ಆ್ಯಪ್ನಗರ

30 ನಿಲ್ದಾಣಗಳಲ್ಲಿ ವೈ ಫೈ ಸೇವೆ

ಶೀಘ್ರದಲ್ಲಿಯೇ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಹೆಚ್ಚುರಿಯಾಗಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೇವೆ ದೊರೆಯಲಿದೆ.

Vijaya Karnataka 27 Jun 2019, 5:00 am
ಮೈಸೂರು: ಶೀಘ್ರದಲ್ಲಿಯೇ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಹೆಚ್ಚುರಿಯಾಗಿ 30 ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೇವೆ ದೊರೆಯಲಿದೆ.
Vijaya Karnataka Web wi fi service at 30 stations
30 ನಿಲ್ದಾಣಗಳಲ್ಲಿ ವೈ ಫೈ ಸೇವೆ


ಸದ್ಯ ಮೈಸೂರು ವಿಭಾಗದ 55 ನಿಲ್ದಾಣಗಳಲ್ಲಿ ಈ ಸೇವೆ ದೊರೆಯುತ್ತಿದೆ. ಇದೀಗ 2ನೇ ಹಂತದಲ್ಲಿ ಹೆಚ್ಚುವರಿಯಾಗಿ 30 ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಲಾಗುತ್ತಿದೆ. ಇದರಿಂದ ವಿಭಾಗದಲ್ಲಿ ಒಟ್ಟು 85 ನಿಲ್ದಾಣಗಳಲ್ಲಿ ಈ ಸೇವೆ ದೊರೆತಂತಾಗುತ್ತದೆ.

ರೈಲ್ವೆ ಸಚಿವಾಲಯವು ಮುಂದಿನ 100 ದಿನಗಳಲ್ಲಿ ದೇಶದಾದ್ಯಂತ ಇನ್ನಷ್ಟು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ವಿಸ್ತರಿಸಲು ತೀರ್ಮಾನಿಸಿದೆ. ಅಂತೆಯೆ ಸದ್ಯ ದೇಶದಾದ್ಯಂತ ಒಟ್ಟು 1603 ನಿಲ್ದಾಣಗಳಲ್ಲಿ ವೈಫೈ ಸೇವೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 4,800 ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಲು ನಿರ್ಧರಿಸಿದೆ.

ರೈಲ್‌ಟೆಲ್‌ ಕಾರ್ಪೋರೇಷನ್‌ ರೈಲ್ವೆ ಟ್ರಾಕ್‌ ಪಕ್ಕದಲ್ಲಿ ಆಪ್ಟಿಕ್‌ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ತನ್ಮೂಲಕ ಆಯ್ಕೆ ಮಾಡಿರುವ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆಗಳನ್ನು ನೀಡಲಾಗುವುದು. ಈಗಾಲೆ ವೈ ಫೈ ಸೇವೆ ನೀಡುವ ಹಿನ್ನೆಲೆಯಲ್ಲಿ ಕೆಲಸ ಆರಂಭಿಸಲಾಗಿದೆ. ಪ್ರಯಾಣಿಕರು ರೈಲಿಗೆ ಕಾಯುವಾಗ ಮೊದಲ 30 ನಿಮಿಷ ಉಚಿತವಾಗಿ ವೈಫೈ ಸೌಲಭ್ಯ ದೊರೆಯಲಿದೆ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ