ಆ್ಯಪ್ನಗರ

Satyendar Jain: ಜೈಲಿನಲ್ಲಿ ಊಟ ಕೊಡುತ್ತಿಲ್ಲ ಎಂದ ಸಚಿವ ಜೈನ್; ಭರ್ಜರಿ ಭೋಜನದ ವಿಡಿಯೋ ಹಂಚಿಕೊಂಡ ಬಿಜೆಪಿ

Delhi AAP Minister Satyendar Jain: ತಮಗೆ ತಿಹಾರ್ ಜೈಲಿನಲ್ಲಿ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಎಎಪಿ ಸಚಿವ ಸತ್ಯೇಂದರ್ ಜೈನ್ ಕೋರ್ಟ್‌ನಲ್ಲಿ ಆರೋಪಿಸಿದ ಮರುದಿನವೇ, ಅವರು ಜೈಲಿನ ಕೊಠಡಿಯಲ್ಲಿ ಬಗೆ ಬಗೆಯ ತಿನಿಸು ಸೇವಿಸುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

Authored byಅಮಿತ್ ಎಂ.ಎಸ್ | Vijaya Karnataka Web 23 Nov 2022, 5:58 pm

ಹೈಲೈಟ್ಸ್‌:

  • ಎಎಪಿ ಸಚಿವ ಸತ್ಯೇಂದರ್ ಜೈನ್ ಅವರ ಮತ್ತೊಂದು ವಿಡಿಯೋ ಬಿಡುಗಡೆ
  • ತಿಹಾರ್ ಜೈಲಿನಲ್ಲಿ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಜೈನ್ ಆರೋಪ
  • ಹೊರಗಿನಿಂದ ತರಿಸಿದ ಬಗೆ ಬಗೆಯ ತಿನಿಸು ಸೇವಿಸುತ್ತಿರುವ ವಿಡಿಯೋ ವೈರಲ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Satyendar Jain
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದರ್ ಜೈನ್ ಅವರಿಗೆ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡುವ ವಿಡಿಯೋ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ, ಕಂಬಿಯ ಹಿಂದೆ ಜೈನ್ ಅವರು ಭೂರಿ ಭೋಜನ ಮಾಡುತ್ತಿರುವ ಮತ್ತೊಂದು ವಿಡಿಯೋವನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಗ್ಯ ಸಚಿವ ಜೈನ್ ಅವರು ತಿಹಾರ್ ಜೈಲಿನ ಒಳಗೆ ಹೊರಗಿನಿಂದ ತರಿಸಿಕೊಂಡ ಊಟ ಆನಂದಿಸುತ್ತಿರುವ ವಿಡಿಯೋವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಹಂಚಿಕೊಂಡಿದ್ದಾರೆ.
Satyendar Jain Massage Video: ಎಎಪಿ ಸಚಿವರಿಗೆ ಜೈಲಿನಲ್ಲಿ ಮಸಾಜ್ ಮಾಡಿದಾತ ಮಗಳ ರೇಪಿಸ್ಟ್: ಘಟನೆಗೆ ಹೊಸ ತಿರುವು

"ಮಾಧ್ಯಮದಿಂದ ಮತ್ತೊಂದು ವಿಡಿಯೋ! ರೇಪಿಸ್ಟ್‌ನಿಂದ ಮಾಲಿಶ್ ಪಡೆದುಕೊಂಡ ಬಳಿಕ ಮತ್ತು ಆತನನ್ನು ಫಿಸಿಯೋ ಥೆರಪಿಸ್ಟ್ ಎಂದು ಕರೆದ ನಂತರ, ಸತ್ಯೇಂದರ್ ಜೈನ್ ಅವರು ರುಚಿಕರವಾದ ಆಹಾರ ಆನಂದಿಸುತ್ತಿದ್ದಾರೆ. ಅವರು ರಜಾ ದಿನ ಕಳೆಯಲು ರೆಸಾರ್ಟ್‌ನಲ್ಲಿ ಇರುವಂತೆ ಸೇವಕರು ಅವರಿಗೆ ಆಹಾರ ಪೂರೈಸಿದ್ದಾರೆ. 'ಹವಾಲಾಬಾಜ್' ಜೈಲಿನಲ್ಲಿ 'ಸಜಾ' ಬದಲು 'ಮಜಾ' ಮಾಡುವಂತೆ ಕೇಜ್ರಿವಾಲ್ ನೋಡಿಕೊಳ್ಳುತ್ತಿದ್ದಾರೆ" ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.


ಜೈಲಿನಲ್ಲಿರುವ ಜೈನ್ ಅವರು ಸಲಾಡ್‌ನಿಂದ ಹಿಡಿದು ಬಗೆ ಬಗೆಯ ತಿನಿಸುಗಳನ್ನು ಸವಿಯುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಜೈಲಿನ ಕೋಣೆ ಒಳಗೆ ವ್ಯಕ್ತಿಯೊಬ್ಬರು, ಅವರಿಗೆ ಆಹಾರ ತಂದು ಸಿದ್ಧಪಡಿಸುವುದರಿಂದ, ಅವರ ಕುರ್ಚಿ ಸಮೀಪ ಕಸದ ಡಬ್ಬಿ ತಂದು ಇರಿಸುವವರೆಗೆ ಎಲ್ಲ ಸೇವೆ ಮಾಡುವುದು ಕೂಡ ಸೆರೆಯಾಗಿದೆ. ಅವರ ಕೊಠಡಿಯಲ್ಲಿ ಪ್ಯಾಕೇಜ್ ಮಾಡಲಾದ ಕುಡಿಯುವ ನೀರಿನ ಬಾಟಲಿಗಳು ಕಾಣಿಸಿವೆ.
Satyendar Jain: ಬಂಧಿತ ಎಎಪಿ ಸಚಿವ ಜೈನ್‌ಗೆ ತಿಹಾರ್ ಜೈಲಿನಲ್ಲಿ ಮಸಾಜ್: ವೈರಲ್ ವಿಡಿಯೋ

ಕೋರ್ಟ್ ಮೆಟ್ಟಿಲೇರಿದ ಜೈನ್
ತಮಗೆ ಜೈಲಿನಲ್ಲಿ ಸಮರ್ಪಕ ಆಹಾರ ನೀಡುತ್ತಿಲ್ಲ. ಇದರಿಂದಾಗಿ 28 ಕೆಜಿ ತೂಕ ಕಳೆದುಕೊಂಡಿರುವುದಾಗಿ ಸತ್ಯೇಂದರ್ ಜೈನ್ ಅವರು ಕೋರ್ಟ್‌ಗೆ ದೂರು ನೀಡಿದ ಮರುದಿನವೇ, ಅವರು ಭರ್ಜರಿ ಊಟ ಮಾಡುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.


ಜೈಲಿನಲ್ಲಿನ ಎರಡು ಸಿಸಿಟಿವಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ಮಾಧ್ಯಮಗಳು ಈ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಲು ಹಾಗೂ ಅವುಗಳು ಹೇಗೆ ಸೋರಿಕೆಯಾಗಿವೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಸಿಬಿಐ ನ್ಯಾಯಾಲಯಕ್ಕೆ ಜೈನ್ ಮನವಿ ಮಾಡಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ