ಆ್ಯಪ್ನಗರ

ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಅರಿವು ಅಗತ್ಯ

ಸಂಶೋಧನೆ ಮಾಡಿ ವಿಶೇಷ ರೋಬೋಟ್ ತಯಾರಿಸಿ ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ, ಶಿಕ್ಷಕರು ಹೇಳಿದ ವಿಷಯಕ್ಕೆ ತಕ್ಕಂತೆ ರೋಬೋಟ್ ಮಾದರಿ ತಯಾರಿಸಿ ಪ್ರದರ್ಶನ ಮಾಡುವುದು ಕಷ್ಟದ ಕೆಲಸ. ಇಂತಹ ಕಾರ‌್ಯಕ್ರಮದಲ್ಲಿ ಜಿಎಸ್‌ಎಸ್‌ಎಸ್ ಮಹಾವಿದ್ಯಾಲಯ ಉತ್ತಮ ವೇದಿಕೆ ಕಲ್ಪಿಸಿತ್ತು.

ವಿಕ ಸುದ್ದಿಲೋಕ 26 Oct 2016, 5:15 am
ಮೈಸೂರು: ಸಂಶೋಧನೆ ಮಾಡಿ ವಿಶೇಷ ರೋಬೋಟ್ ತಯಾರಿಸಿ ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ, ಶಿಕ್ಷಕರು ಹೇಳಿದ ವಿಷಯಕ್ಕೆ ತಕ್ಕಂತೆ ರೋಬೋಟ್ ಮಾದರಿ ತಯಾರಿಸಿ ಪ್ರದರ್ಶನ ಮಾಡುವುದು ಕಷ್ಟದ ಕೆಲಸ. ಇಂತಹ ಕಾರ‌್ಯಕ್ರಮದಲ್ಲಿ ಜಿಎಸ್‌ಎಸ್‌ಎಸ್ ಮಹಾವಿದ್ಯಾಲಯ ಉತ್ತಮ ವೇದಿಕೆ ಕಲ್ಪಿಸಿತ್ತು.
Vijaya Karnataka Web with the development of technology need to be aware
ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಅರಿವು ಅಗತ್ಯ


ನಗರದ ಹೊರವಲಯದಲ್ಲಿರುವ ಜಿಎಸ್‌ಎಸ್‌ಎಸ್ ಮಹಿಳಾತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಇನ್ಸ್‌ಟ್ರ್ಯೂಮೆಂಟೇಷನ್ ಎಂಜಿನಿಯ ರಿಂಗ್ ವಿಭಾಗದ ವತಿಯಿಂದ ನಡೆದ ಅಂತರ ಕಾಲೇಜು ರೋಬೋಟಿಕ್ ಸ್ಪರ್ಧೆ ಎಲ್ಲರ ಆಕಷಣೀಯ ಕೇಂದ್ರವಾಗಿತ್ತು.
ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ 20ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜಿನ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತರ ಕಾಲೇಜು ರೋಬೋಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ರೋಬೋಟಿಕ್ ಪ್ರತಿಭೆಯನ್ನು ಅನಾವರಣ ಮಾಡಿದರು. ಅದರಲ್ಲೂ ಆಕ್ಸ್‌ವರ್ಡ್ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು. ಬಿಐಟಿ ದಾವಣ ಗೆರೆ, ವಿವಿಸಿಇ ಮೈಸೂರು, ಎಂಐಟಿ ಮೈಸೂರು, ವಿವಿಐಇಟಿ ಮೈಸೂರು ಹಾಗೂ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯೂ, ಮೈಸೂರು ವಿದ್ಯಾರ್ಥಿಗಳು ರೋಬೋಟಿಕ್ ಸ್ಪರ್ಧೆಯಲ್ಲಿ ಪಾಲ್ಗೊಂಡು ರೋಬೋಟ್ ಮಾದರಿ ತಯಾರಿಸಿ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗಳಿಸಿದರು.

ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಮಹಾ ವಿದ್ಯಾಲಯ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ‌್ಯಕ್ರಮವನ್ನು ಇನ್ಫೋಸಿಸ್ ಬಿಪಿಒ ಡಾ.ಶ್ರೀ ಕಂಠ ಗುಪ್ತ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ರೋಬೋಟಿಕ್ಸ್‌ನ ಉಪಯೋಗಗಳನ್ನು ತಿಳಿದು ಕೊಳ್ಳಬೇಕು. ಇಂತಹ ಕಾರ‌್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇನ್ಫೋಸಿಸ್ ಲಿಮಿಟೆಡ್‌ನ ಪ್ರಮುಖ ಅಭಿಯಂತರರಾದ ಮಧು ರಾಘವೇಂದ್ರ ಸಾಗರ್ ಮಾತನಾಡಿದರು. ಗೀತಾ ಶಿಶು ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ವನಜಾ ಬಿ. ಪಂಡಿತ್, ಮುಖ್ಯ ಆಯೋಜಕ ಡಾ.ಎಂ. ಶಿವಕುಮಾರ್, ಎಲೆಕ್ಟ್ರಾನಿಕ್ಸ್ ಇನ್ಸ್‌ಟ್ರ್ಯೂಮೆಂಟೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರು, ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ