ಆ್ಯಪ್ನಗರ

ದುಬೈ: ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದ 'ಸಂಕೀರ್ಣ' ನೃತ್ಯ ವೈಭವ

ಭಾರತೀಯ ದೂತವಾಸದ ಸಂಭಾಂಗಣದಲ್ಲಿ ಏಪ್ರಿಲ್‌ 13ರ ಸಂಜೆ “ಸಂಕೀರ್ಣ’ ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.

Vijaya Karnataka Web 18 Apr 2018, 12:23 pm
ದುಬೈ: ಭಾರತೀಯ ದೂತವಾಸದ ಸಂಭಾಂಗಣದಲ್ಲಿ ಏಪ್ರಿಲ್‌ 13ರ ಸಂಜೆ “ಸಂಕೀರ್ಣ’ ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.
Vijaya Karnataka Web ಸಂಕೀರ್ಣ ನೃತ್ಯ ಶಾಲೆ

ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ ನರ್ತಕಿಯರು ,ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು 'ವಿಷಮಕರ ಕಣ್ಣನ್ ' ಮೂಲಕ ನರ್ತಿಸಿ ಜನರ ಮನ ಗೆದ್ದರು. ಅಯಗಿರಿ ನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ ,ಕೊನೆಯದಾಗಿ ಪ್ರದರ್ಶನಗೊಂಡ 'ಧರ್ಮಕ್ಷೇತ್ರ ' ಕೃಷ್ಣಾರ್ಜುನರ ಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುರು ವಿದುಷಿ ಸಪ್ನಾ ಕಿರಣ್ ಭಾಗವಹಿಸಿದ್ದರು.

'ಸಂಕೀರ್ಣ'ನೃತ್ಯ ಶಾಲೆಯ ಕಿರು ಪರಿಚಯ
2011ನೇ ಇಸವಿಯಲ್ಲಿ ಸಾಕಾರಗೊಂಡ ಗುರು , ವಿದುಷಿ ಶ್ರೀಮತಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತದ ವಿದ್ಯಾರ್ಥಿನಿಯರು ಭರತನಾಟ್ಯಂ ಅನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ .ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆ ಹೆಸರಾದ 'ಸಂಕೀರ್ಣ' ಯು .ಎ .ಇ ಯಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದು ಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.

ಕಿರುವಯಸ್ಸಿನಲ್ಲೇ ನೃತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಗುರು ವಿದುಷಿ ಸಪ್ನಾಕಿರಣ್ ಸ್ವತಃ ಒಬ್ಬ ಅದ್ಭುತ ನೃತ್ಯಗಾರ್ತಿ , ರಂಗ ನಟಿ ಹಾಗೂ ಭರತನಾಟ್ಯ ಕಲಾವಿದರ ಕುಟುಂಬದಿಂದ ಬಂದವರು .

ವರದಿ : ಆರತಿ ಅಡಿಗ , ಶಾರ್ಜಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ