ಆ್ಯಪ್ನಗರ

‘ಒಡೆಯರ್‌’ ಸಿನಿಮಾ ಶೀರ್ಷಿಕೆ ಬದಲಿಸುವಂತೆ ಠಾಣೆಗೆ ದೂರು

ನಟ ದರ್ಶನ್‌ ಅಭಿನಯಿಸುತ್ತಿರುವ, ಸಂದೇಶ್‌ ನಾಗರಾಜ್‌ ನಿರ್ಮಾಣದ 'ಒಡೆಯರ್‌' ಹೆಸರಿನ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಕನ್ನಡ ಕ್ರಾಂತಿದಳದ ಸದಸ್ಯರು ಕೆ.ಆರ್‌. ಪೊಲೀಸ್‌ ಠಾಣೆಗೆ ದೂರು ನೀಡಿದರು.

Vijaya Karnataka 28 Jul 2018, 7:40 am
ಮೈಸೂರು : ನಟ ದರ್ಶನ್‌ ಅಭಿನಯಿಸುತ್ತಿರುವ, ಸಂದೇಶ್‌ ನಾಗರಾಜ್‌ ನಿರ್ಮಾಣದ 'ಒಡೆಯರ್‌' ಹೆಸರಿನ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಕನ್ನಡ ಕ್ರಾಂತಿದಳದ ಸದಸ್ಯರು ಕೆ.ಆರ್‌. ಪೊಲೀಸ್‌ ಠಾಣೆಗೆ ದೂರು ನೀಡಿದರು.
Vijaya Karnataka Web Darshan


ನಂತರ ಕನ್ನಡ ಕ್ರಾಂತಿದಳದ ಯುವಘಟಕದ ರಾಜ್ಯಾಧ್ಯಕ್ಷ ತೇಜಸ್ವಿ ಕುಮಾರ್‌ ಮಾತನಾಡಿ, 'ಒಡೆಯರ್‌' ಚಿತ್ರದ ಹೆಸರನ್ನು ಬದಲಾಯಿಸುವಂತೆ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯಿಸಿದ್ದೆವು. ಆದರೂ ಚಿತ್ರತಂಡವು ಒಡೆಯರ್‌ ಶೀರ್ಷಿಕೆಯನ್ನೇ ಇಟ್ಟುಕೊಂಡು ಆ.16ರಂದು ಮುಹೂರ್ತ ಏರ್ಪಡಿಸಿರುವುದು ಖಂಡನೀಯ,'' ಎಂದರು. 'ಒಡೆಯರ್‌' ಎಂಬ ಶೀರ್ಷಿಕೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಭಿಮಾನಿಗಳಿಗೆ ನೋವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡದವರು 'ಒಡೆಯರ್‌' ಎಂಬ ಶೀರ್ಷಿಕೆಯನ್ನು ಶೀಘ್ರವೇ ಬದಲಾಯಿಸಬೇಕು,'' ಎಂದು ಆಗ್ರಹಿಸಿದರು.

''ಒಡೆಯರ್‌ ಮನೆತನದ ಅರಸರು ಮೈಸೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಜನರೂ ಅವರನ್ನು ಬಗ್ಗೆ ಹೆಚ್ಚು ಗೌರವದಿಂದ ಕಾಣುತ್ತಿದ್ದಾರೆ. ಹಾಗಾಗಿ ಒಡೆಯರ್‌ ಹೆಸರನ್ನು ವಾಣಿಜ್ಯ ದೃಷ್ಟಿಯ, ಹಾಸ್ಯ ಭರಿತ ಅಥವಾ ರೌಡಿಸಂ ಚಿತ್ರಗಳಿಗೆ ಬಳಸಿ ಅವರ ಮೇಲಿನ ಜನರ ಗೌರವಕ್ಕೆ ಚ್ಯುತಿ ತರುವ ಯತ್ನಗಳು ನಡೆಯಬಾರದು,'' ಎಂದು ಒತ್ತಾಯಿಸಿದರು.

ಹಿರಿಯ ಹೋರಾಟಗಾರರಾದ ಸತ್ಯಪ್ಪ, ವಸಂತ್‌ರಾಜೇ ಅರಸ್‌, ಪುನೀತ್‌ ಅರಸ್‌, ಅರವಿಂದ್‌ ರಾಜೇ ಅರಸ್‌, ಮಾದರಾಜೇ ಅರಸ್‌, ಯಶ್ವಂತ್‌ ರಾಜೇ ಅರಸ್‌, ಶರತ್‌ ಅರಸ್‌, ಮಂಜುನಾಥ್‌ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ