ಆ್ಯಪ್ನಗರ

ಸಾಲ ಮನ್ನಾ ಘೋಷಣೆಗೂ ಮುನ್ನಾ ಇಬ್ಬರು ರೈತರ ಆತ್ಮಹತ್ಯೆ

ರಾಜ್ಯ ಸರಕಾರ ಸಾಲ ಮನ್ನಾ ಘೋಷಣೆ ಮಾಡುವ ಕೆಲವೇ ಗಂಟೆಗೆ ಮುನ್ನ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಕ ಸುದ್ದಿಲೋಕ 22 Jun 2017, 9:00 am
ಸಾಲಿಗ್ರಾಮ: ರಾಜ್ಯ ಸರಕಾರ ಸಾಲ ಮನ್ನಾ ಘೋಷಣೆ ಮಾಡುವ ಕೆಲವೇ ಗಂಟೆಗೆ ಮುನ್ನ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
Vijaya Karnataka Web two farmers committed suicide before the loan waiver announcement
ಸಾಲ ಮನ್ನಾ ಘೋಷಣೆಗೂ ಮುನ್ನಾ ಇಬ್ಬರು ರೈತರ ಆತ್ಮಹತ್ಯೆ


ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕು ಹರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಲೇ.ಸಣ್ಣೇಗೌಡರ ಪುತ್ರ ಚಂದ್ರೇಗೌಡ (46) ಮೃತರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ನಮ್ಮ ತಂದೆ ತಮಗೆ ಸೇರಿದ ಎರಡೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ವ್ಯವಸಾಯಕ್ಕೆಂದು ಸಮೀಪದ ಹೊಸ ಅಗ್ರಹಾರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಲಕ್ಷ ಮತ್ತು ಲೇವಾದೇವಿದಾರರಿಂದ ಮೂರು ಲಕ್ಷ ರೂ.ಅನ್ನು ಕೈ ಸಾಲ ಮಾಡಿದ್ದರು. ಬರದಿಂದ ಬೆಳೆ ಸಂಪೂರ್ಣವಾಗಿ ಒಣಗಿದ ಕಾರಣ ಮನನೊಂದಿದ್ದರು. ಬುಧವಾರ ಮನೆಯಲ್ಲಿ ಕುಟುಂಬದವರ ಜತೆಯಲ್ಲಿ ಉಪಾಹಾರ ಸೇವಿಸಿ ಜಮೀನಿಗೆ ಹೋಗಿ ಬರುವುದಾಗಿ ಹೇಳಿದ ಅವರು ಬೆಳಗ್ಗೆ 8.30ರ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂದು ಮೃತ ಚಂದ್ರೇಗೌಡರ ಪುತ್ರ ಅಶೋಕ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸರಕಾರ ಬೆಳೆಸಾಲ ಮನ್ನಾ ಘೋಷಣೆ ಮಾಡಿದ ದಿನವೇ ಸಾಲಬಾಧೆಯಿಂದ ಚಂದ್ರೇಗೌಡರು ಆತ್ಮಹತ್ಯೆ ಶರಣಾಗಿರು ವುದು ನಮಗೆ ಬೇಸರ ಮೂಡಿಸಿದೆ ಎಂದು ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದರು. ಘಟನೆ ಸಂಬಂಧ ಸಾಲಿಗ್ರಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳವಳ್ಳಿ ವರದಿ: ಸಾಲಬಾಧೆ ತಾಳಲಾರದೆ ಯುವ ರೈತರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದ ನಂಜುಂಡೇಗೌಡ ಅವರ ಪುತ್ರ ಸಾಗರ್‌(23)ಮೃತರು.
‘‘ತಮಗೆ ಒಟ್ಟು 2 ಎಕರೆ 20 ಗುಂಟೆ ಜಮೀನಿದ್ದು, ಮಗ ಸಾಗರ್‌ ಹಿಪ್ಪುನೇರಳೆ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದ. ಸಹಕಾರ ಸಂಘದಲ್ಲಿ 1.20 ಲಕ್ಷ ರೂ.ಒಡವೆ ಸಾಲ ಸೇರಿದಂತೆ ಒಟ್ಟು 6 ಲಕ್ಷ ರೂ. ಸಾಲವನ್ನು ಮಾಡಿದ್ದ. ಜತೆಗೆ ಬೋರ್‌ವೆಲ್‌ ತೆಗೆಸಲು ಪ್ರಯತ್ನಿಸಿ ವಿಫಲಗೊಂಡಿದ್ದ. ಇದರಿಂದ ನೊಂದು ಬುಧವಾರ ಬೆಳಗ್ಗೆ 7ರ ಸುಮಾರಿಗೆ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ,’’ ಎಂದು ಮೃತರ ತಂದೆ ನಂಜುಂಡೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ