ಆ್ಯಪ್ನಗರ

ದಾಖಲೆ ನಿರ್ಮಿಸಲು ಯೋಗಾಭ್ಯಾಸ

ಬೆಳಂ ಬೆಳಗ್ಗೆ ಸೂರ್ಯನಿಗೆ ನೂರಾರು ಯೋಗಾಸಕ್ತರು ನಮನ ಸಲ್ಲಿಸಿದರು. ದಾಖಲೆ ಯೋಗಕ್ಕಾಗಿ ಪ್ರತಿ ಭಾನುವಾರ ತಾಲೀಮು ನಡೆಸುತ್ತಿರುವ ಯೋಗ ಸಂಸ್ಥೆಗಳಿಂದ ಈ ಭಾನುವಾರವು ಮೂರು ಪ್ರತ್ಯೇಕ ಸ್ಥಳಗಳಲ್ಲಿ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು.

Vijaya Karnataka 27 May 2019, 5:00 am
ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಯೋಗ ತಾಲೀಮು
Vijaya Karnataka Web yoga practise for record
ದಾಖಲೆ ನಿರ್ಮಿಸಲು ಯೋಗಾಭ್ಯಾಸ


ಮೈಸೂರು:
ಬೆಳಂ ಬೆಳಗ್ಗೆ ಸೂರ್ಯನಿಗೆ ನೂರಾರು ಯೋಗಾಸಕ್ತರು ನಮನ ಸಲ್ಲಿಸಿದರು.
ದಾಖಲೆ ಯೋಗಕ್ಕಾಗಿ ಪ್ರತಿ ಭಾನುವಾರ ತಾಲೀಮು ನಡೆಸುತ್ತಿರುವ ಯೋಗ ಸಂಸ್ಥೆಗಳಿಂದ ಈ ಭಾನುವಾರವು ಮೂರು ಪ್ರತ್ಯೇಕ ಸ್ಥಳಗಳಲ್ಲಿ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಯೋಗ ಫೆಡರೇಷನ್‌ ಆಫ್‌ ಮೈಸೂರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್‌ಎಸ್‌ ಯೋಗ, ಮೈಸೂರು ಯೋಗ ಒಕ್ಕೂಟ, ಯೋಗ ಸ್ಪೋರ್ಟ್ಸ್ ಫೌಂಡೇಶನ್‌, ಬಾಬಾ ರಾಮ್‌ದೇವ್‌ ಪತಂಜಲಿ ಯೋಗ ಸಮಿತಿಗಳ ಸಹಯೋಗದಲ್ಲಿ ಕುವೆಂಪುನಗರದ ನಮನ ಪಾರ್ಕ್‌, ಸೌಗಂಧಿಕ ಉದ್ಯಾನದಲ್ಲಿ ವಿಜಯ ನಗರದ ಶ್ರೀಕೃಷ್ಣದೇವರಾಯ ಉದ್ಯಾನದಲ್ಲಿ ಯೋಗಭ್ಯಾಸ ನಡೆಸಲಾಯಿತು. ಒಂದು ಸಾವಿರಕ್ಕೂ ಹೆಚ್ಚು ಯೋಗಾಸಕ್ತರು 45 ನಿಮಿಷ ಯೋಗ ತಾಲೀಮು ನಡೆಸಿದರು. ಮೊದಲಿಗೆ ಪ್ರಾರ್ಥನೆ, ಚಾಲನಾ ಕ್ರಿಯೆ, ಆಸನಗಳು, ಪ್ರಾಣಯಾಮ, ಧ್ಯಾನ, ಸಂಕಲ್ಪ, ಶಾಂತಿಮಂತ್ರದೊಂದಿಗೆ ಪೂರ್ವಾಭ್ಯಾಸ ಕ್ರಿಯೆ ಅಂತಿಮಗೊಂಡಿತು. 12 ಯೋಗ ಶಿಕ್ಷಕರ ತಂಡವು ಯೋಗಾಸಕ್ತರಿಗೆ ಎರಡು ಕಡೆ ಮಾರ್ಗದರ್ಶನ ಮಾಡಿದರು.

ಸೌಗಂಧಿಕ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಎಸ್‌ಎಸ್‌ ಯೋಗಿಕ್‌ ರಿಸರ್ಚ್‌ ಫೌಂಡೇಷನ್‌ ಶ್ರೀಹರಿ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾಳಾಜೀ, ಬಾಬಾ ರಾಮದೇವ ಪತಂಜಲಿ ಯೋಗ ಸಮಿತಿಯ ಶಶಿಕುಮಾರ್‌, ಆರ್‌ಐಐಟಿ ಮುಖ್ಯಸ್ಥರಾದ ವೆಂಕಟೇಶ್‌ ಇದ್ದರು.

ಕುವೆಂಪುನಗರದ ನಮನ ಪಾರ್ಕ್‌ನಲ್ಲಿ ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಶಾಂತಾರಾಂ, ದೇವರಾಜ್‌, ಯೋಗ ಕುಮಾರ್‌ ಅವರು ತರಬೇತಿಯಲ್ಲಿ ಭಾಗವಹಿಸಿದ್ದರು.

ವಿಜಯನಗರದ ಕೃಷ್ಣದೇವರಾಯ ವೃತ್ತದ ಪುಟ್ಬಾಲ್‌ ಅಂಕಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯಿಷ್‌ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಸೀತಾಲಕ್ಷ್ಮೇ, ಡಾ. ಪಿ.ಎನ್‌.ಗಣೇಶ್‌ ಕುಮಾರ್‌, ನಗರಪಾಲಿಕೆ ಸದಸ್ಯ ದೇವಯ್ಯ ಮುಂತಾದವರು ಪಾಲ್ಗೊಂಡಿದ್ದರು.

------------

ಮುಂದಿನ ವಾರದಿಂದ ಮೈಸೂರು ಜಿಲ್ಲಾಡಳಿತದ ಸಹಯೋಗದಲ್ಲಿ ಯಾವುದಾದರೂ ಒಂದೇ ಸ್ಥಳದಲ್ಲಿ ಹೆಚ್ಚಿನ ಜನರನ್ನು ಸೇರಿಸಿ, ಯೋಗಭ್ಯಾಸ ತಾಲೀಮು ಮಾಡಲಾಗುವುದು.
- ಡಾ. ಸೀತಾಲಕ್ಷ್ಮೇ, ಸಹಾಯಕ ನಿರ್ದೇಶಕಿ, ಆಯಿಷ್‌

-----------------

ಯೋಗ ತಾಲೀಮಿಗೆ ಅರಮನೆ ಎದುರು ಅವಕಾಶಕ್ಕೆ ಮನವಿ

ಮೈಸೂರು:
ದಾಖಲೆ ಯೋಗ ಪ್ರದರ್ಶನ ನಡೆಸಲು ತಯಾರಿ ನಡೆಸುತ್ತಿರುವ ಮೈಸೂರಿನ ನಾನಾ ಯೋಗ ಒಕ್ಕೂಟ, ಸಂಘ ಮತ್ತು ಸಂಸ್ಥೆಗಳು ಹೆಚ್ಚಿನ ಜನರಿಂದ ಯೋಗ ತಾಲೀಮು ನಡೆಸಲು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಅವಕಾಶ ಕೋರಿ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿದೆ.

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ದಾಖಲೆ ಯೋಗ ಪ್ರದರ್ಶಿಸಲು ಪ್ರತಿ ಭಾನುವಾರವು ನಗರದ ಬೇರೆ ಪ್ರದೇಶದಲ್ಲಿ ಯೋಗ ತಾಲೀಮು ನಡೆಸುತ್ತಿದ್ದು, ಒಂದೇ ವೇದಿಕೆಯಲ್ಲಿ ಹೆಚ್ಚಿನ ಜನರಿಂದ ಯೋಗ ತಾಲೀಮು ನಡೆಸಲು ಅರಮನೆ ಮುಂಭಾಗ ಅವಕಾಶ ನೀಡಬೇಕೆಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರಿಗೆ ಪತ್ರ ಬರೆಯಲಾಗಿದೆ.

ಜೂ. 21 ಅಂತಾರಾಷ್ಟ್ರೀಯ ಯೋಗ ದಿನದಂದು 1.50 ಲಕ್ಷ ಕ್ಕೂ ಹೆಚ್ಚು ಯೋಗಾಸಕ್ತರು ಸಾಮೂಹಿಕವಾಗಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಯೋಗ ಫೆಡರೇಷನ್‌ ಪಣ ತೊಟ್ಟಿದೆ. ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲು ಪ್ರತಿ ಭಾನುವಾರ ಯೋಗ ತಾಲೀಮು ನಡೆಸಲಾಗುತ್ತಿದೆ.

''ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶಿಸಲು ಜಾಗದ ಕೊರತೆಯಾದ ಕಾರಣ ನಗರದ ಬೇರೆಬೇರೆ ಪ್ರದೇಶಗಳಲ್ಲಿ ಯೋಗ ತಾಲೀಮು ನಡೆಸಲಾಗಿತ್ತು. ಈಗ ಒಂದೆಡೆ ಯೋಗ ತಾಲೀಮು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಅರಮನೆ ಮುಂದೆ ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶನ ಮಾಡುವುದರಿಂದ 2-3 ಸಾವಿರ ಯೋಗಾಸಕ್ತರನ್ನು ನಿರೀಕ್ಷೆ ಮಾಡಬಹುದಾಗಿದೆ. ಇದೇ ರೀತಿ ಪ್ರತಿ ವಾರಕ್ಕೂ ಯೋಗ ಅಭ್ಯಾಸ ಮಾಡುವವರು ಹೆಚ್ಚಾಗಲಿದ್ದಾರೆ,'' ಎಂದು ಜಿಎಸ್‌ಎಸ್‌ ಯೋಗ ಸಂಸ್ಥೆಯ ಯೋಗ ಗುರು ಡಾ.ರಂಗನಾಥ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ