ಆ್ಯಪ್ನಗರ

ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ತರುತ್ತಿದ್ದಾರೆ: ಬಿಕೆ ಹರಿಪ್ರಸಾದ್

ಸ್ವಾತಂತ್ರ್ಯ ಪ್ರೇಮಿ ಭಗತ್ ಸಿಂಗ್ , ಗುರು ನಾರಾಯಣ, ಕುವೆಂಪುರುವರ ವಿಚಾರಗಳನ್ನು ಕೈ ಬಿಟ್ಟಿರುವುದನ್ನ ಒಪ್ಪಲು ಸಾಧ್ಯವಿಲ್ಲ. ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ತರಲಾಗ್ತಿದೆ.

Vijaya Karnataka Web 17 May 2022, 6:14 pm
ಹೊಸದಿಲ್ಲಿ: ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ತರಲಾಗುತ್ತಿದೆಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
Vijaya Karnataka Web ಬಿಕೆ ಹರಿಪ್ರಸಾದ್‌
ಬಿಕೆ ಹರಿಪ್ರಸಾದ್‌


ಹೊಸದಿಲ್ಲಿಯಲ್ಲಿ ಸೋಮವಾರ ಈ ಬಗ್ಗೆ ಮಾತನಾಡಿದ ಅವರು, ಹೆಡಗೇವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ. ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟ ವಿರುದ್ಧವಾಗಿದ್ದವರು, ಧರ್ಮದ ಸಂಘಟನೆ ಮುಖ್ಯಸ್ಥರಾಗಿದ್ದವರು‌ ಎಂದಿದ್ದಾರೆ.

'ಪಠ್ಯ ಪುಸ್ತಕ'ಗಳನ್ನು ಬಿಜೆಪಿಯ 'ಪಕ್ಷ ಪುಸ್ತಕ'ಗಳನ್ನಾಗಿ ಮಾಡುವ ಹುನ್ನಾರ: ಎಚ್‌ಡಿ ಕುಮಾರಸ್ವಾಮಿ ಕಿಡಿ

ಸ್ವಾತಂತ್ರ್ಯ ಪ್ರೇಮಿ ಭಗತ್ ಸಿಂಗ್ , ಗುರು ನಾರಾಯಣ, ಕುವೆಂಪುರುವರ ವಿಚಾರಗಳನ್ನು ಕೈ ಬಿಟ್ಟಿರುವುದನ್ನ ಒಪ್ಪಲು ಸಾಧ್ಯವಿಲ್ಲ. ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ತರಲಾಗ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ.

ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೀತಿದೆ. ಭವಿಷ್ಯತ್ತಿನಲ್ಲಿ ಭಯಾನಕ ವಾತಾವರಣ ಸೃಷ್ಟಿಮಾಡಲು ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ವಿಪಕ್ಷ ನಾಯಕ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಮಡಿಕೇರಿಯಲ್ಲಿ ಶಾಲೆ ಆವರಣದಲ್ಲಿ ಗನ್ ತರಬೇತಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, ದಲಿತರು ಗನ್ ತರಬೇತಿ ಪಡೆದರು ನಕ್ಸಲೈಟ್ ಪಟ್ಟ ಕಟ್ಟುತ್ತಾರೆ. ಮುಸ್ಲಿಮರು ಗನ್ ತರಬೇತಿ ಪಡೆದರೆ ಭಯೋತ್ಪಾದಕ ಎಂಬ ಪಟ್ಟ ಕಟ್ತಾರೆ. ಅದೇ ಭಜರಂಗದಳದವರು ಆತ್ಮರಕ್ಷಣೆಗೆ ಗನ್ ತರಬೇತಿ ಪಡೆಯುತ್ತಾರಾ? ಎಲ್ಲರನ್ನ ರಕ್ಷಣೆ ಮಾಡಲು ಪೊಲೀಸ್ ಇದೆ, ಮಿಲಿಟರಿ ಇದೆ. ಭಜರಂಗದಳದವರಿಂದ ರಕ್ಷಣೆ ಬೇಕಾಗಿಲ್ಲ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭೆ ಚುನಾವಣೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ ಎಂದ ಡಿಕೆ ಸುರೇಶ್

ಪಠ್ಯದಲ್ಲಿ ಹೆಡಗೇವಾರ್‌ ಭಾಷಣದ ತುಣುಕು ಸೇರ್ಪಡೆ

ಹೆಡಗೇವಾರ್‌ ಬಗ್ಗೆ ಪಠ್ಯ ಪುಸ್ತಕದಲ್ಲಿಸೇರಿಸಿಲ್ಲ. ಅವರ ಭಾಷಣದ ಒಂದು ತುಣುಕನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದರು.

ಊಹಾಪೋಹಗಳಿಗೆ ಉತ್ತರ ಕೊಡುವಂತಹ ಪ್ರಯತ್ನ ಮಾಡಲ್ಲ. ಹಿಂದೆ ಇದೇ ತರಹ ನಾವು ನೋಡಿದ್ವಿ. ಅದೇ ಜನ ಇವತ್ತು ಇದನ್ನು ಹೇಳ್ತಿದ್ದಾರೆ. ಯಾವುದೇ ರೀತಿಯಲ್ಲಿ ಮಕ್ಕಳಿಗೆ ಹೇಳಬಾರದ ಒಂದೇ ಒಂದು ಲೈನ್‌ ಪಠ್ಯ ಪುಸ್ತಕದಲ್ಲಿಇಲ್ಲ ಅನ್ನೋ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ