ಆ್ಯಪ್ನಗರ

ಕೋವಿಡ್ ಹೆಸರಲ್ಲಿ ದುಡ್ಡು ಹೊಡೆದಿದ್ದು ಸಾಕು, ಇನ್ಮುಂದೆ ಯಾವ ರೂಲ್ಸ್ ಬೇಡ: ಕುಟುಕಿದ ಹಳ್ಳಿಹಕ್ಕಿ

ಪ್ರಧಾನಿ ಮೋದಿ ಹೇಳಿದಂತೆ ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ . ಕೊರೊನಾ ಜತೆಗೆ ಜೀವನ ಸಾಗಿಸಲೇಬೇಕು. ಜನರ ಜೀವನಕ್ಕೆ ತೊಂದರೆಯಾದರೆ ಅದಕ್ಕೆ ಸರಕಾರವೇ ಹೊಣೆ.

Lipi 21 Jan 2022, 6:06 pm
ಮೈಸೂರು: ಕೋವಿಡ್ ಹೆಸರಲ್ಲಿ ಕೆಲವರು ದುಡ್ಡು ಮಾಡಿದ್ದು ಸಾಕು. ಕೆಲವರು ಕೋವಿಡ್ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ. ವೈದ್ಯರು ಸಾಲ ಮಾಡಿದ್ದನ್ನು ಎಲ್ಲವನ್ನೂ ತೀರಿಸಿಕೊಂಡಿದ್ದಾರೆ. ಸರಕಾರ ಈ ಬಗ್ಗೆ ಹೆಚ್ಚು ನಿಗಾ ವಹಿಸಿ ಕೋವಿಡ್ ಹೆಸರಲ್ಲಿ ನಡೀತಿರೋ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್ ಹೇಳಿದರು.
Vijaya Karnataka Web vishwanath slams bjp govt over covid guidelines
ಕೋವಿಡ್ ಹೆಸರಲ್ಲಿ ದುಡ್ಡು ಹೊಡೆದಿದ್ದು ಸಾಕು, ಇನ್ಮುಂದೆ ಯಾವ ರೂಲ್ಸ್ ಬೇಡ: ಕುಟುಕಿದ ಹಳ್ಳಿಹಕ್ಕಿ


ಮೈಸೂರಲ್ಲಿ ಸುದ್ದಿಗಾರರೊಂದಿಗೆ ಎಚ್‌ ವಿಶ್ವನಾಥ್‌ ತಿಳಿಸಿದರು.

ಮೂರನೇ ಅಲೆ ಮೊದಲ ರೀತಿ ಇಲ್ಲ. ಇದು ಆರೋಗ್ಯದ ವಿಚಾರ. ಸರಕಾರ ಖಾಸಗಿ ಆಸ್ಪತ್ರೆ ಉಳ್ಳವರಿಗೆ ಅನುಕೂಲ ಮಾಡಲು ಸರಕಾರ ಹೊರಟಿದೆ. ಡಾ ಸುಧಾಕರ್ ಹಲ್ಲಿನ ವೈದ್ಯರು. ಜನರಿಗಿಂತ ತಜ್ಞರು ಯಾರು ಇಲ್ಲ. ಸರಕಾರ ಕೆಲವು ನಿಬಂಧನೆಗಳನ್ನು ಹಾಕಲಿ. ಆದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್, ನೈಟ್ ಕರ್ಪ್ಯೂ ಬೇಡ. ಆಯಾ ಜಿಲ್ಲೆಯ ಪರಿಸ್ಥಿತಿಗೆ ತಕ್ಕಂತೆ ಡಿಸಿಗೆ ನಿರ್ಧಾರ ಮಾಡಲು ಬಿಡಿ ಎಂದು ವಿಶ್ವನಾಥ್ ಸಲಹೆ ನೀಡಿದರು.

ಸದ್ಯಕ್ಕೆ ಪ್ರವಾಸಿ ತಾಣಗಳನ್ನು ಬಂದ್ ಮಾಡುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ: ಎಸ್‌ಟಿ ಸೋಮಶೇಖರ್‌

ಕೋವಿಡ್ ಹೆಸರು ಬಳಿಸಿಕೊಂಡು ಸಾಕಷ್ಟು ಅವ್ಯವಹಾರ ನಡೆದಿದೆ. ಇನ್ಮುಂದೆ ಜನರಿಗೆ ಹೊರೆಯಾಗುವಂತಹ ಯಾವುದೇ ನಿರ್ಣಯ ಬೇಡ. ಸುರಕ್ಷಿತವಾಗಿ ಬದುಕೋದು ಜನರಿಗೆ ಗೊತ್ತಿದೆ. ಬಲವಂತದ ಹೇರಿಕೆಗಳು ಬೇಡ. ಪ್ರಧಾನಿ ಮೋದಿ ಹೇಳಿದಂತೆ ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ . ಕೊರೊನಾ ಜತೆಗೆ ಜೀವನ ಸಾಗಿಸಲೇಬೇಕು. ಜನರ ಜೀವನಕ್ಕೆ ತೊಂದರೆಯಾದರೆ ಅದಕ್ಕೆ ಸರಕಾರವೇ ಹೊಣೆ. ಹೀಗಾಗಿ ಜನರ ಹಿತದೃಷ್ಟಿ ಕಾಪಾಡಬೇಕಾಗಿರೋದು ಸರಕಾರದ ಕರ್ತವ್ಯ ಎಂದು ತಿಳಿಸಿದರು. ನೈಟ್

ಕರ್ಪ್ಯೂ ವೀಕೆಂಡ್ ಕರ್ಪ್ಯೂ ಯಾರಿಗೆ.?


ಎಲ್ಲಾ ಅಂಗಡಿಗಳು ತೆರೆದು ಜನ ಬರಬಾರದು ಅಂತಾರೆ. ಯಾರಾದರೂ ಹುಚ್ಚ ಈ ರೀತಿ ಆದೇಶ ಕೊಡುತ್ತಾರಾ? ಜನರು ಮಾತ್ರ ಆಚೆ ಬರಬಾರದು ಅಂದರೆ ಹೇಗೆ.? ನನಗೆ ಏನು ಅರ್ಥ ಆಗ್ತಾ ಇಲ್ಲ. ನಿಮಗೆ ಹೇಳುವವರು ಕೇಳುವವರು ಇಲ್ಲವಾ ? ಜನರನ್ನು ಗಾಬರಿ ಮಾಡಬೇಡಿ ಎಂದು ಸಲಹೆ ನೀಡಿದರು.

ಮೈಸೂರು ಪ್ರವಾಸಿ ತಾಣಗಳ ಬಂದ್ ಇಲ್ಲ.. 3ನೇ ಅಲೆ ಹೆಚ್ಚಾದ್ರೂ ಮೆಡಿಸಿನ್ಸ್ ಸ್ಟಾಕ್ ಇದೆ : ಸೋಮಶೇಖರ್

ಲೋಕಸೇವಾ ಆಯೋಗದ ಪಟ್ಟಿ ರದ್ದು ಮಾಡಲು ನ್ಯಾಯಾಲಯದ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಪಟ್ಟಿಯನ್ನು ವಜಾ ಮಾಡಿದೆ. ಹೈಕೋರ್ಟ್ ತೀರ್ಪನ್ನು ಸುಪ್ರಿಂ‌ಕೋರ್ಟ್ ಎತ್ತಿ ಹಿಡಿದಿದೆ. ಸುಪ್ರಿಂ ಕೋರ್ಟ್ ಮೇಲ್ಮನವಿಯನ್ನು ಸಹ ತಳ್ಳಿ ಹಾಕಲಾಗಿದೆ. ಎಲ್ಲಾ ಕೋರ್ಟ್‌ ಗಳು ಒಂದೇ ರೀತಿ ತೀರ್ಮಾನಗಳನ್ನು ನೀಡಿವೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ಜಾತಿ ದುಡ್ಡಿನಿಂದಲೇ ಆಯ್ಕೆಯಾಗಿದೆ. ಇವರನ್ನು ತೆಗೆದುಕೊಂಡು ಹೇಗೆ ಅಧಿಕಾರ ಮಾಡಲು ಸಾಧ್ಯ.? ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ