ಆ್ಯಪ್ನಗರ

ಸಹಕಾರ ಸಚಿವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ? ಸಿಎಂ ನಡೆ ಅನುಮಾನಕ್ಕೆ ಎಡೆ ಮಾಡಿದೆ: ಎಂ ಲಕ್ಷ್ಮಣ್‌

ತಾವು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಜನರಿಗೆ ಏನೇನು ಯೋಜನೆ ನೀಡಿದ್ದೀರಿ ಎಂಬುದನ್ನು ಬಹಿರಂಗಗೊಳಿಸಬೇಕು. ಹಾಗೆಯೇ ನೀವು ಮುಖ್ಯಮಂತ್ರಿಯಾದ ಬಳಿಕ ಎಷ್ಟು ಕೋಟಿ ಸಾಲ ಮಾಡಿದ್ದಿರಿ? ಅದನ್ನು ಯಾವುದಕ್ಕೆ ಬಳಸಿದ್ದೀರಿ? ಸದ್ಯ ರಾಜ್ಯದ ಒಟ್ಟು ಸಾಲ 5 ಲಕ್ಷ ಕೋಟಿಗೂ ಅಧಿಕವಿದ್ದು, ಮೂರು ವರ್ಷದ ಬಿಜೆಪಿ ಅಧಿಕಾರದಲ್ಲೇ ಸುಮಾರು 2.50 ಲಕ್ಷ ಕೋಟಿ ಸಾಲ ಮಾಡಿರುವ ಉದ್ದೇಶವೇನು? ಎಂದು ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಷ್ಮಣ್‌ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

Vijaya Karnataka 18 Aug 2022, 4:14 pm

ಹೈಲೈಟ್ಸ್‌:

  • ಸಹಕಾರ ಸಚಿವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ?
  • ಅನುಮಾನಕ್ಕೆ ಎಡೆಮಾಡಿದ ಸಿಎಂ ನಡೆ
  • ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web M Laxman
ಮೈಸೂರು: ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್‌ ಅವರ ಇಲಾಖೆಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವುದಕ್ಕೆ ಅವರ ಪಕ್ಷದ ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸುತ್ತಾ ನಾವು ಸರಕಾರ ನಡೆಸುತ್ತಿಲ್ಲ, ಬದಲಾಗಿ ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರೂ ಸಿಎಂ ಬೊಮ್ಮಾಯಿ ಅವರು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎರಡು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ತಾವು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಜನರಿಗೆ ಏನೇನು ಯೋಜನೆ ನೀಡಿದ್ದೀರಿ ಎಂಬುದನ್ನು ಬಹಿರಂಗಗೊಳಿಸಬೇಕು. ಹಾಗೆಯೇ ನೀವು ಮುಖ್ಯಮಂತ್ರಿಯಾದ ಬಳಿಕ ಎಷ್ಟು ಕೋಟಿ ಸಾಲ ಮಾಡಿದ್ದಿರಿ? ಅದನ್ನು ಯಾವುದಕ್ಕೆ ಬಳಸಿದ್ದೀರಿ? ಸದ್ಯ ರಾಜ್ಯದ ಒಟ್ಟು ಸಾಲ 5 ಲಕ್ಷ ಕೋಟಿಗೂ ಅಧಿಕವಿದ್ದು, ಮೂರು ವರ್ಷದ ಬಿಜೆಪಿ ಅಧಿಕಾರದಲ್ಲೇ ಸುಮಾರು 2.50 ಲಕ್ಷ ಕೋಟಿ ಸಾಲ ಮಾಡಿರುವ ಉದ್ದೇಶವೇನು? ಅದೇ ರೀತಿ ನಿಮ್ಮ ಮಂತ್ರಿಮಂಡಲದಲ್ಲಿ 7 ಖಾತೆಗಳು ಖಾಲಿ ಇದ್ದು, ಇದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಲು ಕಾರಣವೇನು? ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಆ.18 ರಂದು ಮುಖ್ಯಮಂತ್ರಿಗಳು ಮೈಸೂರಿಗೆ ಆಗಮಿಸುತ್ತಿದ್ದು, ಪ್ರವಾಹದಿಂದ ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಏನು ಪರಿಹಾರ ನೀಡಿದ್ದಾರೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.
ಸಚಿವ ಮಾಧುಸ್ವಾಮಿ ನಾಲಿಗೆ ನಾನಲ್ಲ, ಅವರ ಮಾತಿಗೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ: ಬಿ.ಸಿ ಪಾಟೀಲ್ ತಿರುಗೇಟು
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಿದ್ದರಾಮಯ್ಯ ಭೇಟಿ ಇಂದಿನಿಂದ
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆ.18 ರಿಂದ ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 8.30 ಕ್ಕೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಬಳಿಕ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಜನರ ಸಮಸೆಗಳನ್ನು ಆಲಿಸಲಿದ್ದಾರೆ ಎಂದು ಲಕ್ಷ್ಮಣ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ