ಆ್ಯಪ್ನಗರ

ಎಎಪಿ ಸಂಸದ ರಾಘವ್ ಛಡ್ಡಾಗೆ ಕುಕ್ಕಿದ ಕಾಗೆ: ಸುಳ್ಳು ಹೇಳುವವರಿಗೆ ಹೀಗೆ ಕುಟುಕುತ್ತದೆ ಎಂದ ಬಿಜೆಪಿ

Crow Attacks AAP Raghav Chadha: ಸಂಸತ್ ಭವನದ ಹೊರಗೆ ಎಎಪಿ ಸಂಸದ ರಾಘವ್ ಛಡ್ಡಾ ಅವರ ಮೇಲೆ ಕಾಗೆಯೊಂದು ದಾಳಿ ನಡೆಸಿದ ಚಿತ್ರಗಳ ಕೊಲಾಜ್ ಅನ್ನು ಬಿಜೆಪಿ ದಿಲ್ಲಿ ಘಟಕ ಹಂಚಿಕೊಂಡಿದೆ. ಸುಳ್ಳು ಹೇಳುವವರಿಗೆ ಕಾಗೆ ಕುಕ್ಕುತ್ತದೆ ಎಂಬ ಪ್ರಸಿದ್ಧ ನುಡಿಯನ್ನು ಬಿಜೆಪಿ ಉಲ್ಲೇಖಿಸಿದೆ. ಇದಕ್ಕೆ ಛಡ್ಡಾ ತಿರುಗೇಟು ನೀಡಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 26 Jul 2023, 8:06 pm

ಹೈಲೈಟ್ಸ್‌:

  • ಸಂಸತ್ ಕಟ್ಟಡದ ಹೊರಗೆ ಎಎಪಿ ಸಂಸದ ರಾಘವ ಛಡ್ಡಾ ಮೇಲೆ ಕಾಗೆ ದಾಳಿ
  • ಕಾಗೆ ದಾಳಿಯ ಮೂರು ಫೋಟೋಗಳನ್ನು ಹಂಚಿಕೊಂಡಿರುವ ದಿಲ್ಲಿ ಬಿಜೆಪಿ ಘಟಕ
  • ಸುಳ್ಳು ಹೇಳುವವರನ್ನು ಕಾಗೆ ಕುಕ್ಕುತ್ತದೆ ಎಂಬ ಜನಪ್ರಿಯ ಸಾಲುಗಳ ಉಲ್ಲೇಖ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Raghav chadha
ಹೊಸದಿಲ್ಲಿ: ಎಎಪಿ ನಾಯಕ ರಾಘವ ಛಡ್ಡಾ ಅವರು ಸಂಸತ್ ಹೊರಗೆ ಕಾಗೆ ದಾಳಿಗೆ ಒಳಗಾದ ಪ್ರಸಂಗ ನಡೆದಿದೆ. ಇದು ಬಿಜೆಪಿ ಮತ್ತು ಛಡ್ಡಾ ಅವರ ನಡುವೆ ಏಟು- ಎದಿರೇಟಿನ ಟ್ವೀಟ್ ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಸಂಸತ್ ಹೊರಗೆ ಕಾಗೆಯು ದಾಳಿ ನಡೆಸುವ ಫೋಟೋಗಳನ್ನು ಬಿಜೆಪಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಯಾವಾಗಿನ ಚಿತ್ರ ಎಂದು ಬಿಜೆಪಿ ತಿಳಿಸಿಲ್ಲ. ಮುಂಗಾರು ಅಧಿವೇಶನ ನಡೆಯುತ್ತಿರುವ ಸಂಸತ್‌ನ ಹೊರಗೆ ರಾಘವ್ ಛಡ್ಡಾ ಅವರು ಫೋನ್‌ನಲ್ಲಿ ಮಾತನಾಡುತ್ತಿರುವ ವೇಳೆ ಹಿಂದಿನಿಂದ ಬಂದ ಕಾಗೆ ಅವರ ತಲೆಗೆ ಕಾಲುಗಳನ್ನು ತಾಕಿಸಿಕೊಂಡು ಹಾರಿ ಹೋಗಿರುವ ಮೂರು ಚಿತ್ರಗಳನ್ನು ಬಿಜೆಪಿ ಪೋಸ್ಟ್ ಮಾಡಿದೆ. ಕಾಗೆಯು ರಾಘವ್ ಛಡ್ಡಾ ಅವರ ತಲೆಗೆ ಕೊಕ್ಕಿನಿಂದ ಕುಕ್ಕಿದಂತೆ ಅವರ ಪ್ರತಿಕ್ರಿಯೆ ಕಾಣಿಸಿದೆ.
Delhi Excise Policy Case: ಲಿಕ್ಕರ್‌ ಹಗರಣದಲ್ಲಿ ಆಪ್‌ ಸಂಸದ ರಾಘವ್ ಛಡ್ಡಾ ಹೆಸರು?

ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ದಿಲ್ಲಿ ಬಿಜೆಪಿ ಘಟಕ, ಪ್ರಸಿದ್ಧ ಹಿಂದಿ ಸಾಲುಗಳ ಮೂಲಕ ಛಡ್ಡಾ ಅವರ ಕಾಲೆಳೆದಿದೆ. "ಝೂಟ್ ಬೋಲೆ ಕೌವ್ವಾ ಕಾಟೆ" (ಯಾರೂ ಸುಳ್ಳು ಹೇಳಬಾರದು, ಹೇಳಿದರೆ ಕಾಗೆ ನಿಮ್ಮನ್ನು ಕುಕ್ಕುತ್ತದೆ) ಎಂಬ ಸಾಲನ್ನು ಬರೆದಿದೆ. ಹಿಂದಿ ಸಿನಿಮಾವೊಂದರ ಹಾಡಿನ ಈ ಸಾಲಗಳು ಜನಪ್ರಿಯವಾಗಿದ್ದವು. "ಈವರೆಗೂ ನಾವು ಇದನ್ನು ಕೇಳಿದ್ದವಷ್ಟೇ. ಇಂದು ಕಾಗೆಯು ಸುಳ್ಳುಗಾರನನ್ನು ಕುಕ್ಕಿದ ದೃಶ್ಯವನ್ನು ನಾವು ನೋಡಿದ್ದೇವೆ" ಎಂದು ದಿಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.


ಇದಕ್ಕೆ ಖಡಕ್ ಪ್ರತ್ಯುತ್ತರ ನೀಡಿರುವ ರಾಘವ್ ಛಡ್ಡಾ, ಮತ್ತೊಂದು ಜನಪ್ರಿಯ ಸಾಲುಗಳನ್ನು ಉಲ್ಲೇಖಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
Parineeti Chopra Engagement: ರಾಘವ್ ಚಡ್ಡಾ ಜೊತೆಗೆ ನೆರವೇರಿದ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ

ರಾಮಾಯಣದಲ್ಲಿ ಸೀತೆಗೆ ರಾಮ ಹೇಳಿದ್ದ ಎನ್ನಲಾದ ಮಾತುಗಳನ್ನು ಅವರು ಪ್ರಸ್ತಾಪಿಸಿದ್ದಾರೆ. "ಕಲಿಯುಗವು ಎಂತಹ ವಿಪತ್ತನ್ನು ತರಲಿದೆ ಎಂದರೆ, ಬಾತುಕೋಳಿಯು ಧಾನ್ಯಗಳನ್ನು ತಿನ್ನುತ್ತವೆ ಮತ್ತು ಕಾಗೆಯು ಮುತ್ತುಗಳನ್ನು ತಿನ್ನುತ್ತದೆ ಎಂದು ಸೀತಾಗೆ ಶ್ರೀರಾಮ ಹೇಳಿದ್ದ" ಎಂದು ಟ್ವೀಟ್ ಪ್ರತಿಕ್ರಿಯೆ ಮೂಲಕ ಅವರು ತಮ್ಮನ್ನು ಮುತ್ತಿಗೆ ಹೋಲಿಸಿಕೊಂಡಿದ್ದಾರೆ.


ಮಣಿಪುರದ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿವೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ. ಇವುಗಳನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಆದರೆ ಅವಿಶ್ವಾಸ ನಿರ್ಣಯದ ಮೇಲಿನ ಮತಕ್ಕೆ ಅವರು ಇನ್ನೂ ದಿನಾಂಕ ಘೋಷಿಸಿಲ್ಲ.

ಎಎಪಿ ಸಂಸದ ರಾಘವ ಛಡ್ಡಾ ಅವರು ಕಾಂಗ್ರೆಸ್‌ ಸಂಸದರಾದ ರಂಜೀತ್ ರಂಜನ್ ಮತ್ತು ರಾಜೀವ್ ಶುಕ್ಲಾ ಅವರೊಂದಿಗೆ ಇದೇ ರೀತಿಯ ಅವಿಶ್ವಾಸ ನಿರ್ಣಯ ನೋಟಿಸ್ ಅನ್ನು ರಾಜ್ಯಸಭೆಯಲ್ಲಿಯೂ ನೀಡುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
2023ರಲ್ಲಿ ಅವಿಶ್ವಾಸ ನಿರ್ಣಯ: 2019ರಲ್ಲಿಯೇ 'ಭವಿಷ್ಯ' ನುಡಿದಿದ್ದ ಪ್ರಧಾನಿ ಮೋದಿ!

ಸಂಸತ್‌ನಲ್ಲಿ ಚರ್ಚೆಗೆ ಸಿದ್ಧರಿದ್ದು, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಆದರೆ ಈ ಪ್ರಸ್ತಾವವನ್ನು ವಿಪಕ್ಷಗಳು ತಿರಸ್ಕರಿಸಿವೆ. ಮಣಿಪುರದ ಸನ್ನಿವೇಶದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಖರ್ಗೆ ಅವರಿಗೆ ಅಮಿತ್ ಶಾ ಬರೆದಿದ್ದ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪತ್ರದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭ. ಆದರೆ ನಿಮ್ಮ ನಡವಳಿಕೆ ಮೂಲಕ ವಿರೋಧ ಪಕ್ಷಗಳ ನಂಬಿಕೆ ಗಳಿಸುವುದು ಇನ್ನೂ ಸುಲಭ" ಎಂದಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ