ಆ್ಯಪ್ನಗರ

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಕೇರಳಿಗರ ಪ್ಲಾನ್‌ಗೆ ನೆಟ್ಟಿಗರು ಫಿದಾ

ಕೊರೊನಾ ನಿಯಂತ್ರಣ ಮಾಡಲು ಹೇಗೆಲ್ಲಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇರಳದ ವ್ಯಾಪಾರಿಯೊಬ್ಬನ ವಿಭಿನ್ನ ಪ್ರಯತ್ನ ನೆಟ್ಟಿಗರ ಗಮನ ಸೆಳೆಯುತ್ತಿದೆ.

Vijaya Karnataka 25 Mar 2020, 3:01 pm
ತಿರುವನಂತಪುರಂ: ಕೊರೊನಾ ವೈರಸ್ ಹರಡದಂತೆ ಹೇಗೆಲ್ಲಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬಹುದು ಎಂಬ ಭಿನ್ನ ಭಿನ್ನವಾದ ಐಡಿಯಾಗಳು ಗಮನ ಸೆಳೆಯುತ್ತಿದೆ. ಜನರ ನಡುವೆ ಅಂತರವನ್ನು ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಹಾಕುವ ಐಡಿಯಾ ಸಖತ್ ಫೇಮಸ್ ಆಗಿದೆ.
Vijaya Karnataka Web social distence keraka


ಪೊಲೀಸರ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಆದರೆ ಕೇರಳ ದಿನಸಿ ಅಂಗಡಿಯ ವ್ಯಕ್ತಿಯೊರ್ವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಭಿನ್ನವಾದ ಐಡಿಯಾವನ್ನು ತೋರಿಸಿಕೊಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫಾಲೋ ದಿ ಸರ್ಕಲ್: ಹುಬ್ಬಳ್ಳಿಯಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಕಮಾಲ್!

ದಿನಸಿ ಅಂಗಡಿ ಮಾಲೀಕನೊಬ್ಬ ಅಂಗಡಿಗೆ ಬಂದ ಗ್ರಾಹಕರಿಗೆ ಧವಸ ಧಾನ್ಯವನ್ನು ನೇರವಾಗಿ ಅವರ ಕೈಚೀಲಕ್ಕೆ ಹಾಕುವ ಬದಲಾಗಿ ಅಗಲವಾದ ಪೈಪ್‌ ಮೂಲಕ ಸುರಿಯುವ ವಿಧಾನವನ್ನು ಪರಿಚಯಿಸಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗೂ ನೆಟ್ಟಿಗರಿಂದ ಭಾರೀ ಮೆಚ್ಚುಗೆಗೂ ಪಾತ್ರವಾಗುತ್ತಿದೆ.

ಲಾಕ್‌ಡೌನ್ ಎಫೆಕ್ಟ್: ಆನ್‌ಲೈನ್ ಮಾರಾಟಗಾರರ ಸಭೆ ಕರೆದ ಬೆಂಗಳೂರು ಪೊಲೀಸ್ ಕಮಿಷನರ್

ಕೋವಿಡ್‌-19 ಸೋಂಕು ಹಲವು ವಿಧಾನಗಳಿಂದ ಹರಡುತ್ತೆ. ಅದರಲ್ಲೂ ಕನಿಷ್ಠ ಆರು ಅಡಿಯಷ್ಟು ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಒಬ್ಬರ ಕೈಯನ್ನು ಸೋಂಕಿತ ವ್ಯಕ್ತಿ ಮುಟ್ಟುವುದರಿಂದ ಕೊರೊನಾ ಹರಡಬಹುದು. ಅವಲ್ಲದೆ ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುವನ್ನು ಮತ್ತೊಬ್ಬರು ಮುಟ್ಟುವುದರಿಂದ ಈ ಸೋಂಕು ಹರಡಬಹುದು.

ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಠಿಣವಾಗಿ ಪಾಲನೆ ಮಾಡಬೇಕು ಎಂಬ ಒತ್ತಾಯವನ್ನು ಸರ್ಕಾರವೂ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇರಳದ ಈ ದಿನಸಿ ಅಂಗಡಿ ಮಾಲೀಕ ತೋರಿಸಿಕೊಟ್ಟ ಸಾಮಾಜಿಕ ಅಂತರದ ಐಡಿಯಾ ನಿಜಕ್ಕೂ ಮೆಚ್ಚತಕ್ಕದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ