ಆ್ಯಪ್ನಗರ

ಕಬಿನಿ ಜಲಾಶಯದ ಮೇಲೆ ಸಂಚಾರ ನಿರ್ಬಂಧ, ಆಸ್ಪತ್ರೆಗೆ ಸಾಗಿಸಲಾಗದೇ ಮಹಿಳೆ ಸಾವು ಆರೋಪ

ಬಿದರಹಳ್ಳಿ ಗ್ರಾಮದ ಅನಾರೋಗ್ಯ ಪೀಡಿತ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದು, ಕಬಿನಿ ಜಲಾಶಯದ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಆಸ್ಪತ್ರೆಗೆ ಸಾಗಿಸಲು ವಿಳಂಬವಾಗಿ ಈ ಸಾವಾಗಿದೆ ಎದು ಆರೋಪಿಸಲಾಗಿದೆ.

Vijaya Karnataka Web 11 Aug 2020, 11:31 am
ಎಚ್‌.ಡಿ.ಕೋಟೆ: ಕಬಿನಿ ಜಲಾಶಯದ ಪಕ್ಕದ ಹೊಸ ಬಿದರಹಳ್ಳಿ ಗ್ರಾಮದ ಅನಾರೋಗ್ಯ ಪೀಡಿತ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದು, ಜಲಾ ಶಯದ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಆಸ್ಪತ್ರೆಗೆ ಸಾಗಿಸಲು ವಿಳಂಬವಾಗಿ ಈ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
Vijaya Karnataka Web Kabini reservoir


ಜಯಣ್ಣ ಎಂಬುವವರ ಪತ್ನಿ ಸೌಭಾಗ್ಯ (55) ಮೃತರು. 2 ದಿನಗಳ ಹಿಂದೆ ಅನಾ ರೋಗ್ಯಕ್ಕೀಡಾದ ಇವರನ್ನು ಎಚ್‌.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದು ಕೊಂಡು ಬರುವಾಗ ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಿತ್ತು. ಜಲಾಶಯದ ಮೇಲೆ ಬೀಚನಹಳ್ಳಿ ಗ್ರಾಮದ ಮೂಲಕ ಎಚ್‌.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರಲು ಯೋಚಿಸಿದರು. ಆದರೆ, ಜಲಾಶಯದ ಮೇಲೆ ಜನ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧಿಸಿದ್ದರಿಂದ ಪೊಲೀಸರು ಅವಕಾಶ ನಿರಾಕರಿಸಿದರು.

ಸುಮಾರು 1 ಗಂಟೆ ಕಾದು ಬೇಸತ್ತ ಕುಟುಂಬದವರು ಗೇಟಿನ ಬೀಗ ಒಡೆದು, ಎಚ್‌.ಡಿ.ಕೋಟೆ ಮುಖಾಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೋಗುವಾಗ ಹೃದಯಾಘಾತದಿಂದ ಮಹಿಳೆ ಮೃತಪಟ್ಟರು. ಕಬಿನಿ ಜಲಾಶಯದ ಮೇಲಿನ ರಸ್ತೆಯಲ್ಲಿ ಹೋಗಲು ನಿರಾಕರಿಸಿದ್ದ ರಿಂದ ಆಸ್ಪತ್ರೆಗೆ ಕರೆದೊಯ್ಯುವುದು ತಡವಾಗಿ ಮಹಿಳೆ ಮೃತಪಟ್ಟರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದುವ ರೆಗೂ ಜಲಾಶಯಕ್ಕೆ ಎಂದೂ ಸೆಕ್ಷನ್‌ 144ನ್ನು ವಿಧಿಸಿರಲಿಲ್ಲ. ಈ ಸಾವಿಗೆ ಜಿಲ್ಲಾಡಳಿತವೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ