ಆ್ಯಪ್ನಗರ

ಎಎಪಿ ಶಾಸಕಿ ಆತಿಶಿ, ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೆ ಕೊರೊನಾ

​ದಿಲ್ಲಿ ಸರಕಾರದ ಆರೋಗ್ಯ ಇಲಾಖೆಯ ಕೊರೊನಾ ನಿಯಂತ್ರಣ ಪಡೆಯಲ್ಲಿ ಅತಿಶಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರಿಗೇ ಸೋಂಕು ತಗುಲಿದೆ. ಇನ್ನೊಂದೆಡೆ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಅವರ ವರದಿಯೂ ಪಾಸಿಟಿವ್‌ ಬಂದಿದೆ.

Agencies 17 Jun 2020, 9:43 pm

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಕಲ್ಕಜಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆಮ್‌ ಆದ್ಮಿ ಪಕ್ಷದ ಶಾಸಕಿ ಅತಿಶಿ ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.
Vijaya Karnataka Web Atishi


ಮಂಗಳವಾರ ಅವರಿಗೆ ಸ್ವಲ್ಪ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ವರದಿಯಲ್ಲಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಅವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ವೈದ್ಯರು ಸೂಚಿಸಿದ್ದಾರೆ.

ತಮ್ಮ ಪಕ್ಷದ ನಾಯಕಿ ಅತಿಶಿ ಶೀಘ್ರ ಗುಣಮುಖರಾಗಲಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ನಲ್ಲಿ ಹಾರೈಸಿದ್ದಾರೆ.
ಕರೋಲ್‌ ಬಾಗ್‌ ಶಾಸಕ ವಿಶೇಷ್‌ ರವಿ, ಪಟೇಲ್‌ ನಗರ ಶಾಸಕ ರಾಜ್‌ ಕುಮಾರ್‌ ಆನಂದ್‌, ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಬಳಿಕ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿರುವ ಆಮ್‌ ಆದ್ಮಿ ಪಕ್ಷದ ನಾಲ್ಕನೇ ಶಾಸಕಿ ಅತಿಶಿ ಆಗಿದ್ದಾರೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಕೊರೊನಾ ಪರೀಕ್ಷೆ ನೆಗೆಟಿವ್ ಫಲಿತಾಂಶ!

ದಿಲ್ಲಿ ಸರಕಾರದ ಆರೋಗ್ಯ ಇಲಾಖೆಯ ಕೊರೊನಾ ನಿಯಂತ್ರಣ ಪಡೆಯಲ್ಲಿ ಅತಿಶಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರಿಗೇ ಸೋಂಕು ತಗುಲಿದೆ.

ಆರೋಗ್ಯ ಸಚಿವರಿಗೇ ಸೋಂಕು


ಇನ್ನೊಂದೆಡೆ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಂಗಳವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಅವರ ಕೋವಿಡ್‌ ರಿಪೋರ್ಟ್‌ ನೆಗೆಟಿವ್‌ ಬಂದಿತ್ತು. ಆದರೆ ಬುಧವಾರ ಎರಡನೇ ಬಾರಿಗೆ ಕೊರೊನಾ ಪರೀಕ್ಷೆಗೆ ಒಳಪಟ್ಟಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.


ದಿಲ್ಲಿಯಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು ಇಲ್ಲಿಯವರೆಗೆ 44,688 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 1,837 ಜನರು ಅಸುನೀಗಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿದರೆ ದಿಲ್ಲಿಯಲ್ಲೇ ಅತೀ ಹೆಚ್ಚಿನ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಜೊತೆಗೆ ಎರಡನೇ ಅತೀ ಹೆಚ್ಚಿನ ಸಕ್ರಿಯ ಪ್ರಕರಣಗಳು ದಿಲ್ಲಿಯಲ್ಲಿವೆ. ರಾಷ್ಟ್ರ ರಾಜಧಾನಿಯಲ್ಲಿ 26,351 ಸೋಂಕಿತರು ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ