ಆ್ಯಪ್ನಗರ

Tiger Spotted In Mysuru : ಹುಲಿ ಬಂತು ಹುಲಿ.. ಶೆಟ್ಟಹಳ್ಳಿ ಸುತ್ತಮುತ್ತ ಭಯವೋ ಭಯ

ಬೆಂಗಳೂರು, ಬೆಳಗಾವಿಯಲ್ಲಿ ಹುಲಿ ಮತ್ತು ಚಿರತೆಗಳು ಭೀತಿ ಹುಟ್ಟಿಸಿ ಸುಮ್ಮನಾಗಿವೆ. ಆದರೆ ಮೈಸೂರಲ್ಲಿ ಮಾತ್ರ ಹುಲಿ, ಚಿರತೆ ದಾಳಿ, ಪ್ರತ್ಯಕ್ಷ ಮಾತ್ರ ನಿಂತಿಲ್ಲ, ಒಂದಲ್ಲ ಒಂದು ಕಡೆ ಹುಲಿ ಅಥವಾ ಚಿರತೆ ದರ್ಶನವಾಗುತ್ತಿದೆ. ಮೈಸೂರು ಸುತ್ತಮುತ್ತಿನ ಗ್ರಾಮಗಳು, ತಾಲೂಕುಗಳಲ್ಲಿ ಪ್ರತ್ಯಕ್ಷವಾಗಿದ್ದು ಸ್ತಳೀಯರಲ್ಲಿ ಆತಂಕ ಹೆಚ್ಚಿಸಿದೆ.

Authored byPavan Lakshmikanth | Vijaya Karnataka Web 12 Jan 2023, 1:31 pm
ಮೈಸೂರು: ಇತ್ತೀಚೆಗೆ ಕಾಡಿನಿಂದ ನಾಡಿಗೆ ಬರುವ ಮೃಗಗಳ ಸಂಖ್ಯೆ ಹೆಚ್ಚುತ್ತಿದೆ. ಮೈಸೂರು ಜಿಲ್ಲೆಯಲ್ಲಂತೂ ವಿಪರೀತ ಭಯದ ವಾತಾವರಣ ನಿರ್ಮಾಣವಾಗಿದೆ. ಟಿ.ನರಸೀಪುರ, ಹೆಚ್. ಡಿ.ಕೋಟೆ ಹಾಗೂ ಮೈಸೂರಿನ ಗ್ರಾಮೀಣ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಆತಂಕ ನಿರ್ಮಿಸಿರುವ ಬೆನ್ನಲ್ಲೇ ನಂಜನಗೂಡಲ್ಲಿ ರಸ್ತೆ ಮಧ್ಯೆ ಹುಲಿಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
Vijaya Karnataka Web Tiger sighting again in Mysuru
ಸಂಗ್ರಹ ಚಿತ್ರ


ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಿಂದ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆ ಹುಲಿ ಪ್ರತಕ್ಷವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹುಲ್ಲಹಳ್ಳಿಯಿಂದ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಆಟೋ ಚಾಲಕನ ಮೊಬೈಲ್‌ನಲ್ಲಿ ರಸ್ತೆ ದಾಟುತ್ತಿದ್ದ ಹುಲಿಯ ದೃಶ್ಯ ಸೆರೆಯಾಗಿದೆ.

Siddaramaiah - ಪುತ್ರನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಕ್ಷೇತ್ರ ತ್ಯಾಗ?: ಮೈಸೂರು ಕೈ ಕಾರ್ಯಕರ್ತರಲ್ಲಿ ನಿರುತ್ಸಾಹ
ಮೈಸೂರು ಭಾಗದಲ್ಲಿ ಹೆಚ್ಚುತ್ತಿರುವ ಚಿರತೆ ಹಾವಳಿಯಿಂದ ಈಗಾಗಲೇ ಭಯ ಹೆಚ್ಚಿದೆ. ಈಗ ಹುಲಿ ಪ್ರತ್ಯಕ್ಷವಾಗಿ ಆತಂಕವನ್ನ ಇನ್ನಷ್ಟು ಹೆಚ್ಚಿಸಿದೆ. ಒಂದು ಕಡೆ ಚಿರತೆ ಹಾವಳಿ, ಇದೀಗ ಹುಲಿ ಪ್ರತ್ಯಕ್ಷವಾಗಿದೆ. ಈ ಹಿಂದೆ ಬಳ್ಳೂರುಹುಂಡಿ ಗ್ರಾಮದ ರೈತರೊಬ್ಬರ ಮೇಲೆ ಹುಲಿ ದಾಳಿ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಅವರು ಕೆಲಕಾಲ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ.

ಜಾನುವಾರುಗಳ ಮೇಲೆ ದಾಳಿ
ಹುಲ್ಲಹಳ್ಳಿ ಭಾಗದಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗಿದ್ದು, ಗ್ರಾಮದ ಅನೇಕ ರೈತರ ಜಾನುವಾರುಗಳನ್ನ ಬಲಿ ತೆಗೆದುಕೊಳ್ಳುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ, ಹುಲಿಗಳನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಈವರೆಗೂ ಬೋನಿಗೆ ಚಿರತೆ, ಹುಲಿ ಸೆರೆ ಸಿಕ್ಕಿಲ್ಲ. ಹೀಗಾಗಿ ಜನ ಸಾಕಷ್ಟು ಭಯಗೊಂಡಿದ್ದಾರೆ. ಕಳೆದ ಒಂದು ಆರು ತಿಂಗಳಿಂದ ಚಿರತೆ, ಹುಲಿ ಕಾಟ ಹೆಚ್ಚಾದರು ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶ.

ಮೈಸೂರು ಖಾಸಗಿ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ; ಮುಡಾ ಅದಾಲತ್ ಗೆ ದೂರುಗಳ ಮಹಾಪೂರ
ಶೆಟ್ಟಹಳ್ಳಿ ಸೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಸಿಕ್ಕಾಪಟ್ಟೆ ಟೆನ್ಷನ್ ಸೃಷ್ಟಿಯಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಹುಲಿ ಸೆರೆಗೆ ಆಗ್ರಹ ಮಾಡಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ 2-3 ಬಾರಿ ಹುಲಿ ಕಾಣಿಸಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಳೆದ ತಿಂಗಳು ದನ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಹುಲಿ ಹಠಾತ್ ದಾಳಿ ನಡೆಸಿತ್ತು. ದಾಸಯ್ಯ ಎಂಬುವವರ ಮೇಲೆ ಹುಲಿ ಹಠಾತ್ ದಾಳಿ ನಡೆದಿತ್ತು. ಈ ವೇಳೆ ಹತ್ತಿರದಲ್ಲಿದ್ದ ಇತರರು ನೆರವಿಗೆ ಬಂದು ದಾಸಯ್ಯನನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ತೀವ್ರ ಗಾಯಗೊಂಡಿದ್ದ ದಾಸಯ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಗೆ ಗಸ್ತು ತಿರುಗಿದರು. ಇಷ್ಟಾದರು ಹುಲಿಯಾಗಲಿ ಚಿರತೆಯಾಗಲಿ ಸೆರೆ ಸಿಕ್ಕಿಲ್ಲ. ಇಷ್ಟದೇ ಅಲ್ಲದೇ ಮೈಸೂರು ಸುತ್ತಮುತ್ತ ಎಷ್ಟು ಚಿರತೆ ಮತ್ತು ಹುಲಿಗಳು ಸೇರಿಕೊಂಡಿವೆ ಎಂದು ಗ್ರಾಮಸ್ಥರು ಅರಣ್ಯ ಅಧೀಕಾರಿಗಳನ್ನ ಪ್ರಶ್ನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ