ಆ್ಯಪ್ನಗರ

ಪುನೀತ್‌ಗೆ ನುಡಿನಮನ, ನೇತ್ರದಾನಕ್ಕೆ ನೋಂದಣಿ

ಸಮಾಜ ಕಟ್ಟುವ ಕಾಯಕದಲ್ಲಿಎಲೆಮರೆ ಕಾಯಿಯಂತೆ ನೆರವಾಗಿದ್ದ ನಟ ಪುನೀತ್‌ ರಾಜ ಕುಮಾರ್‌ ಅವರು ನಡೆಸುತ್ತಿದ್ದ ಸೇವಾ ಕಾರ್ಯಗಳು ಸ್ವತಃ ಅವರ ಕುಟುಂಬದ ಸದಸ್ಯರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲಎಂಬುದು ಅವರ ಸರಳತೆ ಹಾಗೂ ಆದರ್ಶಪ್ರಾಯ ಜೀವನಕ್ಕೆ ನಿದರ್ಶನವಾಗಿದೆ

Vijaya Karnataka 13 Nov 2021, 7:00 pm
ನಂಜನಗೂಡು: ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಕನಸು ಹೊಂದಿದ್ದ ಸಾಮಾಜಿಕ ಕಳಕಳಿಯ ಚಲನ ಚಿತ್ರನಟ ಪುನೀತ್‌ ರಾಜಕುಮಾರ್‌ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಬಿ ಹರ್ಷವರ್ಧನ್‌ ಹೇಳಿದರು.
Vijaya Karnataka Web ಪುನೀತ್‌ ರಾಜ್‌ಕುಮಾರ್
ಪುನೀತ್‌ ರಾಜ್‌ಕುಮಾರ್


ಅವರು ಶನಿವಾರ ನಗರದ ಯಾತ್ರಿ ಭವನದಲ್ಲಿಅಭಿಮಾನಿಗಳು ಏರ್ಪಡಿಸಿದ್ದ ಪುನೀತ್‌ ರಾಜಕುಮಾರ್‌ ನುಡಿ ನಮನ, ಗೀತ ಗಾಯನ ಹಾಗೂ ನೇತ್ರದಾನ ನೋಂದಣಿ ಅಭಿಯಾನ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.

ನಾಡು ನುಡಿ, ನೆಲ ಜಲ, ಶಿಕ್ಷಣ, ಬಡ ಮಕ್ಕಳ ಕಲ್ಯಾಣಕ್ಕಾಗಿ ಅಹರ್ನಿಶಿಯಾಗಿ ಸೇವೆ ಸಲ್ಲಿಸುತ್ತಾ ಸಮಾಜ ಕಟ್ಟುವ ಕಾಯಕದಲ್ಲಿಎಲೆಮರೆ ಕಾಯಿಯಂತೆ ನೆರವಾಗಿದ್ದ ನಟ ಪುನೀತ್‌ ರಾಜ ಕುಮಾರ್‌ ಅವರು ನಡೆಸುತ್ತಿದ್ದ ಸೇವಾ ಕಾರ್ಯಗಳು ಸ್ವತಃ ಅವರ ಕುಟುಂಬದ ಸದಸ್ಯರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲಎಂಬುದು ಅವರ ಸರಳತೆ ಹಾಗೂ ಆದರ್ಶಪ್ರಾಯ ಜೀವನಕ್ಕೆ ನಿದರ್ಶನವಾಗಿದೆ ಎಂದರು.

Puneeth: 'ಸಾಮ್ರಾಟನೊಬ್ಬನ ಸರಳತೆ ಕಂಡು ನಿಜಕ್ಕೂ ಆಶ್ಚರ್ಯವಾಯಿತು..'- ಸಂಭಾಷಣೆಕಾರ ಮಾಸ್ತಿ

ಡಾ.ರಾಜಕುಮಾರ್‌ ನಂತರ ಪುನೀತ್‌ ರಾಜಕುಮಾರ್‌ ಅವರಲ್ಲಿ ಅಭಿಮಾನಿಗಳು ಅಣ್ಣಾವ್ರನ್ನು ಕಾಣುತ್ತಿದ್ದರು. ಇದೀಗ ಅವರ ಅಗಲಿಕೆಯಿಂಡ ಇಡೀ ನಾಡು ಶೋಕಸಾಗರದಲ್ಲಿ ಮುಳುಗಿದೆ. ಅವರು ಮಾಡಿದ ದಾನ ಧರ್ಮ ಹಾಗೂ ನೆಲ, ಜಲ, ಭಾಷೆ ಬಗ್ಗೆ ಇದ್ದ ಬದ್ಧತೆ ಹಾಗೂ ಕಾಳಜಿ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಎನ್‌.ಕೇಶವಮೂರ್ತಿ ಮಾತನಾಡಿ, ಪುನೀತ್‌ರಾಜಕುಮಾರ್‌ ಬಾಲನಟನಾಗಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿದ್ದರು. ನಂತರ ನಾಯಕನಟನಾಗಿ ತಮ್ಮ ತಂದೆ ರಾಜಕುಮಾರ್‌ ಅವರಂತೆ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡಿ ಕೋಟ್ಯಾಂತರ ಜನರ ಅಭಿಮಾನಕ್ಕೆ ಪಾತ್ರರಾಗಿದ್ದವರು ಎಂದರು.

154 ಜನರಿಂದ ನೇತ್ರದಾನ

ಪುನೀತ್‌ ರಾಜಕುಮಾರ್‌ ಅವರಿಂದ ಪ್ರೇರೇಪಿತರಾದ 154 ಜನರು ನೇತ್ರದಾನ ನೋಂದಣಿ ಮಾಡಿಸುವ ಮೂಲಕ ಗಮನ ಸೆಳೆದರು. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕರು, ಕಾರ್ಮಿಕರು ನೋಂದಣಿ ಮಾಡಿಸಿ ಪುನೀತ್‌ರಾಜಕುಮಾರ್‌ ಅವರಿಗೆ ಕಂಬನಿ ಮಿಡಿದರು. ಇದೇ ವೇಳೆ ಗಾಯಕರು ಗೀತ ಗಾಯನದೊಂದಿಗೆ ಪುನೀತ್‌ಗೆ ನಮನ ಸಲ್ಲಿಸಿದರು.

ಅಪ್ಪು ಮುದ್ದಾಡಿದ್ದ ಸಕ್ರೆಬೈಲು ಆನೆ ಮರಿಗೆ ಪುನೀತ್‌ ಹೆಸರು..!

ಇನ್ನು ನಂಜನಗೂಡಿಗೂ, ಪುನೀತ್‌ರಾಜ್‌ಕುಮಾರ್‌ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇರುವುದರಿಂದ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡುವಂತೆ ಕಾರ್ಯಕ್ರಮದಲ್ಲಿಅಭಿಮಾನಿಗಳು ಶಾಸಕ ಬಿ.ಹರ್ಷವರ್ಧನ್‌ ಅವರಿಗೆ ಮನವಿ ಸಲ್ಲಿಸಿದರು. ಈ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಹರ್ಷವರ್ಧನ್‌ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪುನೀತ್‌ರಾಜಕುಮಾರ್‌ ಸೋದರ ಮಾವ ಎಸ್‌.ಎ.ಶ್ರೀನಿವಾಸ್‌, ಪುನೀತ್‌ ನಿಕಟವರ್ತಿ ಕಾಳಿಹುಂಡಿ ಪ್ರಭಾಕರ್‌, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್‌.ಆರ್‌.ಕೃಷ್ಣಪ್ಪಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ