ಆ್ಯಪ್ನಗರ

ಮಹಾಮಳೆ ಪರಿಣಾಮ: ಮೈಸೂರಿನ ಎಲ್ಲಾ ಜಲಾಶಯಗಳಿಂದ ನೀರು ಹೊರ ಬಿಡಲು ಸಿದ್ಧತೆ!

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಎಲ್ಲಾ ಜಲಾಶಯಗಳು ಭಾಗಶಃ ಭರ್ತಿಯಾಗಿದ್ದು, ಜಲಾಶಯಗಳಿಂದ ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಸುತ್ತಮುತ್ತಲ ಭಾಗದ ಜನರಲ್ಲಿ ಭೀತಿ ಎದುರಾಗಿದೆ.

Vijaya Karnataka Web 7 Aug 2020, 8:00 pm
ಮೈಸೂರು: ನಗರದ ಸುತ್ತಮುತ್ತ ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಹೆಚ್‌ ಡಿ ಕೋಟೆ ತಾಲ್ಲೂಕಿನ 3 ಜಲಾಶಯಗಳು ಭಾಗಶಃ ಭರ್ತಿಯಾಗಿವೆ. ಹೀಗಾಗಿ ಮೂರು ಜಲಾಶಯಗಳಿಂದ ಮತ್ತಷ್ಟು ನೀರು ಹೊರ ಬಿಡುವ ಸಾಧ್ಯತೆ ಇದ್ದು ಸುತ್ತಮುತ್ತಲ ಭಾಗದ ಜನರಲ್ಲಿ ಭೀತಿ ಮೂಡಿಸಿದೆ.
Vijaya Karnataka Web kabini Reservoir
ಸಂಗ್ರಹ ಚಿತ್ರ


ಸದ್ಯ ಕಬಿನಿ ಹಾಗೂ ನುಗು ಜಲಾಶಯಗಳ ನೀರು ಈಗಾಗಲೇ ಹೊರಬಿಡಲಾಗುತ್ತಿದೆ. ತಾರಾಕ ಜಲಾಶಯ ಕೂಡ ಭರ್ತಿ ಹಂತ ತಲುಪಿದ್ದು ತಾರಾಕ ಜಲಾಶಯದಿಂದಲೂ ನೀರು ಹರಿಸುವ ಸಾಧ್ಯತೆ ಇದೆ.

ಕಾವೇರಿ ಕೊಳ್ಳದಲ್ಲಿ ಮಳೆರಾಯನ ಅಬ್ಬರಕ್ಕೆ ಜನ- ಜೀವನ ಅಸ್ತವ್ಯಸ್ತ: ಅನ್ನದಾತನಿಗೆ ಎದುರಾದ ಸಂಕಷ್ಟ!

ನುಗು ಜಲಾಶಯದಿಂದ 6,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ತಾರಕ ಹಾಗೂ ನುಗು ಜಲಾಶಗಳಿಂದ ಹೊರಬಿಡುವ ನೀರು ಕಪಿಲಾ ನದಿ ಸೇರುವುದರಿಂದ ಕಪಿಲಾ ನದಿಯ ಹರಿವಿನ ರಭಸ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ ಕೆಆರ್‌ಎಸ್‌ನಿಂದ 30 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಯಿತು. ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 113.85 ತಲುಪಿದೆ. ಕಾವೇರಿ ಕಣಿವೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನೀರಿನ ಒಳ ಮತ್ತು ಹೊರಹರಿವು ಮಾಡಲಾಗುತ್ತಿದೆ.

ನಂಜನಗೂಡಿನಲ್ಲಿ ಕಪಿಲಾ ನದಿ ಪ್ರವಾಹ ಭೀತಿ: ಕಬಿನಿ ಡ್ಯಾಂ ಹೊರಹರಿವು ಹೆಚ್ಚಾದ್ರೆ ಕಾದಿದೆ ಅಪಾಯ..!

ಹೀಗಾಗಿ 30 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಿಲ್ಲಾಡಳಿತ ಸೂಚಿಸಿದೆ. ಆದ್ದರಿಂದ ಕಾವೇರಿ ನದಿ ಪಾತ್ರದ ಕೆಳ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದ್ದು, ಹಲವೆಡೆ ಗಂಜಿ ಕೇಂದ್ರ ಸಹ ಆರಂಭಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ