ಆ್ಯಪ್ನಗರ

ವಿಶ್ವ ಕನ್ನಡ ಸಮ್ಮೇಳನಕ್ಕೆ ಯಮುನಾ ಶ್ರೀನಿಧಿ ಆಯ್ಕೆ

ಅಮೆರಿಕದ ಸಿನ್‌ ಸಿನ್ಯಾಟಿ ನಗರದಲ್ಲಿ ನಾವಿಕ ಸಂಸ್ಥೆ (ನಾರ್ತ್‌ ಅಮೆರಿಕ ವಿಶ್ವ ಕನ್ನಡಿಗರ ಆಗರ) ಆಯೋಜಿಸಿರುವ ನಾವಿಕಾ 5ನೇ ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ರಾಯಭಾರಿಯಾಗಿ ವಿದುಷಿ ಯಮುನಾ ಶ್ರೀನಿಧಿ ಆಯ್ಕೆಯಾಗಿದ್ದಾರೆ.

Vijaya Karnataka 9 Aug 2019, 5:00 am
ಮೈಸೂರು: ಅಮೆರಿಕದ ಸಿನ್‌ ಸಿನ್ಯಾಟಿ ನಗರದಲ್ಲಿ ನಾವಿಕ ಸಂಸ್ಥೆ (ನಾರ್ತ್‌ ಅಮೆರಿಕ ವಿಶ್ವ ಕನ್ನಡಿಗರ ಆಗರ) ಆಯೋಜಿಸಿರುವ ನಾವಿಕಾ 5ನೇ ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ರಾಯಭಾರಿಯಾಗಿ ವಿದುಷಿ ಯಮುನಾ ಶ್ರೀನಿಧಿ ಆಯ್ಕೆಯಾಗಿದ್ದಾರೆ.
Vijaya Karnataka Web yamuna srinidhi selected for world kannada conference
ವಿಶ್ವ ಕನ್ನಡ ಸಮ್ಮೇಳನಕ್ಕೆ ಯಮುನಾ ಶ್ರೀನಿಧಿ ಆಯ್ಕೆ


''ಮೂಲತಃ ಮೈಸೂರಿನವರಾದ ತಾನು 17 ವರ್ಷ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿನ ಸುಮಾರು 700 ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುವುದರ ಜತೆಗೆ 38 ರಂಗಪ್ರವೇಶಗಳನ್ನು ಮಾಡಿಸುವ ಮೂಲಕ ಪ್ರೇರಣೆ ನೀಡಿದ್ದೇನೆ. ರಂಗಭೂಮಿ, ಕಿರುತೆರೆ ಹಾಗೂ ಅನೇಕ ಸಿನಿಮಾಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಕನ್ನಡದ ಶ್ರೇಯೋಭಿವೃದ್ಧಿ ಶ್ರಮಿಸಿರುವುದನ್ನು ಗುರುತಿಸಿ ಸಮ್ಮೇಳನದ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ,'' ಎಂದು ಯಮುನಾ ಶ್ರೀನಿಧಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ನಾವಿಕಾ ಸಮ್ಮೇಳನ ಆ.30ರಿಂದ ಸೆ.1ರವರೆಗೆ ನಡೆಯಲಿದ್ದು, ಗಾಯಕರಾದ ವಿಜಯ್‌ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಹೇಮಂತ್‌ , ಅನುರಾಧ ಭಟ್‌, ಕವಿ ಪೊ›.ಕೆ.ಎಸ್‌.ನಿಸಾರ್‌ ಅಹ್ಮದ್‌, ಡಾ.ಸಿದ್ದಲಿಂಗಯ್ಯ, ಮೈಸೂರು ನಟರಾಜ್‌, ಅನೀಶ್‌ ವಿದ್ಯಾಶಂಕರ್‌, ಪೊ›.ಕೃಷ್ಣೇಗೌಡ, ರಿಚರ್ಡ್‌ ಲೂಯಿಸ್‌, ಡುಂಡಿರಾಜ್‌ ಪಾಲ್ಗೊಳ್ಳಲಿದ್ದಾರೆ,'' ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಭರತನಾಟ್ಯ ಪ್ರದರ್ಶನ ನೀಡುವುದರ ಜತೆಗೆ ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಸಾಧನೆಗೆ ಇರುವಂತಹ ಅಡಚಣೆ ಹಾಗೂ ಅವುಗಳನ್ನು ದಾಟುವುದು ಹೇಗೆ? ಎಂಬ ವಿಷಯ ಕುರಿತು ವಿಚಾರ ಮಂಡಿಸಲಿದ್ದೇನೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ