ಆ್ಯಪ್ನಗರ

ಮದುವೆಯಲ್ಲಿ ಒಂದಾದ ಟಿಕ್‌ಟಾಕ್‌ ಜೋಡಿ

​ಟಿಕ್‌ ಟಾಕ್‌ನಲ್ಲಿ ಪರಿಚಯವಾದ ಯುವ ಜೋಡಿಯೊಂದು ಪ್ರೇಮ ಪಾಶಕ್ಕೆ ಬಿದ್ದು ಅಂತರ್‌ಜಾತಿ ಮದುವೆ ಮಾಡಿಕೊಂಡಿದ್ದಾರೆ.

Vijaya Karnataka 21 Jun 2019, 5:00 am
ಹುಣಸೂರು: ಟಿಕ್‌ ಟಾಕ್‌ನಲ್ಲಿ ಪರಿಚಯವಾದ ಯುವ ಜೋಡಿಯೊಂದು ಪ್ರೇಮ ಪಾಶಕ್ಕೆ ಬಿದ್ದು ಅಂತರ್‌ಜಾತಿ ಮದುವೆ ಮಾಡಿಕೊಂಡಿದ್ದಾರೆ.
Vijaya Karnataka Web tiktak couple wedding
ಮದುವೆಯಲ್ಲಿ ಒಂದಾದ ಟಿಕ್‌ಟಾಕ್‌ ಜೋಡಿ


ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮಹದೇವ್‌ ಅವರ ಪುತ್ರಿ ಪ್ರಿಯಾಂಕ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿಯ ಚನ್ನಕೇಶವ ಅವರ ಪುತ್ರ ಕುಮಾರ್‌ ಟಿಕ್‌ ಟಾಕ್‌ ಅಂತರಜಾತಿ ವಿವಾಹವಾದ ಜೋಡಿ.

ಒಂದು ವರ್ಷಗಳ ಹಿಂದೆ ಕುಮಾರ್‌ನ ಹಾಡುಗಳು ಟಿಕ್‌ ಟಾಕ್‌ನಲ್ಲಿ ಹರಿದಾಡುತ್ತಿದ್ದವು. ಇದನ್ನು ಲೈಕ್‌ ಮಾಡಿದ್ದ ಪ್ರಿಯಾಂಕ ನಂತರದಲ್ಲಿ ಅವರ ನಂಬರ್‌ ಪಡೆದು ಸಂಪರ್ಕಿಸಿದ್ದರು. ಈ ವೇಳೆ ಕುಮಾರ್‌ ಹಾಗೂ ಪ್ರಿಯಾಂಕರ ನಡುವೆ ಪ್ರೇಮಾಂಕುರವಾಗಿತ್ತು. ಯುವತಿಯ ತಂದೆ-ತಾಯಿ ವೃದ್ಧರಾಗಿದ್ದಾರೆ. ಕುಮಾರ್‌ ಕುಟುಂಬದವರು ಮದುವೆಗೆ ಸಮ್ಮತಿಸುತ್ತಿದ್ದಂತೆ ಪ್ರಿಯಾಂಕ ಯುವಕನ ಮನೆಗೆ ನೇರವಾಗಿ ಬಂದಿದ್ದರು.

ಕುಮಾರ್‌ ಕುಟುಂಬದವರು ದಸಂಸ ಮುಖಂಡರ ನೆರವು ಪಡೆದು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಾಯಿಸಿದರು. ಕುಮಾರ್‌-ಪ್ರಿಯಾಂಕ ಮದುವೆಯಾದರು. ನೆರೆದಿದ್ದವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ಟಿಕ್‌ ಟಾಕ್‌ ಜೋಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್‌ದೇವರಹಟ್ಟಿ, ಮಾಜಿ ಸದಸ್ಯ ಫಜಲುಲ್ಲಾ, ಡೀಡ್‌ನ ಡಾ.ಶ್ರೀಕಾಂತ್‌, ಮುಖಂಡರಾದ ನಿಂಗರಾಜಮಲ್ಲಾಡಿ, ಹರಿಹರಆನಂದಸ್ವಾಮಿ ಬಸವಲಿಂಗಯ್ಯ, ಬಲ್ಲೇನಹಳ್ಳಿಕೆಂಪರಾಜು, ಗಜೇಂದ್ರ, ದೇವೆಂದ್ರ, ಸಂತೋಷ್‌, ಶಿವಶೇಖರ್‌ ಕಿರಣ್‌, ಅರುಣ್‌, ಮುರುಗೇಶ್‌ ಮುಂತಾದವರು ಶುಭ ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ