ಆ್ಯಪ್ನಗರ

ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ ಪಂದ್ಯ: ಬೆಳಗಾವಿ ತಂಡಕ್ಕೆಪ್ರಶಸ್ತಿ

ರಾಜ್ಯ ಮಟ್ಟದ ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಬಾಲಕರು ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲೂ ಬೆಳಗಾವಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Vijaya Karnataka 11 Mar 2019, 5:00 am
ಮೈಸೂರು: ರಾಜ್ಯ ಮಟ್ಟದ ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಬಾಲಕರು ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲೂ ಬೆಳಗಾವಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Vijaya Karnataka Web wheelchair basketball match award to belgaum team
ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ ಪಂದ್ಯ: ಬೆಳಗಾವಿ ತಂಡಕ್ಕೆಪ್ರಶಸ್ತಿ


ನಗರದ ಎಸ್‌ಜೆಸಿಇ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ ಹಾಗೂ ಕರ್ನಾಟಕ ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಳಗಾವಿ ಮೊದಲ ಸ್ಥಾನ ಪಡೆದುಕೊಂಡಿತು. ಬೆಂಗಳೂರು, ಮೈಸೂರು ತಂಡ ಎರಡನೇ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಮೊದಲ ಸ್ಥಾನ ಪಡೆದರೆ, ಬೆಳಗಾವಿ ಬಿ, ಮೈಸೂರು ರನ್ನರ್‌ ಆಪ್‌ ಸ್ಥಾನಗಳಿಗೆ ಪಾತ್ರವಾಗಿವೆ.

ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಎಚ್‌.ಎಂ. ಬಾಂದವ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇತರೆ ಕ್ರೀಡೆಗಳಂತೆ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗೂ ಪೋ›ತ್ಸಾಹ ನೀಡಬೇಕು. ಅಂಗವೈಕಲ್ಯಕ್ಕಿಂತ ಸಾಧಿಸುವ ಮನಸ್ಸು ಮುಖ್ಯ. ಎಲ್ಲರಲ್ಲೂ ಪ್ರತಿಭೆಯಿದ್ದು, ಅದನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಬೇಕು ಎಂದರು.

ಪಂದ್ಯಾವಳಿಗೆ ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ 19 ಮಹಿಳಾ ತಂಡಗಳು ಹಾಗೂ 9 ಪುರುಷರ ತಂಡಗಳು ಭಾಗವಹಿಸಿದ್ದವು.

ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ರಂಗನಾಥಯ್ಯ, ಅದ್ವಿತ್‌ ಗ್ಲೋಬಲ್‌ ಮುಖ್ಯ ಅಧಿಕಾರಿ ಕೆ. ಅಶೋಕ್‌ಕುಮಾರ್‌, ಕರ್ನಾಟಕ ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ರಾಯ್‌ ಸೈಮನ್‌, ಜೆಎಸ್‌ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಬಿ.ಇಳಂಗೋವನ್‌, ವಿಶೇಷಚೇತನ ಕ್ರೀಡಾಪಟುಗಳಾದ ಸುನೀತಾ, ಧಾನಮ ಪಾಟೀಲ್‌ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ