ಆ್ಯಪ್ನಗರ

ಮಕ್ಕಳ ಭವಿಷ್ಯ ಉತ್ತಮ ಪಡಿಸಲು ಪ್ರಯತ್ನಿಸಿ

ಗುಣಮಟ್ಟದ ಶಿಕ್ಷ ಣ ನೀಡುವ ಜತೆಗೆ ಕ್ರಿಯಾತ್ಮಕ ಕಲಿಕೆಗೆ ಒತ್ತು ನೀಡುವ ಮೂಲಕ ಮಕ್ಕಳ ಭವಿಷ್ಯ ಉತ್ತಮ ಪಡಿಸಲು ಶಿಕ್ಷ ಕರು ಪ್ರಯತ್ನಿಸಬೇಕು ಎಂದು ಶಾಸಕ ಬಿ.ಹರ್ಷವರ್ಧನ್‌ ಸಲಹೆ ನೀಡಿದರು.

Vijaya Karnataka 6 Sep 2018, 5:00 am
ನಂಜನಗೂಡು : ಗುಣಮಟ್ಟದ ಶಿಕ್ಷ ಣ ನೀಡುವ ಜತೆಗೆ ಕ್ರಿಯಾತ್ಮಕ ಕಲಿಕೆಗೆ ಒತ್ತು ನೀಡುವ ಮೂಲಕ ಮಕ್ಕಳ ಭವಿಷ್ಯ ಉತ್ತಮ ಪಡಿಸಲು ಶಿಕ್ಷ ಕರು ಪ್ರಯತ್ನಿಸಬೇಕು ಎಂದು ಶಾಸಕ ಬಿ.ಹರ್ಷವರ್ಧನ್‌ ಸಲಹೆ ನೀಡಿದರು.
Vijaya Karnataka Web try to make the child prospects better
ಮಕ್ಕಳ ಭವಿಷ್ಯ ಉತ್ತಮ ಪಡಿಸಲು ಪ್ರಯತ್ನಿಸಿ


ಬುಧವಾರ ನಗರದ ಜೆಎಸ್‌ಎಸ್‌ ಮಂಗಳ ಮಂಟಪದಲ್ಲಿ ಶಿಕ್ಷ ಣ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷ ಕರ ದಿನಾಚರಣೆ, ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷ ಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಹೀಗಾಗಿ ಪ್ರತಿಯೊಬ್ಬರಿಗೂ ಕಡ್ಡಾಯ ಉಚಿತ ಶಿಕ್ಷ ಣ ಲಭ್ಯವಾಗುವಂತೆ ಶಿಕ್ಷ ಕರು ನೋಡಿಕೊಳ್ಳಬೇಕು. ಇನ್ನು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಮೂಲಕ ಸರ್ವರಿಗೂ ಶಿಕ್ಷ ಣದ ಲಾಭ ದೊರಕುವಂತೆ ನೋಡಿಕೊಳ್ಳಬೇಕು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಶಿಕ್ಷ ಕರ ಕೊಡುಗೆ ಮಹತ್ತರವಾಗಿದ್ದು ಬಸವಣ್ಣ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಹಾಗೂ ಜ್ಯೋತಿ ಬಾಪುಲೆಯವರು ಸಮಾನ ಶಿಕ್ಷ ಣಕ್ಕಾಗಿ ಹೋರಾಟ ನಡೆಸಿದರು. ಅವರ ಆಶಯ ಈಡೇರಬೇಕಾದಲ್ಲಿ ಕಡ್ಡಾಯ ಹಾಗೂ ಉಚಿತ ಶಿಕ್ಷ ಣ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಬೇಕು. ನಂಜನಗೂಡು ತಾಲೂಕಿನ ಶೈಕ್ಷ ಣಿಕ ಗುಣಮಟ್ಟವನ್ನು ಹೆಚ್ಚಳ ಮಾಡುವ ಸಲುವಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ'' ಎಂದು ಹೇಳಿದರು.

ರಾಜಕೀಯ ಗುರುವಿಗೆ ನಮನ:
ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷ ಕರ ಪ್ರೇರಣೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರಾಥಮಿಕ ಶಿಕ್ಷ ಣದಿಂದ ಉನ್ನತ ಶಿಕ್ಷ ಣದವರೆಗೆ ನನಗೆ ಶಿಕ್ಷ ಣ ಹಾಗೂ ಮಾರ್ಗದರ್ಶನ ನೀಡಿದ ಗುರುಗಳ ಸಹಕಾರದಿಂದ ಸಾಕಷ್ಟು ನೆರವಾಗಿದೆ. ಹೀಗಾಗಿ ಅವರನ್ನು ತುಂಬು ಹೃದಯದಿಂದ ಶಿಕ್ಷ ಕರ ದಿನದಂದು ಸ್ಮರಿಸಿಕೊಳ್ಳುತ್ತೇನೆ. ಇನ್ನು ಮಾಜಿ ಸಚಿವ ವಿ.ಶ್ರೀನಿವಾಸ್‌ಪ್ರಸಾದ್‌ ನನಗೆ ರಾಜಕೀಯ ಗುರುವಾಗಿದ್ದು ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶ ಮಾಡಿರುವ ನಾನು ಅವರ ಹಾದಿಯಲ್ಲೇ ಸಾಗುವ ಸಂಕಲ್ಪವನ್ನು ಹೊಂದಿದ್ದೇನೆ. ಇನ್ನು ರಾಜಕೀಯ ಗುರುವಿಗೆ ಗೌರವ ಸಲ್ಲಿಸುವ ಸಲುವಾಗಿ ಶಿಕ್ಷ ಕರ ದಿನದಂದೇ ನನ್ನ ಶಾಸಕರ ಕಚೇರಿಯನ್ನು ಉದ್ಘಾಟಿಸುವ ಮೂಲಕ ಸಾರ್ವಜನಿಕರ ಕೆಲಸ ಕಾರ‍್ಯಗಳಿಗೆ ಕಚೇರಿ ಲಭ್ಯವಾಗುವಂತೆ ನೋಡಿಕೊಂಡಿದ್ದೇನೆ ಎಂದು ತಿಳಿಸಿದರು.

ಕಾರ‍್ಯಕ್ರಮದಲ್ಲಿ ತಾಲೂಕಿನ 29 ನಿವೃತ್ತ ಶಿಕ್ಷ ಕರು, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷ ಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಜಿ.ಪಂ.ಸದಸ್ಯರಾದ ಮಂಗಳಾ ಸೋಮಶೇಖರ್‌, ಬಿ.ಎನ್‌.ಸದಾನಂದ್‌, ತಾ.ಪಂ.ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್‌, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಶಿವಣ್ಣ, ಕುಂಬ್ರಳ್ಳಿ ಸುಬ್ಬಣ್ಣ, ಜಿ.ಪಂ.ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ, ತಾ.ಪಂ.ಸದಸ್ಯರಾದ ಎಚ್‌.ಎಂ.ಮೂಗಶೆಟ್ಟಿ, ಸಿ.ಎಂ.ಮಹದೇವಯ್ಯ, ಬಸವರಾಜು, ಬಿ.ಎಸ್‌.ರಾಮು, ಮಹದೇವನಾಯ್ಕ, ಕ್ಷೇತ್ರ ಶಿಕ್ಷ ಣಾಧಿಕಾರಿ ನಾರಾಯಣ್‌, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಮುದ್ದುಮಾದೇಗೌಡ, ಕಾರ್ಯದರ್ಶಿ ರಂಗನಾಥ್‌, ಬಿಆರ್‌ಸಿ ಕೆ.ಜಿ.ಮಹೇಶ್‌, ದೈಹಿಕ ಶಿಕ್ಷ ಣ ಪರಿವೀಕ್ಷ ಕ ಪಿ. ಮಧುರದಾಸ್‌, ಪ್ರೌಢಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ರವೀಶ್‌ಮೂರ್ತಿ, ಸರಕಾರಿ ನೌಕರರ ಸಂಘದ ಪ್ರಧಾನ ಕಾರ‍್ಯದರ್ಶಿ ಹರೀಶ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ