ಆ್ಯಪ್ನಗರ

ನಿರ್ಭಯಾ ಹಂತಕರಿಗೆ ಗಲ್ಲು ವಿಳಂಬಕ್ಕೆ ದಿಲ್ಲಿ ಸರಕಾರ ಕಾರಣವಲ್ಲ: ಸಿಎಂ ಕೇಜ್ರಿವಾಲ್‌

ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ವಿಳಂಬವಾಗಲು ದಿಲ್ಲಿ ಸರಕಾರ ಕಾರಣ ಎಂಬ ಆರೋಪಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಸಿಎಂ ಆರವಿಂದ ಕೇಜ್ರಿವಾಲ್‌ ನಿರ್ಭಯಾ ತಾಯಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಸರಕಾರ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 17 Jan 2020, 7:23 pm
ಹೊಸದಿಲ್ಲಿ: ಅಪರಾಧಿಗಳಿಗೆ ಗಲ್ಲುಶಿಕ್ಷೆ ತಡವಾಗಲು ದಿಲ್ಲಿ ಸರಕಾರ ಕಾರಣ ಎಂಬ ಆರೋಪವನ್ನು ಸಿಎಂ ಅರವಿಂದ ಕೇಜ್ರಿವಾಲ್‌ ತಳ್ಳಿ ಹಾಕಿದ್ದಾರೆ. ಸಂತ್ರಸ್ತೆಯ ತಾಯಿಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ವಿಚಾರವನ್ನು ಬಿಜೆಪಿ ನಾಯಕ ಪ್ರಕಾಶ್‌ ಜಾವಡೇಕರ್‌ ರಾಜಕೀಯಗೊಳಿಸಿದ್ದಾರೆ ಎಂದು ಅರವಿಂದ ಕೇಂಜ್ರಿವಾಲ್‌ ಆರೋಪಿಸಿದರು.
Vijaya Karnataka Web Arvind Kejriwal


ನಿರ್ಭಯಾ ಹಂತಕರ ಗಲ್ಲುಶಿಕ್ಷೆಗೆ ಸಂಬಂಧಿಸಿ ದಿಲ್ಲಿ ಸರಕಾರದ ಪ್ರೊಸಿಜರ್‌ಗಳನ್ನು ಕೆಲವೇ ಗಂಟೆಗಳಲ್ಲಿ ಮುಗಿಸಲಾಗಿದೆ. ಕ್ಷಮಾದಾನ ಅರ್ಜಿಯನ್ನು ಗಂಟೆಯೊಳಗೆ ಕಳುಹಿಸಿ ಕೊಡಲಾಗಿದೆ. ಹಾಗಾಗಿ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ವಿಚಾರವಾಗಿ ವಿಳಂಬಗೊಂಡಿರುವುದರಲ್ಲಿ ದಿಲ್ಲಿ ಸರಕಾರದ ಪಾತ್ರವಿಲ್ಲ ಎಂದು ಕೇಜ್ರಿವಾಲ್‌ ಸ್ಪಷ್ಟ ಪಡಿಸಿದ್ದಾರೆ.

2017ರಲ್ಲಿ ಗಲ್ಲುಶಿಕ್ಷೆ ವಿರುದ್ಧ ಅಪರಾಧಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ ಸಂದರ್ಭ ಎಎಪಿ ಸರಕಾರ ತುರ್ತಾಗಿ ಕಾರ್ಯ ನಿರ್ವಹಿಸಿದ್ದರೆ ಇಷ್ಟೊತ್ತಿಗಾಗಲೇ ನಾಲ್ವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಿ ಆಗಿರುತ್ತಿತ್ತು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ಜಾವಡೇಕರ್‌ ನಡೆ ಸರಿಯಲ್ಲ ಎಂದಿದ್ದಾರೆ.

ಸಿಎಎ-ಎನ್‌ ಆರ್‌ಸಿ ಬಗ್ಗೆ ಆಪ್‌ ‘ತಟಸ್ಥ’ ನೀತಿ, ಮತ ಬ್ಯಾಂಕ್‌ ಛಿದ್ರವಾಗದಂತೆ ಜಾಣ ನಡೆ ಇಟ್ಟ ಕೇಜ್ರಿವಾಲ್

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ, ''2012ರಲ್ಲಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದವರು ಇಂದು ರಾಜಕೀಯ ಲಾಭಕ್ಕಾಗಿ ಮಗಳ ಸಾವಿನ ಜೊತೆ ಆಟವಾಡುತ್ತಿದ್ದಾರೆ'' ಎಂದು ನಿರ್ಭಯಾ ತಾಯಿ ದೂರಿದ್ದರು.

''ನಮ್ಮ ಸರಕಾರ ಏಕೆ ಗಲ್ಲುಶಿಕ್ಷೆ ತಡವಾಗುವಂತೆ ಮಾಡುತ್ತಿದೆ? ತುರ್ತಾಗಿ ಅಪರಾಧಿಗಳನ್ನು ಗಲ್ಲುಶಿಕ್ಷೆಗೆ ಗುರಿ ಪಡಿಸಬೇಕಿದೆ. ಈ ವಿಚಾರದಲ್ಲಿ ದಿಲ್ಲಿ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ'' ಎಂದು ನಿರ್ಭಯಾ ತಾಯಿ ಆರೋಪಿಸಿದ್ದರು.

'ಕೇಜ್ರಿವಾಲ್ ನೀತಿ ನಪುಂಸಕರ ಹಕ್ಕಿನಂತೆ' ಎಂಬ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದ ತರೂರ್..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ