ಆ್ಯಪ್ನಗರ

ಕೇಂದ್ರ ಸಚಿವ ಸಂಪುಟ: 4ರಿಂದ 6ಕ್ಕೇರಿದ ರಾಜ್ಯ ಪ್ರಾತಿನಿಧ್ಯ

ಡಿ.ವಿ. ಸದಾನಂದ ಗೌಡ ಅವರ ರಾಜೀನಾಮೆ ಮತ್ತು ನಾಲ್ಕು ಹೊಸ ಮುಖಗಳ ಸೇರ್ಪಡೆಯೊಂದಿಗೆ ಸಂಪುಟದಲ್ಲಿ ರಾಜ್ಯದ ಒಟ್ಟು ಆರು ಮಂದಿ ಪ್ರಾತಿನಿಧ್ಯ ಪಡೆದಂತಾಗಿದೆ.

Vijaya Karnataka Web 7 Jul 2021, 10:49 pm
ಬೆಂಗಳೂರು: ನಾಲ್ವರು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಕೇಂದ್ರ ಸಂಪುಟದಲ್ಲಿರಾಜ್ಯದ ಪ್ರಾತಿನಿಧ್ಯ ನಾಲ್ಕರಿಂದ ಆರಕ್ಕೇರಿದೆ.
Vijaya Karnataka Web ಮೋದಿ ಟೀಮ್‌
ಮೋದಿ ಟೀಮ್‌


ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದ ಗೌಡ ಮತ್ತು ಸುರೇಶ್‌ ಅಂಗಡಿ ಕೇಂದ್ರ ಮಂತ್ರಿ ಮಂಡಲದಲ್ಲಿದ್ದರು. ನಿರ್ಮಲಾ ಸೀತಾರಾಮನ್‌ ಅವರದ್ದೂ ರಾಜ್ಯದ ಕೋಟಾ ಆಗಿತ್ತು. ಈ ನಡುವೆ, ಸುರೇಶ್‌ ಅಂಗಡಿಯವರು ಮೃತರಾಗಿದ್ದರು. ಇದೀಗ ಡಿ.ವಿ. ಸದಾನಂದ ಗೌಡ ಅವರ ರಾಜೀನಾಮೆ ಮತ್ತು ನಾಲ್ಕು ಹೊಸ ಮುಖಗಳ ಸೇರ್ಪಡೆಯೊಂದಿಗೆ ಸಂಪುಟದಲ್ಲಿ ರಾಜ್ಯದ ಒಟ್ಟು ಆರು ಮಂದಿ ಪ್ರಾತಿನಿಧ್ಯ ಪಡೆದಂತಾಗಿದೆ.

ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಸಂಸದರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ. ನಾರಾಯಣ ಸ್ವಾಮಿ ಹೊಸದಾಗಿ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ