ಆ್ಯಪ್ನಗರ

ಬಿಜೆಪಿಯಿಂದ ಟಿಪ್ಪುವಿಗೆ ಅವಹೇಳನ: ಎಚ್‌.ವಿಶ್ವನಾಥ್‌

ವಿಕ ಸುದ್ದಿಲೋಕ ಹುಣಸೂರು ಟಿಪ್ಪುವಿನ ಮೇರು ವ್ಯಕ್ತಿತ್ವದ ಬಗ್ಗೆ ಬಿಜೆಪಿಯವರು ಮತ ಭೇಟೆಗಾಗಿ ಸುಳ್ಳು ಹೇಳುತ್ತಾ ಅವಹೇಳನ ಮಾಡುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್‌ ...

Vijaya Karnataka 11 Nov 2018, 5:00 am
ಹುಣಸೂರು: ಟಿಪ್ಪುವಿನ ಮೇರು ವ್ಯಕ್ತಿತ್ವದ ಬಗ್ಗೆ ಬಿಜೆಪಿಯವರು ಮತ ಭೇಟೆಗಾಗಿ ಸುಳ್ಳು ಹೇಳುತ್ತಾ ಅವಹೇಳನ ಮಾಡುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್‌. ವಿಶ್ವನಾಥ್‌ ತರಾಟೆ ತೆಗೆದುಕೊಂಡರು.
Vijaya Karnataka Web vote bank politics by bjp about tippu jayanthi issue says h vishwanath
ಬಿಜೆಪಿಯಿಂದ ಟಿಪ್ಪುವಿಗೆ ಅವಹೇಳನ: ಎಚ್‌.ವಿಶ್ವನಾಥ್‌


ನಗರದ ಅಂಬೇಡ್ಕರ್‌ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪ್ಪು ಷ್ಪಾರ್ಚನೆ ಮಾಡಿ ಮಾತನಾಡಿದರು.

''ಟಿಪ್ಪು ಅಧಿಕಾರ ಅವಧಿಯಲ್ಲಿ ಧರ್ಮ, ಜನಾಂಗ, ಜಾತಿ ಮೀರಿ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡ ಜನನಾಯಕ. ಕನ್ನಡ ಭಾಷೆ, ಗಡಿ ವಿಸ್ತರಣೆ ಮಾಡಿದ ಶೂರ. ಭಾರತ ಕಂಡ ಇಂತಹ ವ್ಯಕ್ತಿತ್ವವುಳ್ಳ ಮಹಾನ್‌ ನಾಯಕನನ್ನು ಇಂದಿನ ಬಿಜೆಪಿ ನಾಯಕರು ರಾಜಕಾರಣಕ್ಕೆ ಬೆಸೆದಿದ್ದಾರೆ,'' ಎಂದು ಟೀಕಿಸಿದರು.

''ಬಿಜೆಪಿಯವರು ಈತ ಮುಸ್ಮಿಂ ಎಂಬ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ಆದರೆ, ಈತ ನಿಜವಾಗಿಯೂ ಹಿಂದೂ ವಿರೋಧಿಯಾಗಿದ್ದ ಎಂಬುದಕ್ಕೆ ಎಲ್ಲೂ ದಾಖಲೆಗಳಿಲ್ಲ, ರಾಜಕಾರಣಕ್ಕಾಗಿ ಕತೆ ಕಟ್ಟಿದ್ದಾರೆ. ತನ್ನ ಆಡಳಿತದಲ್ಲಿ ಹಿಂದೂ ದೇವಾಲಯಗಳಿಗೆ ಆದ್ಯತೆ ನೀಡುತ್ತಿದ್ದ, ಹಿಂದೂಗಳನ್ನೇ ಮಂತ್ರಿಯಾಗಿಸಿಕೊಂಡಿದ್ದ, ಇದೆಲ್ಲ ಗೊತ್ತಿದ್ದೂ ಟೀಕೆ ಏಕೆಂದು,'' ಪ್ರಶ್ನಿಸಿದರು.

ಮೂರು ಸಿಎಂ ಪ್ರಶಂಸೆ: ''ಬಿಜೆಪಿಯ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಟಿಪ್ಪುವಿನ ಸಾಧನೆ ಕುರಿತು ಬದಲಾವಣೆಯ ಹರಿಕಾರ ಎಂಬ ಪುಸ್ತಕ ಬರೆಸುತ್ತಾರೆ, ಮುನ್ನುಡಿ ಅವರೇ ಬರೆಯುತ್ತಾರೆ, ಇನ್ನು ಯಡಿಯೂರಪ್ಪ, ಸದಾನಂದಗೌಡ ಟಿಪ್ಪು ವೇಷ ಹಾಕಿಕೊಂಡು ಖಡ್ಗ ಝಳಪಿಸಿ ಟಿಪ್ಪು ಮಹಾವೀರ ಎಂದು ಹೇಳಿದ್ದ ಅವರುಗಳೇ ವಿರೋಧ ಮಾಡುತ್ತಿದ್ದೀರಾ'' ಎಂದು ಹೇಳಿದರು.

ಫೋಟೋ ತೆಗೆಸಿ ನೋಡೋಣ: ''ನಿಮ್ಮ ಕೈಮುಗಿದು ಪ್ರಾರ್ಥಿಸುವೆ, ದೊಡ್ಡ ನಾಯಕರಾದ ನೀವು ಸುಖಾಸುಮ್ಮನೆ ಟೀಕೆ ಮಾಡಿ ಜನಸಾಮಾನ್ಯರ ಮುಂದೆ ಸಣ್ಣವರಾಗಬೇಡಿ. ನೀವು ಕಣ್ಮುಚ್ಚಿಕೊಂಡು ಹೃದಯ ತೆರೆದು ಟಿಪ್ಪು ಆಡಳಿತವನ್ನೊಮ್ಮೆ ನೋಡಿ, ಈ ಹಿಂದೆ ನೀವೇ ಪ್ರೀತಿಯ ಮಾತುಗಳನ್ನಾಡಿ, ಇದೀಗ ಅವಹೇಳನಕಾರಿಯಾಗಿ ಮಾತನಾಡಬೇಡಿ, ಜನ ನಿಮ್ಮ ಮಾತುಗಳನ್ನು ನಂಬಲ್ಲ. ವೀರಪ್ಪಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ತಾವೇ ವಿಧಾನಸೌಧ ಸೇರಿದಂತೆ ಎಲ್ಲ ಕಚೇರಿಗಳಲ್ಲೂ ಝಾನ್ಸಿರಾಣಿ ಲಕ್ಷ್ಮಿಬಾಯಿ, ಟಿಪ್ಪುಸುಲ್ತಾನ್‌ ಫೋಟೋ ಹಾಕಿಸಿದ್ದೆ. ನಿಮಗೆ ತಾಕತ್ತಿದ್ದರೆ ತೆಗೆಸಿ ನೋಡೋಣ'' ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಮೋದಿ ಬಗ್ಗೆ ಟೀಕೆ: ''ಭಾರತ ಸರ್ವ ಧರ್ಮ, ಜಾತಿ-ಜನಾಂಗಗಳನ್ನು ಪ್ರೀತಿಸುವ ದೇಶ. ಆದರೆ, ಮೋದಿಯವರು ಬಡವರ ಬಗ್ಗೆ ಕಾರ‍್ಯಕ್ರಮ ಕೊಡುವ ಬದಲು ಊರ ಹೆಸರುಗಳನ್ನು ಬದಲಾಯಿಸಲು ಹೊರಟಿರುವ ನೀತಿ ಸರಿಯೇ, ಬಡವರ ಪ್ರಗತಿ ಬಗ್ಗೆ ನಿಮ್ಮ ಕಾರ‍್ಯಕ್ರಮವೇನು'' ಎಂದು ಪ್ರಶ್ನಿಸಿದರು.

ಕಾರ‍್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ