ಆ್ಯಪ್ನಗರ

ದುಬೈನಲ್ಲಿ ಕಣ್ಮನ ಸೆಳೆಯತ್ತಿದೆ ಎಕ್ಸ್‌ ಪೋ - 2020: ಭಾರತ ಸೇರಿದಂತೆ 190 ದೇಶಗಳು ಭಾಗಿ..!

ಎಕ್ಸ್‌ ಪೋದಲ್ಲಿ 190ಕ್ಕೂ ಹೆಚ್ಚಿನ ವಿವಿಧ ದೇಶಗಳ ಪೆವಿಲಿಯನ್‌ಗಳಿದ್ದು, ಆಯಾ ದೇಶಗಳ ಸಂಸ್ಕೃತಿ, ಕಲೆ, ತಂತ್ರಜ್ಞಾನ, ವ್ಯವಹಾರ, ಅರ್ಥಶಾಸ್ತ್ರ, ವಾಯುಶಾಸ್ತ್ರ , ವಿಜ್ಞಾನ ಹಾಗೂ ಪ್ರಪಂಚಕ್ಕೆ ಬೇಕಾಗಿರುವ ಎಲ್ಲ ಅತ್ಯಾಧುನಿಕ ವಸ್ತುಗಳ ಪ್ರದರ್ಶನ ಮಾಡಲಾಗುತ್ತಿದೆ.

Vijaya Karnataka Web 26 Dec 2021, 5:44 pm
ಲೇಖಕರು: ಶ್ರೀಮತಿ ಮಮತಾ ಮೈಸೂರು, ದುಬೈ
Vijaya Karnataka Web dubai expo 2020
ದುಬೈನಲ್ಲಿ ಕಣ್ಮನ ಸೆಳೆಯತ್ತಿದೆ ಎಕ್ಸ್‌ ಪೋ - 2020: ಭಾರತ ಸೇರಿದಂತೆ 190 ದೇಶಗಳು ಭಾಗಿ..!


ಅಚ್ಚರಿಗಳ ಮಹಾ ನಗರ ದುಬೈನಲ್ಲಿ ಬಹು ನಿರೀಕ್ಷಿತ ಎಕ್ಸ್‌ಪೋ - 2020 ಅದ್ಧೂರಿಯಾಗಿ ಪ್ರಾರಂಭವಾಗಿ ಈಗಾಗಲೇ 2 ತಿಂಗಳುಗಳು ಕಳೆದು ಹೋಗಿದೆ. ನ ಭೂತೋ ನ ಭವಿಷ್ಯತಿ ಎನ್ನುವ ಹಾಗೆ ಹಿಂದೆಂದೂ ಕಾಣದ, ಕೇಳದ, ಮುಂದೆಂದೂ ಬಹುಶಃ ಇಷ್ಟು ಅದ್ದೂರಿಯಾಗಿ ಎಕ್ಸ್‌ ಪೋ ನಡೆಯುವುದಿಲ್ಲವೇನೋ ಅನ್ನುವ ಹಾಗಿದೆ, ಈ ದುಬೈ ಎಕ್ಸ್‌ ಪೋ - 2020.

ನಮ್ಮ ಹೆಮ್ಮೆಯ ದುಬೈನಲ್ಲಿ ನಡೆಯುತ್ತಿರುವ ಈ ಮಹಾ ಮೇಳ ಅಕ್ಟೋಬರ್ 1 ನೇ ತಾರೀಕು 2021ರಿಂದ ಪ್ರಾರಂಭವಾಗಿದ್ದು, 30ನೇ ಮಾರ್ಚ್ 2021ರವರೆಗೂ ನಡೆಯಲಿದೆ.

ಮೊದಲು ಈ ಎಕ್ಸ್‌ ಪೋ ಅಂದ್ರೆ ಏನು ಅಂತ ತಿಳಿದು ಕೊಳ್ಳೋಣ.. ಎಕ್ಸ್‌ ಪೋ ಅಂದ್ರೆ ಎಲ್ಲರಿಗೂ ತಿಳಿದಿರೋ ಹಾಗೆ ಎಕ್ಸಿಬಿಷನ್, ಪ್ರದರ್ಶನ, ಮೇಳ ಅಂತ ಹೇಳಬಹುದು. ಆದರೆ ಈ ಎಕ್ಸ್‌ ಪೋ - 2020 ಅಂತಿಂಥ ಮೇಳ ಅಲ್ಲ. 190ಕ್ಕೂ ಹೆಚ್ಚಿನ ದೇಶಗಳು ಶಾಂತಿಯಿಂದ, ಪ್ರೀತಿಯಿಂದ ಹಾಗೂ ಸ್ನೇಹದಿಂದ ಪಾಲ್ಗೊಂಡಿರುವ 'ಲೈಫ್‌ ಟೈಮ್ ಇವೆಂಟ್' ಅಂತ ಹೇಳಬಹುದು.
ಈ ಎಕ್ಸ್‌ ಪೋ ಇತಿಹಾಸ ಗಮನಿಸಿದರೆ ಟೆಲಿಫೋನ್, ಟಿವಿ, ಎಲ್ಇಡಿ, ಸಿಡಿ ಇವೆಲ್ಲವೂ ಪ್ರಪ್ರಥಮವಾಗಿ ಪ್ರದರ್ಶನಗೊಂಡಿದ್ದು ಈ ಮುಂಚಿನ ಎಕ್ಸ್‌ ಪೋಗಳಲ್ಲಿ.. ಈಗಲೇ ದುಬೈ ಎಕ್ಸ್‌ ಪೋದಲ್ಲಿ ಫ್ಲೈಯಿಂಗ್ ಮ್ಯಾನ್ ಎಂಬ ಜನರ ಮಧ್ಯದಲ್ಲೇ ಹಾರಾಡುವ ಮಾನವ ಯಂತ್ರವನ್ನು ಪರಿಚಯಿಸಲಾಗಿದೆ. ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಈ ಎಕ್ಸ್‌ ಪೋ ಕೊನೆಯದಾಗಿ ನಡೆದಿದ್ದು 2015ರಲ್ಲಿ ಇಟಲಿಯ ಮಿಲಾನ್ ನಗರದಲ್ಲಿ. ಹೆಸರೇ ಸೂಚಿಸುವಂತೆ ಎಕ್ಸ್‌ ಪೋ - 2020 ನಮ್ಮ ದುಬೈ ನಗರದಲ್ಲಿ 2020ರಲ್ಲೇ ನಡೆಯಬೇಕಿತ್ತು. ಆದರೆ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ತಾತ್ಕಾಲಿಕವಾಗಿ ಅಕ್ಟೋಬರ್ 1, 2021ಕ್ಕೆ ಮುಂದೂಡಲ್ಪಟ್ಟಿತು.

ದುಬೈ ದಸರಾ ಕ್ರೀಡೋತ್ಸವ – 2021: ಶುಕ್ರವಾರ ಸಂಜೆ ಸಮಾರೋಪ ಸಮಾರಂಭ
ಈ ಎಕ್ಸ್‌ ಪೋಗಾಗಿ ದುಬೈ ನಗರದ 1,050 ಎಕರೆ ಭೂಮಿಯಲ್ಲಿ ಒಂದು ಎಕ್ಸ್‌ ಪೋ ನಗರಿಯನ್ನೇ ಸೃಷ್ಟಿಸಲಾಗಿದೆ. ಬಹಳಷ್ಟು ಮೆಟ್ರೋ ಸ್ಟೇಷನ್‌ಗಳಿಂದ ಉಚಿತ ಬಸ್ ಸೇವಾ ಸೌಲಭ್ಯಗಳನ್ನು ಆಯೋಜಿಸಲಾಗಿದೆ.

ಈ ಎಕ್ಸ್‌ ಪೋದಲ್ಲಿ 190ಕ್ಕೂ ಹೆಚ್ಚಿನ ವಿವಿಧ ದೇಶಗಳ ಪೆವಿಲಿಯನ್‌ಗಳಿದ್ದು, ಆಯಾ ದೇಶಗಳ ಸಂಸ್ಕೃತಿ, ಕಲೆ, ತಂತ್ರಜ್ಞಾನ, ವ್ಯವಹಾರ, ಅರ್ಥಶಾಸ್ತ್ರ, ವಾಯುಶಾಸ್ತ್ರ , ವಿಜ್ಞಾನ ಹಾಗೂ ಪ್ರಪಂಚಕ್ಕೆ ಬೇಕಾಗಿರುವ ಎಲ್ಲ ಅತ್ಯಾಧುನಿಕ ವಸ್ತುಗಳ ಪ್ರದರ್ಶನ ಮಾಡಲಾಗುತ್ತಿದೆ.

ಅರಬ್ ನಾಡಲ್ಲಿ ಸಂಭ್ರಮದ ನಾಡ ಹಬ್ಬ: ಕಬಡ್ಡಿ ದಿಗ್ಗಜ ಕನ್ನಡಿಗ ಡಾ. ಹೊನ್ನಪ್ಪ ಗೌಡರಿಗೆ ದುಬೈ ಕ್ರೀಡಾ ರತ್ನ ಪ್ರಶಸ್ತಿ
ಯುಎಇ ಹಾಗೂ ಭಾರತ ದೇಶದ ಪೆವಿಲಿಯನ್ ಅತ್ಯದ್ಭುತವಾಗಿದ್ದು, ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ನಯನ ಮನೋಹರ ಹಾಗೂ ಉತ್ತಮ ಮಾಹಿತಿಗಳುಳ್ಳ ಪೆವಿಲಿಯನ್‌ಗಳಾಗಿವೆ.

ಸುಂದರವಾದ ಭಾರತದ ಪೆವಿಲಿಯನ್‌ನಲ್ಲಿ ಎಲ್ಲ ತರದ ಕಲೆ, ಸಾಹಿತ್ಯ, ವಿಜ್ಞಾನ, ಸಂಸ್ಕೃತಿ, ಸಂಗೀತ, ನಾಟಕ, ರಸ ಮಂಜರಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಭವಿಷ್ಯದ ಭವ್ಯ ಪ್ರಪಂಚ ಹೇಗಿರಬಹುದು ಎನ್ನುವುದನ್ನು ಎತ್ತಿ ತೋರಿಸುವ ಈ ಎಕ್ಸ್‌ ಪೋ - 2020 ನಮ್ಮ ದುಬೈನಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

ಇಂತಹ ಅದ್ಭುತ ಮಹಾ ಮೇಳಕ್ಕೆ ಸಾಕ್ಷಿಭೂತರಾದ ನಾವೇ ಧನ್ಯರು. ಇದಕ್ಕಾಗಿ ಈ ನಮ್ಮ ದೇಶದ ಪ್ರಭುಗಳಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಎನ್ನಬಹುದು . ಪ್ರತಿಯೊಬ್ಬರೂ ಈ ಮಹಾ ಮೇಳ ಎಕ್ಸ್‌ ಪೋ - 2020 ಪೆವಿಲಿಯನ್‌ಗಳಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ನಾವು ದುಬೈ ಹೆಮ್ಮೆಯ ಯುಎಇ ಕನ್ನಡಿಗರ ತಂಡ ಆಶಿಸುತ್ತೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ