ಆ್ಯಪ್ನಗರ

ನರಸೀಪುರದಲ್ಲಿ ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವ

ತಿ.ನರಸೀಪುರ: ಇತಿಹಾಸ ಪುಟದಲ್ಲಿಹಸಿರಾಗಿರುವ ಟಿಪ್ಪು ಸುಲ್ತಾನರ ಹೋರಾಟದ ಕಿಚ್ಚು ಯಾವುದೇ ಕಾರಣಕ್ಕೂ ಅಳಿಸಲು ಸಾಧ್ಯವಿಲ್ಲಎಂದು ಶಾಸಕ ಎಂ.ಆಶ್ವಿನ್‌ ಕುಮಾರ್‌ ಹೇಳಿದರು.

Vijaya Karnataka 21 Nov 2019, 5:00 am
ಮೈಸೂರು ಹುಲಿ ಹೋರಾಟ ಯಾರಿಂದಲೂ ಅಳಿಸಲಸಾಧ್ಯ
Vijaya Karnataka Web tipu sultan jayanthu festival in narasipur
ನರಸೀಪುರದಲ್ಲಿ ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವ


ತಿ.ನರಸೀಪುರ: ಇತಿಹಾಸ ಪುಟದಲ್ಲಿಹಸಿರಾಗಿರುವ ಟಿಪ್ಪು ಸುಲ್ತಾನರ ಹೋರಾಟದ ಕಿಚ್ಚು ಯಾವುದೇ ಕಾರಣಕ್ಕೂ ಅಳಿಸಲು ಸಾಧ್ಯವಿಲ್ಲಎಂದು ಶಾಸಕ ಎಂ.ಆಶ್ವಿನ್‌ ಕುಮಾರ್‌ ಹೇಳಿದರು.

ಪಟ್ಟಣದ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿತಾಲೂಕು ನಾಗರೀಕರ ಒಕ್ಕೂಟದ ಅಶ್ರಯದಲ್ಲಿ270ನೇ ಟಿಪ್ಪು ಸುಲ್ತಾನ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್‌ ಜಯಂತಿ ರದ್ದುಗೊಳಿಸಿರಬಹುದು. ಆದರೆ, ಜನರ ಮನಸ್ಸಿನಿಂದ ತಗೆದುಹಾಕಲು ಸಾಧ್ಯವಿಲ್ಲಎಂದರು.

''ಟಿಪ್ಪು ಸುಲ್ತಾನ್‌ ರಾಷ್ಟ್ರ ಹಾಗೂ ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಇದನ್ನು ಕೋಮುವಾದಿಗಳು ಅರ್ಥ ಮಾಡಿಕೊಳ್ಳಬೇಕು,'' ಎಂದು ಹೇಳಿದರು.

''ದೇಶಕ್ಕೆ ರೇಷ್ಮೆಯನ್ನು ಕೊಡುಗೆಯಾಗಿ ನೀಡಿದ ಟಿಪ್ಪುಸುಲ್ತಾನ್‌ ಅವರು ಮಾಡಿರುವ ಉತ್ತಮ ಕಾರ್ಯದಿಂದಾಗಿ ಇಂದಿಗೂ ರೇಷ್ಮೆ ಬೆಳೆಗಾರರು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಜಾತಿ, ಭೇದದ ಸೋಂಕಿಲ್ಲದೆ ಎಲ್ಲಧರ್ಮದವರಿಗೂ ಶಿಕ್ಷಣ ನೀಡಿದ ದೊರೆಯ ಜಯಂತಿಯನ್ನು ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಎಲ್ಲರೂ ಆಚರಿಸಬೇಕಿದೆ. ಯಾವುದೇ ಅಹಿತಕರ ಘಟನೆಗೆ ಅನುವು ಮಾಡಿಕೊಡದೆ ಸೌಹಾರ್ದಯುತ ವಾತಾವರಣದಲ್ಲಿಎಲ್ಲರೂ ಜಯಂತ್ಯುತ್ಸವ ಆಚರಿಸಬೇಕು,'' ಎಂದು ಸಲಹೆ ನೀಡಿದರು.

''ಸಮಾನತೆಗಾಗಿ ಹೋರಾಡಿದ ಫಲವಾಗಿ ಎಲ್ಲಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಮಹನೀಯರ ಆದರ್ಶ ಸಿದ್ಧಾಂತವನ್ನು ಎಲ್ಲರೂ ತಮ್ಮ ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ತಾಲೂಕು ನಾಗರೀಕರ ಒಕ್ಕೂಟ ಟಿಪ್ಪು ಸುಲ್ತಾನ್‌ ಅವರ ಜಯಂತಿ ಕಾರ್ಯಕ್ರಮವನ್ನು ಸರ್ವಧರ್ಮ ಸಮನ್ವಯತೆಗಾಗಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ,'' ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ''ಯಾರು ಏನೇ ಹೇಳಿದರೂ ಮೈಸೂರು ಹುಲಿ ಎಂದೇ ಖ್ಯಾತರಾಗಿದ್ದ ಟಿಪ್ಪು ಸುಲ್ತಾನ್‌ ಜಾತಿ ಧರ್ಮದ ಭೇದವಿಲ್ಲದೇ ಎಲ್ಲರನ್ನು ಸಮಾನವಾಗಿ ಕಂಡಿದ್ದರು. ಅಂತಹ ದೇಶ ಪ್ರೇಮಿಯ ಜಯಂತಿಯನ್ನು ಸರಕಾರದ ಮಟ್ಟದಲ್ಲಿಆಚರಿಸಲು ಹಿಂದೂ-ಮುಸ್ಲಿಂರು ಒಗ್ಗಟ್ಟಾಗಿ ಹೋರಾಟ ರೂಪಿಸಬೇಕಿದೆ,'' ಎಂದು ಕಿವಿಮಾತು ಹೇಳಿದರು.

''ಟಿಪ್ಪು ಒಬ್ಬ ದೇಶ ಭಕ್ತ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿತನ್ನ ಮಕ್ಕಳನ್ನು ಒತ್ತೆಯಾಗಿ ಹಿಟ್ಟು ಹೋರಾಟ ಮಾಡಿದ ವೀರ. ಇಂತಹ ವ್ಯಕ್ತಿಯ ಜಯಂತಿಯನ್ನು ಮುಸ್ಲಿಮರು ಮಾಡಿದರೆ ಸಾಲದು, ನಾಡಿನ ಎಲ್ಲವರ್ಗದವರೂ ಕೂಡಿ ಆಚರಣೆ ಮಾಡಬೇಕು,'' ಎಂದರು.

ಮೈಸೂರು ಬಸವ ಧ್ಯಾನ ಮಠದ ಬಸವಲಿಂಗಸ್ವಾಮಿ ಸ್ವಾಮೀಜಿ, ಎನ್‌.ಕೆ.ಎಫ್‌. ಫೌಂಡೇಷನ್‌ ಅಧ್ಯಕ್ಷ ಎನ್‌.ಕೆ.ಫರೀದ್‌, ತಾಲೂಕು ಪಂಚಾಯತಿ ಸದಸ್ಯ ಬಿ.ಸಾಜೀದ್‌ ಅಹಮ್ಮದ್‌, ಪುರಸಭೆ ಸದಸ್ಯ ಅಹಮ್ಮದ್‌ ಸಯೀದ್‌, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್‌ ಪಾಷ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌.ಮಹೇಶ್‌, ಶಿವಶಂಕರ್‌, ಬಸವರಾಜು, ರಂಗಸ್ವಾಮಿ, ಮುಖಂಡರಾದ ಸಂತೃಪ್ತಿ ಕುಮಾರ್‌, ಎಚ್‌.ಎಂ.ಚಂದ್ರು, ಉಮೇಶ್‌, ಬಿ.ಮನ್ಸೂರ್‌ ಅಲಿ, ಫಾರೂಕ್‌, ಹಜರತ್‌ ಷಫೀ, ಎಚ್‌.ನಾಗರಾಜು, ರಿಯಾಜ್‌ ಅಹಮದ್‌, ಡಣಾಯಕನ ಪುರ ಸೋಮಣ್ಣ ಹಾಗೂ ಇತರ ಮುಸ್ಲಿಂ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ