ಆ್ಯಪ್ನಗರ

ಗ್ರಾಮ ವಾಸ್ತವ್ಯ: ವಿಕ ಫೋಕಸ್‌ಗೆ ಸಿಎಂ ಮೆಚ್ಚುಗೆ

ಗ್ರಾಮ ವಾಸ್ತವ್ಯದ ಬಗ್ಗೆ ವಿಜಯ ಕರ್ನಾಟಕದಲ್ಲಿ ಮಂಗಳವಾರ ಪ್ರಕಟವಾಗಿರುವ ವರದಿ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

Vijaya Karnataka 19 Jun 2019, 5:00 am
ಕೆ.ಆರ್‌.ಪೇಟೆ: ಗ್ರಾಮ ವಾಸ್ತವ್ಯದ ಬಗ್ಗೆ ವಿಜಯ ಕರ್ನಾಟಕದಲ್ಲಿ ಮಂಗಳವಾರ ಪ್ರಕಟವಾಗಿರುವ ವರದಿ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
Vijaya Karnataka Web village stay cm appreciation for vk focus
ಗ್ರಾಮ ವಾಸ್ತವ್ಯ: ವಿಕ ಫೋಕಸ್‌ಗೆ ಸಿಎಂ ಮೆಚ್ಚುಗೆ


ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ವಿಡಿಯೋ ತೆಗೆದು ಆತ್ಮಹತ್ಯೆಗೆ ಶರಣಾದ ಸುರೇಶ್‌ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

''ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಗಳಲ್ಲಿ ತರಹೇವಾರಿ ಸುದ್ದಿಗಳು ಬರುತ್ತಿವೆ. ವಿದ್ಯಾರ್ಥಿಗಳು 16 ಕಿ.ಮೀ. ನಡೆಯಬೇಕಿದೆ... ಗ್ರಾಮಗಳಿಗೆ ರಸ್ತೆಗಳಿಲ್ಲ.. ಮುಂತಾದ ಅವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ಇವುಗಳಿಗೆ ನಾವು ಕಾರಣವೇ? 70 ವರ್ಷ ಆಡಳಿತ ನಡೆಸಿದವರಾರ‍ಯರು? ನಾನು ಅಥವಾ ನನ್ನ ಕುಟುಂಬ ನಾಲ್ಕಾರು ವರ್ಷ ಆಡಳಿತ ನಡೆಸಿದೆಯಷ್ಟೇ'' ಎಂದು ಹೇಳಿದರು.

ಆದರೆ, ವಿಜಯ ಕರ್ನಾಟಕದಲ್ಲಿ ಇಂದು ಪ್ರಕಟವಾಗಿರುವ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಗಳ ವರದಿ ಪ್ರಕಟಿಸಿ, ಸಮಸ್ಯೆ ಪರಿಹಾರಕ್ಕೆ ಸರಕಾರದ ಗಮನ ಸೆಳೆದಿರುವುದನ್ನು ಶ್ಲಾಘಿಸಿ, ''ಈ ರೀತಿ ವರದಿ ನೀಡಿದರೆ ಪರಿಹಾರಕ್ಕೆ ಯತ್ನಿಸಲು ನಮಗೂ ನೆರವಾಗುತ್ತದೆ ''ಎಂದರು.

''ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದೇ ಜನರಲ್ಲಿ ಆತ್ಮಸ್ಥೈರ್ಯ ತುಂಬಲು. ಆದರೆ, ಗ್ರಾಮ ವಾಸ್ತವ್ಯ ಬಿಟ್ಟು ಬರ ವೀಕ್ಷ ಣೆ ಮಾಡಿ ಎಂದು ಹೇಳುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಮತ್ತೊಂದು ಕಡೆ ಅಧಿಧಿಕಾರಿಗಳಿಗೆ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ. ಆದರೆ, ನಾವು ಪ್ರತಿಪಕ್ಷ ದವರು ಸರಕಾರವನ್ನು ಟೀಕಿಸಬೇಕಲ್ಲ. ಅದಕ್ಕೆ ಟೀಕೆ ಮಾಡುತ್ತಿದ್ದೇವೆ ಎಂದೂ ಹೇಳುತ್ತಾರೆ. ಇದರಿಂದ ಯಾರು ಡ್ರಾಮಾ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ,''ಎಂದು ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ