ಆ್ಯಪ್ನಗರ

ಅಬುಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ

ಇತ್ತೀಚೆಗೆ ಕರ್ನಾಟಕ ಸಂಘ ಅಬುಧಾಬಿ 62ನೆಯ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಇಂಡಿಯನ್ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿಆಚರಿಸಿತು.

Vijaya Karnataka Web 13 Nov 2017, 4:08 pm
ಅಬುಧಾಬಿ: ಇತ್ತೀಚೆಗೆ ಕರ್ನಾಟಕ ಸಂಘ ಅಬುಧಾಬಿ 62ನೇ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಇಂಡಿಯನ್ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ಆಚರಿಸಿತು.
Vijaya Karnataka Web kannada rajyostva celebrated at abu dhabi
ಅಬುಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ


ಈ ಕಾರ್ಯಕ್ರಮಕ್ಕೆ ಭಾರತದಿಂದ ಶಾಯರಿ ಸಾಮ್ರಾಟ್ ಅಸದುಲ್ಲಾ ಬೇಗ್, ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಇಂಡಿಯನ್ ಸೋಶಿಯಲ್ ಸೆಂಟರ್ ನ ಅಧ್ಯಕ್ಷ ಜಯಚಂದ್ರ, ಕಾರ್ಯಾದರ್ಶಿ ಸಲಾಂ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕನ್ನಡ ಗಾನ, ನೃತ್ಯಗಳು, ಹುಲಿವೇಷ, ವೀರಗಾಸೆಗಳು ನೆರೆದವರಿಗೆ ಊರಿನ ನೆನಪನ್ನು ಹಚ್ಚಿದವು. ಅಸಾದುಲ್ಲಾ ಬೇಗ್ ಅವರ ಶಾಯರಿ ಆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.


ಪ್ರತಿ ವರುಷ ಈ ಸಂಘ ನೀಡುವ ಪ್ರತಿಷ್ಠಿತ ದ .ರಾ .ಬೆಂದ್ರೆ ಪ್ರಶಸ್ತಿ ಯನ್ನು ಈ ವರುಷ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ.ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ ಅವರಿಗೆ ಪ್ರದಾನ ಮಾಡಲಾಯಿತು . ಯು.ಏ .ಇ ಯಲ್ಲಿ ಉದ್ಯೋಗದಲ್ಲಿದ್ದುಕೊಂಡು ಈ ಮರುಭೂಮಿಯಲ್ಲಿ ಯಕ್ಷಗಾನಕ್ಕೆ ತನ್ನದೇ ಆದ ಗಣನೀಯ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಇವರಿಗೆ ಈ ಪ್ರಶಸ್ತಿ ಒಲಿದಿದೆ.

ಸಮಾರಂಭದಲ್ಲಿ ಅಬ್ದುಲ್ ಸಲಾಂ ದೇರಳೆ ಕಟ್ಟೆಯವರ ಕನ್ನಡ ಪುಸ್ತಕ 'ವಿದ್ಯಾರ್ಥಿ ಮತ್ತು ವ್ಯಕ್ತಿತ್ವ ವಿಕಸನ' ಬಿಡುಗಡೆಗೊಳಿಸಲಾಯಿತು. ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ ಇವರ ನಿರ್ದೇಶನದಲ್ಲಿ ಮೂಡಿಬಂದ ಯಕ್ಷಮಿತ್ರರು ದುಬಾಯಿ ಇದರ ಬಾಲಕಲಾವಿದರಿಂದ ಶರಸೇತು ಬಂಧನ ಪೌರಾಣಿಕ ಯಕ್ಷಗಾನ ಎಲ್ಲರ ಮನಸೂರೆಗೊಂಡಿತು.



ವಿದ್ಯಾ ಕ್ಷೇತ್ರದಲ್ಲಿ,ಕ್ರೀಡಾ ಕ್ಷೇತ್ರದಲ್ಲಿ ಹಾಗು ಇನ್ನಿತರ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ