ಆ್ಯಪ್ನಗರ

ಮೈಸೂರು-ಚೆನ್ನೈ ನಡುವೆ ನಿತ್ಯ ಬೆಳಿಗ್ಗೆ ಟ್ರೂಜೆಟ್ ಏರ್ ಲೈನ್ಸ್ ವಿಮಾನ ಸೇವೆ ಆರಂಭ

ಇತ್ತೀಚೆಗೆ ಮೈಸೂರಿನಿಂದ ಹಲವು ಹೊಸ ವಿಮಾನ ಸೇವೆ ಆರಂಭವಾಗಿದ್ದು, ಶುಕ್ರವಾರ ಈ ಸಾಲಿಗೆ ಮತ್ತೊಂದು ವಿಮಾನ ಸೇವೆ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಶಿರಡಿ-ಬೆಳಗಾವಿ ನಗರಗಳಿಗೆ ಮೈಸೂರಿನಿಂದ ಮತ್ತೆ ಎರಡು ವಿಮಾನಗಳ ಹಾರಾಟಕ್ಕೆ ಟ್ರೂಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಆಸಕ್ತಿ ತೋರಿಸಿದೆ.

Vijaya Karnataka Web 15 Nov 2019, 3:08 pm
ಮೈಸೂರು: ಇಂದಿನಿಂದ ಮೈಸೂರು-ಚೆನ್ನೈ ನಡುವೆ ನಿತ್ಯ ಬೆಳಿಗ್ಗೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನವು (ಎಟಿಆರ್-72) ಹಾರಾಟ ಆರಂಭಿಸಿದ್ದು ಇದಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಶುಕ್ರವಾರ ಚಾಲನೆ ನೀಡಿದರು.
Vijaya Karnataka Web mysore


ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈಗಾಗಲೇ ಮೈಸೂರು-ಚೆನ್ನೈ ನಡುವೆ ಒಂದು ವಿಮಾನ ಸಂಜೆ ವೇಳೆ ಸಂಚರಿಸುತ್ತಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಮತ್ತೊಂದು ವಿಮಾನವು ಪ್ರತಿದಿನ ಬೆಳಿಗ್ಗೆ ಚೆನ್ನೈ ಟ್ರೂಜೆಟ್ ವಿಮಾನ ಹಾರಾಟ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿರಡಿ-ಬೆಳಗಾವಿ ನಗರಗಳಿಗೆ ಮೈಸೂರಿನಿಂದ ಮತ್ತೆ ಎರಡು ವಿಮಾನಗಳ ಹಾರಾಟಕ್ಕೆ ಟ್ರೂಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಆಸಕ್ತಿ ತೋರಿಸಿದೆ. ಇದಕ್ಕಾಗಿ ಈಗಾಗಲೇ ಸಂಸ್ಥೆ ಸಮೀಕ್ಷೆ ನಡೆಸಿವೆ. ಇದೇ ತಿಂಗಳು ಅಂತ್ಯ ಅಂದರೆ ನವೆಂಬರ್ ಕೊನೆ ವೇಳೆಗೆ ಈ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಉತ್ತರಕರ್ನಾಟಕ ಭಾಗದ ವರ್ತಕರು, ಉದ್ದಿಮೆದಾರರನ್ನು ಗುರಿಯಾಗಿಸಿಕೊಂಡು ಎಂದು ತಿಳಿಸಿದ್ದಾರೆ.

ಇಂದು ಆರಂಭಗೊಂಡ ಹೊಸ ವಿಮಾನ ಚೆನ್ನೈ ನಗರದಿಂದ ಬೆಳಿಗ್ಗೆ 6.50ಕ್ಕೆ ಹೊರಡಲಿದ್ದು, ಬೆಳಿಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅದೇ ವಿಮಾನ ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು, ಚೆನ್ನೈ ನಗರಕ್ಕೆ ಬೆಳಿಗ್ಗೆ 10ಗಂಟೆಗೆ ತಲುಪಲಿದೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ನಂತರ ಸೇವೆ ಒದಗಿಸುತ್ತಿರುವ ಪ್ರಥಮ ವಿಮಾನ ಇದಾಗಿದ್ದು, ಸರ್ಕಾರದ ಯಾವುದೇ ಸಬ್ಸಿಡಿ ಇಲ್ಲದೇ ಹಾರಾಟ ಸೇವೆ ಒದಗಿಸಲಿದೆ. ಬೆಳಗಿನ ಫ್ಲೈಟ್ ಗೆ ಭಾರೀ ಬೇಡಿಕೆ ಇದ್ದು, ಹಾಗಾಗಿ ಈ ವಿಮಾನವನ್ನು ಆರಂಭಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ