ಆ್ಯಪ್ನಗರ

Vande Bharat Express - ವಿಮಾನ ಪ್ರಯಾಣದನುಭವ ನೀಡುವ ವಂದೇ ಭಾರತ್ ಚೆನ್ನೈ-ಮೈಸೂರು ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ

ಬಹುನಿರೀಕ್ಷಿತ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಸೋಮವಾರ ಪ್ರಾಯೋಗಿಕ ಓಡಾಟ ಪ್ರಾರಂಭಿಸಿದೆ. ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಟ ರೈಲು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಿದೆ. ​ನವೆಂಬರ್ 11 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು ಇದೇ ಸಂದರ್ಭದಲ್ಲಿ ವಿಮಾನಪ್ರಯಾಣದನುಭವ ನೀಡುವ ಈ ರೈಲಿಗೆ ಚಾಲನೆ ನೀಡಲಿದ್ದಾರೆ.

Edited byGanesh | Vijaya Karnataka Web 7 Nov 2022, 5:25 pm

ಹೈಲೈಟ್ಸ್‌:

  • ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಯಶಸ್ವಿ
  • ಸೋಮವಾರ ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಿದ ರೈಲು
  • ನ.11 ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web vandebharath2
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು(ಸಾಂದರ್ಭಿಕ ಚಿತ್ರ)
ಮೈಸೂರು: ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭಿಸಿದ್ದು, ಸೋಮವಾರ ನಡೆದ ಟ್ರಯಲ್ ರನ್ ಯಶಸ್ವಿ ಆಗಿದೆ. ಚೆನ್ನೈ ನಿಂದ ಹೊರಟಿದ್ದ ವಂದೇ ಭಾರತ್ ಟ್ರೈನ್ ಯಶಸ್ವಿಯಾಗಿ ಮೈಸೂರು ತಲುಪಿದೆ. ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ಟ್ರೈನ್ ಇದಾಗಿದೆ.
ನವೆಂಬರ್ 11 ರಂದು ಇದು ಲೋಕಾರ್ಪಣೆಯಾಗಲಿದ್ದು ಸಾರ್ವಜನಿಕ ಸೇವೆಗೆ ಟ್ರೈನ್ ಲಭ್ಯ ಇರಲಿದೆ.

ಸೋಮವಾರ ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5.50ಕ್ಕೆ ರೈಲು ನಿರ್ಗಮಿಸಿತ್ತು . ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಿದೆ. ಈ ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6ಗಂಟೆ 40 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಕೊಟ್ಟಿದ್ದು, ನಿಗದಿತ ವೇಳೆಗೆ ಎಕ್ಸ್ ಪ್ರೆಸ್ ಮೈಸೂರು ತಲುಪಿದೆ.
11ರಂದು ಮೋದಿ ಚಾಲನೆ

ನವೆಂಬರ್ 11 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಿದ್ದಾರೆ.

ಮೈಸೂರು- ಬೆಂಗಳೂರು- ಚೆನ್ನೈನಡುವಿನ Vande Bharat Express ವೇಳಾಪಟ್ಟಿ ರಿಲೀಸ್: ಬೆಂಗಳೂರಲ್ಲಿ ಒಂದೇ ನಿಲುಗಡೆ!


ವಂದೇ ಭಾರತ್ ಎಕ್ಸ್ ಪ್ರೆಸ್ ನೋಡಲು ಆಕರ್ಷಕವಾಗಿದೆ. ಮೈಸೂರಿಗೆ ಅಗಮಿಸುತ್ತಿದ್ದಂತೆ ಸಂಭ್ರಮ ಮನೆಮಾಡಿತ್ತು. ಅಧಿಕಾರಿಗಳು ಹಾಗೂ ಅಲ್ಲಿಯೇ ಇದ್ದ ಇತರೆ ಪ್ರಯಾಣಿಕರು ಟ್ರೈನ್ ನೋಡಿ ಸಂತೋಷಪಟ್ಟರು. ಚೆನ್ನೈ ಹಾಗೂ ಬೆಂಗಳೂರಿಗೆ ಮೈಸೂರಿನಿಂದ ತೆರಳೋ ಪ್ರಯಾಣಿಕರು ತುದಿಗಾಲಿನಲ್ಲಿ ನಿಂತಿದ್ದು, ಈಗಾಗ್ಲೇ ಬುಕ್ಕಿಂಗ್ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಿದ್ದಾರೆ.

ಒಟ್ಟು 16 ಬೋಗಿಗಳಿರುವ ವಂದೇ ಭಾರತ್ ರೈಲು
ಸುಮಾರು 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಪಡೆಯಲಿರುವುದು ಇದರ ವಿಶೇಷವಾಗಿದೆ. ಚೆನ್ನೈನಲ್ಲಿ ವಂದೇ ಭಾರತ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ, ಇದು ಸಂಪೂರ್ಣ ಸ್ವದೇಶಿ ರೈಲುಗಳಾಗಿದ್ದು, ಶೇ.80ರಷ್ಟು ಭಾರತದ ಕಚ್ಛಾ ವಸ್ತುಗಳನ್ನೇ ಬಳಸಲಾಗುತ್ತಿದೆ. ಒಂದು ರೈಲಿಗೆ 135 ದಶಲಕ್ಷ ಡಾಲರ್ ವೆಚ್ಚವಾಗಲಿದ್ದು, 2023ರ ಮಾರ್ಚ್ ವೇಳೆಗೆ 27 ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿದೆ.

ಮೈಸೂರು-ಚೆನ್ನೈ ಪ್ರಯಾಣ ದರ 921 ರೂ

ಮೈಸೂರು- ಚೆನ್ನೈ ನಡುವೆ ಎಕಾನಮಿ ಕ್ಲಾಸ್‌ಗೆ 921 ರೂ, ಎಕ್ಸಿಕ್ಯುಟಿವ್‌ ಕ್ಲಾಸ್‌ ದರ 1,880 ರೂ.ನಷ್ಟಿರಲಿದೆ. ಇನ್ನು ಮೈಸೂರಿನಿಂದ ಬೆಂಗಳೂರಿಗೆ ಟಿಕೆಟ್‌ ದರ ಎಕಾನಮಿ ಕ್ಲಾಸಿನಲ್ಲಿ 368 ರೂ. ಹಾಗೂ ಎಕ್ಸಿಕ್ಯುಟಿವ್‌ ಕ್ಲಾಸಿನಲ್ಲಿ 768 ರೂ.ನಷ್ಟುನಿಗದಿ ಪಡಿಸಲಾಗಿದೆ. ಶತಾಬ್ದಿಗೆ ಹೋಲಿಸಿದರೆ ವಂದೇ ಭಾರತ ಎಕ್ಸಪ್ರೆಸ್‌ ಟಿಕೆಟ್‌ ದರ ಶೇ. 39ರಷ್ಟು ಹೆಚ್ಚಾಗಿದೆ.

ವೀಡಿಯೋ ಟ್ವೀಟ್ ಮಾಡಿರುವ ಸಂಸದ ಪ್ರತಾಪಸಿಂಹ

ವಂದೇ ಭಾರತ್ ಮೈಸೂರು ನಿಲ್ದಾಣಕ್ಕೆ ಆಗಮಿಸುತ್ತಿರುವ ವೀಡಿಯೋವನ್ನು ಸಂಸದ ಪ್ರತಾಪ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. "ನಮ್ಮ ಮೈಸೂರಿಗೆ ವಂದೇ ಭಾರತ ಆಗಮಿಸಿದೆ! ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗ ಧನ್ಟವಾದಗಳು'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವರಿಗೆ ಟ್ಯಾಗ್ ಮಾಡಿದ್ದಾರೆ.

ಲೇಖಕರ ಬಗ್ಗೆ
Ganesh

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ