ಹಾಗೂ ಹುಣಸೂರು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಿಂಗರಾಜು ಶವಪರೀಕ್ಷೆ ನಡೆಸಿದರು. ನಂತರ ಸ್ಥಳದಲ್ಲಿಯೇ ಶವವನ್ನು ಸುಟ್ಟು ಹಾಕಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ