ಆ್ಯಪ್ನಗರ

ಗಣರಾಜ್ಯೋತ್ಸವ ವೇಳೆ ಬಾಂಬ್‌ ಸ್ಫೋಟ ಸಂಚು: ಐವರು ಉಗ್ರರ ಬಂಧನ

ಜನವರಿ 26ರಂದು ದೇಶಾದ್ಯಂತ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ಸಂಭ್ರಮದ ವೇಳೆ ಜನಸಂದಣಿ ಕೂಡ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಬಾಂಬ್‌ ಸ್ಫೋಟ ಮಾಡಲು ಜೈಷೆ ಮೊಹಮದ್‌ ಸಂಘಟನೆ ಸಂಚು ರೂಪಿಸಿದೆ. ಅದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Vijaya Karnataka Web 16 Jan 2020, 8:33 pm
ಹೊಸದಿಲ್ಲಿ: ಮುಂದಿನ ವಾರ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮ ವೇಳೆ ಹೊಸದಿಲ್ಲಿ, ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಬಾಂಬ್‌ ಸ್ಫೋಟದ ಸಂಚು ರೂಪಿಸಿದ್ದ ಉಗ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Vijaya Karnataka Web ಯೋಧ
ಯೋಧ


ಈ ಐವರು ಜೈಷೆ ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗಣ ರಾಜ್ಯೋತ್ಸವಕ್ಕೆ ಕೆಲವೇ ದಿನಗಳ ಬಾಕಿ ಇರುವಂತೆಯೇ ಜಮ್ಮು ಕಾಶ್ಮೀರದ ಕೆಲವೆಡೆ ಸ್ಫೋಟಗಳು ಸಂಭವಿಸಿವೆ. ಜೈಷೆ ಮೊಹಮದ್‌ ಉಗ್ರರ ಇನ್ನಷ್ಟು ಸಂಚು ಪತ್ತೆ ಹಚ್ಚಿರುವ ಪೊಲೀಸರು ಐವರುನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಸಂಚುಕೋರರಿಂದ ಎಕೆ 47 ರೈಫಲ್‌, ಸ್ಫೋಟಕ ಸಾಮಗ್ರಗಿ, ಜಿಲಟಿನ್‌ ಕಡ್ಡಿಗಳು, ಡಿಟೊನೆಟರ್‌ಗಳು, ಮೆಮೊರಿ ಕಾರ್ಡ್‌, ನಕ್ಷೆಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ