ಆ್ಯಪ್ನಗರ

ದಿಲ್ಲಿಯಲ್ಲಿ ಕೈಮೀರಿದ ಕೊರೊನಾ: ಸೋಂಕಿತರ ಚಿಕಿತ್ಸೆಗೆ ಕೇಂದ್ರದಿಂದ 500 ರೈಲ್ವೆ ಕೋಚ್‌: ಅಮಿತ್‌ ಶಾ

ದಿಲ್ಲಿಯಲ್ಲಿ ಕೊರೊನಾ ವೈರಸ್‌ ಪರಿಸ್ಥಿತಿ ಕೈಮೀರಿದೆ. ಜೊತೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆ ಕೊರತೆಯೂ ಉಂಟಾಗಿದೆ. ಈ ಹಿನ್ನೆಲೆ ಕೇಂದ್ರ ಸರಕಾರ ದಿಲ್ಲಿ ಸರಕಾರದ ನೆರವಿಗೆ ಬಂದಿದ್ದು, ತಕ್ಷಣ 500 ರೈಲ್ವೆ ಕೋಚ್‌ ನೀಡುವುದಾಗಿ ಕೇಂದ್ರ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ.

ANI 14 Jun 2020, 2:21 pm
ಹೊಸದಿಲ್ಲಿ: ಕೊರೊನಾ ವೈರಸ್‌ ಚಿಕಿತ್ಸೆ ನೀಡಲು ದೆಹಲಿಯಲ್ಲಿ ಉಂಟಾಗಿರುವ ಹಾಸಿಗೆ ಕೊರತೆ ನೀಗಿಸಲು ತಕ್ಷಣ ಕೇಂದ್ರದಿಂದ 500 ರೈಲ್ವೆ ಕೋಚ್‌ಗಳನ್ನು ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Vijaya Karnataka Web New Delhi: Union Home Minister Amit Shah (2nd R), holds a meeting with Health Mi...
ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಭೆ ನಡೆಯಿತು.


ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್‌ ಪರಿಸ್ಥಿತಿ ಕೈಮೀರಿದ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅಮಿತ್‌ ಶಾ, ದಿಲ್ಲಿಯಲ್ಲಿ ಕೊರೊನಾ ವೈರಸ್‌ ಪರೀಕ್ಷೆಯ ಪ್ರಮಾಣವನ್ನು ಮುಂದಿನ ಕೆಲವೇ ದಿನಗಳಲ್ಲಿ ದ್ವಿಗುಣಗೊಳಿಸಲಾಗುವುದು ಹಾಗೂ 6 ದಿನಗಳಲ್ಲಿ ತ್ರಿಗುಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು, ದೆಹಲಿಯ ಸಣ್ಣ ಆಸ್ಪತ್ರೆಗಳಿಗೆ ಕೊರೊನಾ ವೈರಸ್‌ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗಸೂಚಿ ನೀಡಲು ಮೋದಿ ಸರಕಾರ ಏಮ್ಸ್‌ನ ಹಿರಿಯ ವೈದ್ಯರ ಸಮಿತಿಯೊಂದನ್ನು ರಚಿಸಿ, ಟೆಲಿಫೋನಿಕ್‌ ಸಲಹೆಗಳನ್ನು ನೀಡಲಿದೆ. ಇದರ ಸಹಾಯವಾಣಿ ಸಂಖ್ಯೆ ಸೋಮವಾರ ಬಿಡುಗಡೆಯಾಗಲಿದೆ ಎಂದು ಅಮಿತ್‌ ಶಾ ವಿವರಿಸಿದ್ದಾರೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ: ಅಮಿತ್ ಶಾ-ಅರವಿಂದ್ ಕೇಜ್ರಿವಾಲ್ ಸಭೆ!

ದಿಲ್ಲಿಯಲ್ಲಿ ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಲು ಮೋದಿ ಸರಕಾರ ಬದ್ಧವಾಗಿದೆ. ಈ ಹಿನ್ನೆಲೆ ಭಾನುವಾರ ನಡೆದ ಸಭೆಯಲ್ಲಿ ದಿಲ್ಲಿ ಜನರ ರಕ್ಷಣೆ ಹಾಗೂ ವೈರಸ್‌ ನಿಯಂತ್ರಣದ ಬಗ್ಗೆ ಅನೇಕ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬಾಲಾಜಿ ಇದ್ದರು.

ಕೊರೊನಾ: ನಿಯಂತ್ರಣ ತಪ್ಪಿದ ದಿಲ್ಲಿ, ಭಾನುವಾರ ಕೇಜ್ರಿವಾಲ್‌ ಜೊತೆ ಅಮಿತ್‌ ಶಾ ಸಭೆ


ಅಮಿತ್‌ ಶಾ ಜೊತೆಗಿನ ಸಭೆ ಬಳಿಕ ಟ್ವೀಟ್‌ ಮಾಡಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ದೆಹಲಿ ಸರಕಾರ ಹಾಗೂ ಕೇಂದ್ರ ಸರಕಾರದ ಜೊತೆಗಿನ ಸಭೆ ಯಶಸ್ವಿಯಾಗಿದ್ದು, ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ವೈರಸ್‌ ವಿರುದ್ಧ ನಾವೂ ಸಂಘಟಿತವಾಗಿ ಹೋರಾಡುತ್ತೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ