ಆ್ಯಪ್ನಗರ

ಶಿಕಾಗೋದಲ್ಲಿ ಹವ್ಯಕ ಸಮ್ಮೇಳನ

ಅಮೆರಿಕದಲ್ಲಿರುವ ಹವ್ಯಕ ಬಳಗವನ್ನು ಸಂಘಟಿಸಲು ಪ್ರಾರಂಭಿಸಿದ ಹವ್ಯಕರ ಒಕ್ಕೂಟದ ಸಮ್ಮೇಳನವೂ ಜುಲೈ 1 ಹಾಗೂ 2ರಂದು ನಡೆಯಿತು

ಏಜೆನ್ಸೀಸ್ 6 Jul 2017, 6:55 pm
ಶಿಕಾಗೊ: ಅಮೆರಿಕದಲ್ಲಿರುವ ಹವ್ಯಕ ಬಳಗವನ್ನು ಸಂಘಟಿಸಲು ಪ್ರಾರಂಭಿಸಿದ ಹವ್ಯಕರ ಒಕ್ಕೂಟದ ಸಮ್ಮೇಳನ ಜುಲೈ 1 ಹಾಗೂ 2ರಂದು ನಡೆಯಿತು. ಇಲಿನಾಯ್ ರಾಜ್ಯದ ‘ಗ್ರೇಸ್‍ಲೇಕ್’ ನಗರದಲ್ಲಿರುವ ‘ಯಮುನೋತ್ರಿ’ ಆವರಣದಲ್ಲಿ ಈ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.
Vijaya Karnataka Web havyaka associan of americas
ಶಿಕಾಗೋದಲ್ಲಿ ಹವ್ಯಕ ಸಮ್ಮೇಳನ


ಗಣೇಶನ ಮೆರವಣಿಗೆಯಿಂದ ಆರಂಭಗೊಂಡ ಸಮಾವೇಶವನ್ನು, ಹವ್ಯಕ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಮತ್ತು ಸುಜಾತ ಅಡ್ಕೋಳಿ, ಹವ್ಯಕ ಸಮಿತಿಯ ಮುಖ್ಯಸ್ಥರಾದ ಶಂಕರ್ ಹೆಗ್ಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳೀಧರ್ ಕಜೆ, ಬಾಲ ಪಳಮಡೈ, ಮೂರ್ತಿ, ಸಚಿನ್ ಮತ್ತಿತರರು ಉದ್ಘಾಟಿಸಿದರು.



ಈ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಗಮಿಸಿದ್ದ ಕಲಾವಿದರಾದ ನಾಗಚಂದ್ರಿಕಾ ಭಟ್, ಎಂ.ಡಿ. ಪಲ್ಲವಿ, ಅರುಣ್ ಕುಮಾರ್ ಅವರು ಸುಗಮ ಸಂಗೀತ, ಚಿತ್ರಗೀತೆಗಳನ್ನು ಹಾಡಿ ಜನಮನ ತಣಿಸಿದರು.



ಕೆನಡಾದ ಟೊರಾಂಟೋದಿಂದ ಆಗಮಿಸಿದ್ದ ‘ಯಕ್ಷಮಿತ್ರ’ ತಂಡವು ‘ಸುಭದ್ರ ಕಲ್ಯಾಣ’ ಯಕ್ಷಗಾನವನ್ನು ಪ್ರದರ್ಶಿಸಿತು. ಹವ್ಯಕ ಸಮುದಾಯದ ಕಲೆ, ಸಂಸ್ಕೃತಿಯ ಸೊಗಡನ್ನು ಎರಡು ದಿನಗಳ ಕಾಲ ಪಸರಿಸಿದ ಸಮ್ಮೇಳನ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಯಿತು. ಮುಂದಿನ ಸಮ್ಮೇಳನ ಕೆನಡಾದ ಟೊರಾಂಟೋದಲ್ಲಿ ನಡೆಯುವುದೆಂಬ ನಿರ್ಣಯದೊಂದಿಗೆ ಸಮ್ಮೇಳನ ಶುಭಾಂತ್ಯ ಕಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ