ಆ್ಯಪ್ನಗರ

12ನೇ ತರಗತಿ ಯುವಕನ ಜೀವನ ಹೋರಾಟ: ಸ್ಕೂಲ್‌ ಫೀಸ್‌ಗಾಗಿ ಶವಾಗಾರದಲ್ಲಿ ಕೆಲಸ..!

ಆ ಯುವಕನಿಗೆ ಡಾಕ್ಟರ್ ಆಗುವ ಕನಸು. ಕೆಲಸ ಮಾಡ್ತಿರೋದು ಶವಾಗಾರದಲ್ಲಿ. ಅದೂ ಕೂಡಾ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ವಿಲೇವಾರಿ ಮಾಡುವ ಕಾಯಕ. ಏಕೆ ಈ ಕೆಲಸ ಅಂದರೆ, ಹೊಟ್ಟೆ ಪಾಡು ಎನ್ನುತ್ತಾರೆ, 12ನೇ ತರಗತಿ ವಿದ್ಯಾರ್ಥಿ.

TIMESOFINDIA.COM 21 Jun 2020, 5:47 pm

ಹೈಲೈಟ್ಸ್‌:

  • ಕೆಲಸವಿಲ್ಲ, ಹಣವಿಲ್ಲ, ಕುಟುಂಬ ನಿರ್ವಹಣೆ ಕಷ್ಟ ಕಷ್ಟ
  • ಅನಿವಾರ್ಯವಾಗಿ ಶವಾಗಾರದಲ್ಲಿ ಕೆಲಸ ಮಾಡ್ತಿರುವ ಯುವಕ
  • 12ನೇ ತರಗತಿ ಓದುತ್ತಿರುವ ಯುವಕನಿಗೆ ಡಾಕ್ಟರ್ ಆಗುವ ಕನಸು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web delhi boy
12ನೇ ತರಗತಿ ಯುವಕನ ಜೀವನ ಹೋರಾಟ: ಸ್ಕೂಲ್‌ ಫೀಸ್‌ಗಾಗಿ ಶವಾಗಾರದಲ್ಲಿ ಕೆಲಸ..!
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಕೊರೊನಾ ವೈರಸ್ ಆರ್ಭಟದ ನಡುವೆಯೇ, ಹಲವಾರು ಮಾನವೀಯ ಮುಖಗಳು, ಕೊರೊನಾ ಜೊತೆಯಲ್ಲೇ ಬದುಕಿಗಾಗಿ ನಡೆಸುತ್ತಿರುವ ಹೋರಾಟಗಳು ಅನಾವರಣಗೊಳ್ಳುತ್ತಿವೆ. ಕೊರೊನಾ ವೈರಸ್ ಆರ್ಭಟವನ್ನೇ ಅನಿವಾರ್ಯವಾಗಿ ಜೀವನಕ್ಕೆ ಊರುಗೋಲಾಗಿ ಬಳಸಿಕೊಳ್ಳುತ್ತಿರುವ ಸಾಧಕರೂ ಬೆಳಕಿಗೆ ಬರುತ್ತಿದ್ದಾರೆ.
ಆತನ ಹೆಸರು ಚಾಂದ್ ಮೊಹಮ್ಮದ್. 12ನೇ ತರಗತಿ ಓದುತ್ತಿರುವ ಈ ವಿದ್ಯಾರ್ಥಿಗೆ ಡಾಕ್ಟರ್ ಆಗಬೇಕೆಂಬ ಬಯಕೆ. ಆದ್ರೆ, ಕುಟುಂಬದಲ್ಲಿ ತೀವ್ರ ಬಡತನ. ತಾಯಿ ಥೈರಾಯ್ಡ್‌ ಸಂಬಂಧಿ ರೋಗದಿಂದ ಬಳಲುತ್ತಿದ್ಧಾರೆ. ಈ ನಡುವೆ, ಕೊರೊನಾ ವೈರಸ್ ದಿಲ್ಲಿಯಲ್ಲಿ ಆರ್ಭಟಿಸುತ್ತಿದೆ. ಹೀಗಾಗಿ, ಸಾವು ನೋವಿನ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಯ ಶವಾಗಾರದಲ್ಲೂ ಸಿಬ್ಬಂದಿ ಕೊರತೆ ಎದುರಾಗಿದೆ.

ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡಿರುವ ಚಾಂದ್, ಶವಾಗಾರದಲ್ಲಿ ಕೆಲಸ ಮಾಡುತ್ತಾ, ಹಣ ಸಂಪಾದಿಸುತ್ತಿದ್ದಾರೆ. ಇದರಿಂದ ಸಿಗುವ ಹಣವನ್ನು ಕುಟುಂಬದ ಖರ್ಚು ವೆಚ್ಚ, ತಾಯಿಯ ಆಸ್ಪತ್ರೆ ಖರ್ಚು ಹಾಗೂ ತನ್ನ ಶಾಲಾ ಶುಲ್ಕ ಪಾವತಿಸಲು ಬಳಸುತ್ತಿದ್ದಾರೆ ಚಾಂದ್.

ದಿಲ್ಲಿಯ ಕೃಷ್ಣಾ ನಗರದಲ್ಲಿ ಚಾಂದ್‌ ಅವರ ಅಣ್ಣ ಕೆಲಸ ಮಾಡ್ತಿದ್ದರು. ಆದ್ರೆ, ಕೊರೊನಾ ವೈರ್‌ನಿಂದಾಗಿ ಮಾರುಕಟ್ಟೆ ಬಂದ್ ಆಗಿ ಅವರ ಕೆಲಸ ಹೋಗಿದೆ. ಹೀಗಾಗಿ, ಸೀಲಂಪುರದಲ್ಲಿ ನೆಲೆಸಿರುವ ಈ ಯುವಕ, ಶವಾಗಾರದಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಅಕ್ಕಪಕ್ಕದ ನಿವಾಸಿಗಳು ನೀಡುವ ದಿನಸಿ ಪದಾರ್ಥಗಳೇ ಇವರಿಗೆ ಆಧಾರ. ಚಾಂದ್ ಸಂಪಾದಿಸುವ ಹಣ ಕುಟುಂಬ ನಿರ್ವಹಣೆಗೆ ತುಂಬಾ ಕಡಿಮೆ. ಹೀಗಾಗಿ, ದಿನಕ್ಕೆ ಒಂದ ಹೊತ್ತು ಮಾತ್ರ ಊಟ ಮಾಡುತ್ತಿದೆ ಈ ಕುಟುಂಬ.

ವಾರಗಳ ಹಿಂದೆ ಕಂಪನಿಯೊಂದರಲ್ಲಿ ಚಾಂದ್‌ಗೆ ಕೆಲಸ ಸಿಕ್ಕಿತು. ಲೋಕನಾಯಕ ಜಯಪ್ರಕಾಶ್‌ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸಕ್ಕೆ ಈ ಸಂಸ್ಥೆ ಚಾಂದ್‌ ಅವರನ್ನು ನೇಮಿಸಿತು. ಮೃತರ ದೇಹಗಳನ್ನು ವಿಲೇವಾರಿ ಮಾಡೋದು ಚಾಂದ್‌ ಕೆಲಸ. ಇದು ತುಂಬಾ ಅಪಾಯಕಾರಿ ಕೆಲಸವೂ ಹೌದು. ಆದ್ರೆ, ಬೇರೆ ಮಾರ್ಗವಿಲ್ಲದೆ, ಕೊರೊನಾ ವೈರಸ್‌ನಿಂದ ಮೃತರಾದವರ ಶವಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ಚಾಂದ್ ಮಾಡುತ್ತಿದ್ದಾರೆ. ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗಿನ ಶಿಫ್ಟ್‌ನಲ್ಲಿ ಚಾಂದ್‌ ದುಡಿಯುತ್ತಿದ್ದಾರೆ.

ದಿಲ್ಲಿಯಲ್ಲಿ ಕೈಮೀರಿದ ಕೊರೊನಾ: ಸೋಂಕಿತರ ಚಿಕಿತ್ಸೆಗೆ ಕೇಂದ್ರದಿಂದ 500 ರೈಲ್ವೆ ಕೋಚ್‌: ಅಮಿತ್‌ ಶಾ

ಮೂವರು ಸಹೋದರಿಯರು, ಇಬ್ಬರು ಸಹೋದರರು ಇರುವ ಈ ಕುಟುಂಬಕ್ಕೆ ಚಾಂದ್‌ ದುಡಿಮೆಯೇ ಆಧಾರ. ಮನೆಗೆ ದಿನಸಿ ತರೋದಕ್ಕೆ ಹಾಗೂ ತಾಯಿಯ ಆರೋಗ್ಯ ನೋಡಿಕೊಳ್ಳೋದಕ್ಕೆ ಸಂಬಳ ಸಾಕಾಗೋದಿಲ್ಲ ಎನ್ನುತ್ತಾರೆ ಚಾಂದ್.

ದಿಲ್ಲಿ ಆರೋಗ್ಯ ಸಚಿವರ ಪರಿಸ್ಥಿತಿ ಗಂಭೀರ, ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಚಿಂತನೆ

ಚಾಂದ್ ಅವರ ಮೂವರು ಸಹೋದರಿಯರು ಶಾಲೆಯಲ್ಲಿ ಓದುತ್ತಿದ್ದಾರೆ. ಚಾಂದ್ ಕೂಡಾ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕನಿಷ್ಟ ಪಕ್ಷ ಶಾಲೆಯ ಶುಲ್ಕ ಪಾವತಿಸಲು ಹಣ ಬೇಕು ಅನ್ನೋದು ಚಾಂದ್‌ ಅಳಲು.

ದಿಲ್ಲಿಯಲ್ಲಿ ಎಲ್ಲರಿಗೂ ಕೊರೊನಾ ಪರೀಕ್ಷೆ - ಸರ್ವಪಕ್ಷ ಸಭೆಯಲ್ಲಿ ಅಮಿತ್‌ ಶಾ ಭರವಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ