ಆ್ಯಪ್ನಗರ

ಕುವೈಟ್‌ನಿಂದ ಕರ್ನಾಟಕಕ್ಕೆ ಮರಳಲಿದ್ದಾರೆ 165 ಅನಿವಾಸಿ ಕನ್ನಡಿಗರು

ಕೊರೊನಾ ಕಾರಣದಿಂದಾಗಿ ಕುವೈಟ್‌ನಲ್ಲಿ ಸಿಲುಕಿದ್ದ ಭಾರತೀಯರು ಅದರಲ್ಲೂ ಅನಿವಾಸಿ ಕನ್ನಡಿಗರು ಜುಲೈ 4ರಂದು ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟು 165 ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಮರಳಲಿದ್ದಾರೆ.

Vijaya Karnataka Web 3 Jul 2020, 10:58 pm
ಕುವೈಟ್‌: ಕೊರೊನಾ ಕಾರಣದಿಂದಾಗಿ ಕುವೈಟ್‌ನಲ್ಲಿ ಸಿಲುಕಿದ್ದ ಭಾರತೀಯರು ಅದರಲ್ಲೂ ಅನಿವಾಸಿ ಕನ್ನಡಿಗರು ಜುಲೈ 4ರಂದು ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
Vijaya Karnataka Web Coronavirus air
ಸಾಂದರ್ಭಿಕ ಚಿತ್ರ


ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ (ಕೆಕೆಎಂಎ) ಇದರ ಕರ್ನಾಟಕಾ ಶಾಖೆಯ ವತಿಯಿಂದ ಕರ್ನಾಟಕಕ್ಕೆ ಮೊದಲನೇ ಖಾಸಗಿ ಚಾರ್ಟಡ್ ವಿಮಾನವು ಜು.4ಕ್ಕೆ ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ.

ಇಂಡಿಗೋ ಸಂಸ್ಥೆಯ ವಿಮಾನವು 165 ಅನಿವಾಸಿ ಕನ್ನಡಿಗರನ್ನು ಮರಳಿ ತಾಯಿ ನಾಡಿಗೆ ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ ಹಾಗೂ ತಾಯಿನಾಡಿನಲ್ಲಿ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ.

20 ಸಾವಿರದ ಗಡಿ ತಲುಪಿದ ಕೊರೊನಾ: ಎಚ್ಚರಿಕೆ ಗಂಟೆ ಬಾರಿಸುತ್ತಿದೆ ಸಾವಿನ ಸಂಖ್ಯೆ!

ಪ್ರತಿಯೊಬ್ಬ ಪ್ರಯಾಣಿಕರಿಗೂ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಆಹಾರ ಮತ್ತು ಸುರಕ್ಷಿತ ಕಿಟ್‌ ನೀಡಲಾಗುತ್ತದೆ.

ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲ ಭಾರತೀಯ ಪ್ರಾಧಿಕಾರ ಸಂಸ್ಥೆಗಳು ಉತ್ತಮ ಸಹಕಾರ ನೀಡಿದ್ದು, ಜೂನ್ 27 ರಂದು ತೆರಳಬೇಕಾಗಿದ್ದ ವಿಮಾನಯಾನವನ್ನು ತಾಂತ್ರಿಕ ಕಾರಣದಿಂದಾಗಿ ಜುಲೈ 4ಕ್ಕೆ ಮುಂದೂಡಲಾಗಿತ್ತು. ಇದಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಪುರಾಣಿಕ್ ಅವರು ಸಹಕರಿಸಿದ್ದಾರೆ ಎಂದು ಕೆ.ಕೆ.ಎಂ.ಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಲಕ್ಷಣರಹಿತ ಸೋಂಕಿತರ ಹೋಂ ಕ್ವಾರಂಟೇನ್‌ಗೆ ನೂತನ ಮಾರ್ಗಸೂಚಿ! ಹೊಸ ನಿಯಮಗಳೇನು?

ಕೆ.ಕೆ.ಎಂ ಕರ್ನಾಟಕ ಶಾಖೆಯ ತಂಡದ ಸದಸ್ಯರ ಅವಿರತ ಶ್ರಮದಿಂದ ಯಾವುದೇ ತೊಂದರೆ ಇಲ್ಲದೇ ಚಾರ್ಟಡ್ ವಿಮಾನದ ಬುಕ್ಕಿಂಗ್ ಹಣ ಸಂಗ್ರಹ ಮತ್ತು ಅವರ ದಾಖಲೆಗಳ ಸಂಗ್ರಹಗಳನ್ನು ಮಾಡಲು ಸಾಧ್ಯವಾಗಿದೆ ಎಂದು KKMA ಕರ್ನಾಟಕ ಅಧ್ಯಕ್ಷರಾದ S.M. ಮೊಹಮ್ಮದ ಅಝರ್ ಅವರು ತಿಳಿಸಿದ್ದಾರೆ

ಪ್ರಯಾಣಿಕರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆ.ಕೆ.ಎಂ.ಎ. ಹೆಲ್ಪ್ ಡೆಸ್ಕ್ ತಂಡ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಈ ತಂಡ ಕುವೈಟ್ ನಲ್ಲಿ ಟಿಕೆಟ್‌ಗೆ‌ ನಗದು ಹಣ ಪಾವತಿಸುವ ಪ್ರಯಾಣಿಕರ ವಾಸಸ್ಥಳಕ್ಕೆ ಹೋಗಿ ಟಿಕೆಟ್ ಹಣವನ್ನು ಸಂಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ