ಆ್ಯಪ್ನಗರ

ನಿರ್ಭಯಾ ಅತ್ಯಾಚಾರ ಕೇಸ್‌: ಕ್ಷಮಾದಾನ ಅರ್ಜಿ ತಿರಸ್ಕರಿಸಿ ರಿಟ್‌ ಅರ್ಜಿ ಸಲ್ಲಿಸಿದ ಹಂತಕ ವಿನಯ್‌ ಶರ್ಮಾ

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆ ಮುಂದೂಡಲು ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆ. ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ತಿರಸ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

Agencies 11 Feb 2020, 5:30 pm
ಹೊಸದಿಲ್ಲಿ: 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯನ್ನು ಮುಂದೂಡಲು ಇನ್ನೂ ಅನೇಕ ತಂತ್ರಗಳನ್ನು ಹೂಡುತ್ತಿದ್ದಾರೆ. ಈಗ ಅತ್ಯಾಚಾರ ಅಪರಾಧಿಗಳಲ್ಲಿ ಒಬ್ಬರಾದ ವಿನಯ್‌ ಶರ್ಮಾ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕಾರ ಮಾಡಿದ್ದಕ್ಕೆ ಸುಪ್ರೀಂಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web vinay sharma et


ಈ ಸಂಬಂಧ ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಸುಮಾರು 10 ದಿನಗಳ ಬಳಿಕ ಸರ್ವೋಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 1 ರಂದು ರಾಷ್ಟ್ರಪತಿ ಕೋವಿಂದ್‌, ವಿನಯ್‌ ಶರ್ಮಾ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಅಲ್ಲದೆ, ಮತ್ತೊಬ್ಬ ಅಪರಾಧಿ ಮುಖೇಶ್ ಸಿಂಗ್ ಅವರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಜನವರಿ 17 ರಂದು ತಿರಸ್ಕರಿಸಿದ್ದರು. ಆದರೂ, ಫೆಬ್ರವರಿ 1 ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಯನ್ನು ತಡೆಹಿಡಿದ ದಿಲ್ಲಿ ಕೋರ್ಟ್‌, ಶಿಕ್ಷೆಯನ್ನು ಅರ್ನಿದಿಷ್ಟಾವಧಿ ಮುಂದೂಡಿದೆ.

ನನ್ನ ತಾಯಿಗಾಗಿ ನಿರ್ಭಯಾ ಅಪ­ರಾಧಿಗಳ ಪರ ವಾದ ಮಂಡಿಸುತ್ತಿರುವೆ: ವಕೀಲ ಎ.ಪಿ.ಸಿಂಗ್‌

ಈ ನಡುವೆ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಕುರಿತು ಮರಣ ದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಿಗೆ ನೋಟಿಸ್‌ ನೀಡಿದ್ದು, ಅವರ ಪ್ರತಿಕ್ರಿಯೆ ಕೇಳಿದೆ.

ನಿರ್ಭಯಾ ಹಂತಕರಿಗೆ ಗಲ್ಲು ಇನ್ನಷ್ಟು ದೂರ ದೂರ: 'ತರಾತುರಿ' ಏಕೆ ಎಂದು ಕೇಳ್ತಿದ್ದಾರೆ ಅಪರಾಧಿಗಳ ಪರ ವಕೀಲ..!

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆರ್. ಬಾನುಮತಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ನೋಟಿಸ್‌ ಸಲ್ಲಿಸಿದ್ದು, ಮರಣ ದಂಡನೆಗೆ ಹೊಸ ಶಿಕ್ಷೆಯ ದಿನಾಂಕವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳಿಗೆ ಕಾನೂನು ಬಳಕೆಗೆ ಹೈಕೋರ್ಟ್‌ನಿಂದ ವಾರದ ಡೆಡ್‌ಲೈನ್‌

ಅಲ್ಲದೆ, ಕೇಂದ್ರ ಮತ್ತು ದೆಹಲಿ ಸರಕಾರವು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರೂ, ಕೆಳ ಹಂತದ ನ್ಯಾಯಾಲಯಕ್ಕೆ ಅಪರಾಧಿಗಳ ಮರಣದಂಡನೆಗೆ ಹೊಸ ದಿನಾಂಕ ನೀಡುವಲ್ಲಿ ಅಡ್ಡಿಯಾಗುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ಕೇಂದ್ರ ಮತ್ತು ದೆಹಲಿ ಸರಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಅಪರಾಧಿಗಳಿಗೆ ಮರಣದಂಡನೆ ಮಾಡುವುದು ಸಂತೋಷಕ್ಕಾಗಿ ಅಲ್ಲ ಮತ್ತು ಅಧಿಕಾರಿಗಳು ಕಾನೂನಿನ ಆದೇಶವನ್ನು ಮಾತ್ರ ಕಾರ್ಯಗತಗೊಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ