ಆ್ಯಪ್ನಗರ

ಟ್ರ್ಯಾಕ್ಟರ್‌ಗಳೊಂದಿಗೆ ದಿಲ್ಲಿ ಪ್ರವೇಶಿಸಿದ ಅನ್ನದಾತ: ಪೊಲೀಸ್ ತಡೆಗೋಡೆಗೆ ಡೋಂಟ್ ಕೇರ್..

​ಗಡಿ ಭಾಗದಲ್ಲಿ ಪೊಲೀಸರು ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಟ್ರ್ಯಾಕ್ಟರ್, ಜೆಸಿಬಿ ವಾಹನಗಳ ಮೂಲಕ ಧ್ವಂಸಗೊಳಿಸಿದ ರೈತರು, ನಗರದೊಳಗೆ ಪ್ರವೇಶ ಪಡೆಯುತ್ತಿದ್ದಾರೆ. ದಿಲ್ಲಿಯತ್ತ ನುಗ್ಗಿ ಬರುತ್ತಿರುವ ಪ್ರತಿಭಟನಾಕಾರರ ಪೈಕಿ, ಖಾಲ್ಸಾ ಯೋಧರೂ ಇದ್ದಾರೆ.

Vijaya Karnataka Web 26 Jan 2021, 1:40 pm

ಹೈಲೈಟ್ಸ್‌:

  • ಕೆಂಪುಕೋಟೆ ಬಳಿ ಜಮಾವಣೆಗೊಳ್ಳೋದೇ ರೈತರ ಉದ್ದೇಶ
  • ಟ್ರ್ಯಾಕ್ಟರ್, ಜೆಸಿಬಿಗಳೊಂದಿಗೆ ದಿಲ್ಲಿಗೆ ರೈತರ ಲಗ್ಗೆ
  • ಬ್ಯಾರಿಕೇಡ್‌ ಸೇರಿದಂತೆ ಎಲ್ಲಾ ರೀತಿಯ ತಡೆಗೋಡೆ ಧ್ವಂಸ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿ ಅಕ್ಷರಶಃ ರಣಾಂಗಣವಾಗಿದೆ. ದಿಲ್ಲಿಯ ನಾಲ್ಕು ಗಡಿಗಳಲ್ಲಿ ಪೊಲೀಸರ ತಡೆಗೋಡೆ ಭೇದಿಸಿರುವ ರೈತರು, ನಗರದೊಳಗೆ ನುಗ್ಗುತ್ತಿದ್ದಾರೆ. ದಿಲ್ಲಿಯ ಕೆಂಪು ಕೋಟೆ ಬಳಿ ಜಮಾವಣೆಗೊಳ್ಳೋದು ರೈತರ ಉದ್ದೇಶವಾಗಿದೆ. ಪೊಲೀಸ್ ಹಾಗೂ ಭದ್ರತಾ ಪಡೆಗಳು ಟ್ರ್ಯಾಕ್ಟರ್ ಪರೇಡ್‌ ನಡೆಯುವ ಮಾರ್ಗವನ್ನೇ ಬದಲಾವಣೆ ಮಾಡಿದ ಕಾರಣ, ಗೊಂದಲಗೊಂಡ ಪ್ರತಿಭಟನಾಕಾರರು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದಿದ್ದಾರೆ.
ಗಡಿ ಭಾಗದಲ್ಲಿ ಪೊಲೀಸರು ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಟ್ರ್ಯಾಕ್ಟರ್, ಜೆಸಿಬಿ ವಾಹನಗಳ ಮೂಲಕ ಧ್ವಂಸಗೊಳಿಸಿದ ರೈತರು, ನಗರದೊಳಗೆ ಪ್ರವೇಶ ಪಡೆಯುತ್ತಿದ್ದಾರೆ. ರೈತರ ಈ ದುಸ್ಸಾಹಸವನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿತ ಹಾಗೂ ಲಾಠಿ ಚಾರ್ಜ್‌ ನಡೆಸಿದ್ದಾರೆ.

ಸಾವಿರ ಸಾವಿರ ಸಂಖ್ಯೆಯಲ್ಲಿ ದಿಲ್ಲಿಯತ್ತ ನುಗ್ಗಿ ಬರುತ್ತಿರುವ ಪ್ರತಿಭಟನಾಕಾರರ ಪೈಕಿ, ಕೆಲವರು ಖಾಲ್ಸಾ ಸೇನೆಗೆ ಸೇರಿದವರೂ ಇದ್ದಾರೆ. ನೀಲಿ ಬಣ್ಣದ ಉಡುಗೆ ಧರಿಸಿ ಪಗಡೆ ಸಮೇತರಾಗಿ ಕುದುರೆ ಮೇಲೆ ಏರಿ ಬರುತ್ತಿರುವ ಖಾಲ್ಸಾ ಸೇನೆಯ ಸದಸ್ಯರು ಕೈನತ್ತಿ ಖಡ್ಗ ಹಾಗೂ ಗುರಾಣಿ ಹಿಡಿದಿದ್ದಾರೆ.

ರೈತರ ಆಕ್ರೋಶಕ್ಕೆ ರಣಾಂಗಣವಾಯ್ತು ದಿಲ್ಲಿ: ಝಳಪಿಸಿತು ಖಾಲ್ಸಾ ಸೇನೆ ಖಡ್ಗ..!
ಪಂಜಾಬ್‌ ಹಾಗೂ ಹರ್ಯಾಣ ಗಡಿ ಭಾಗದಲ್ಲಿ ಖಾಲ್ಸಾ ಸೇನೆಯ ಯೋಧರ ಆಗಮನವಾಗುತ್ತಿದೆ. ಇನ್ನುಳಿದಂತೆ ಉತ್ತರ ಪ್ರದೇಶ ಗಡಿಯಲ್ಲೂ ರೈತರು ಗಡಿಯಲ್ಲಿ ಜಮಾವಣೆಗೊಂಡಿದ್ದಾರೆ. ದಿಲ್ಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಅಳವಡಿಸಿದ್ದ ಬ್ಯಾರಿಕೇಡ್‌ಅನ್ನೇ ಕಿತ್ತೊಗೆದ ಪ್ರತಿಭಟನಾಕಾರರು, ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿದರು..

ರಾಷ್ಟ್ರ ರಾಜಧಾನಿಗೆ ಲಗ್ಗೆ ಇಟ್ಟ ಅನ್ನದಾತ: ಹೆದ್ದಾರಿಗಳಲ್ಲಿ 'ಟ್ರ್ಯಾಕ್ಟರ್ ಪ್ರವಾಹ'!
ಕೆಲವಡೆ ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದು ಅವರು ಓಡಿಸಿದರು. ದೊಣ್ಣೆಗಳನ್ನು ಹಿಡಿದು ಬಂದಿದ್ದ ರೈತರು ಕೆಲವು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಗಳೂ ಕೇಳಿಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ