ಆ್ಯಪ್ನಗರ

Kannada Rajyotsava: ಸ್ಕಾಟ್ಲೆಂಡ್‌ನಲ್ಲಿ ಕನ್ನಡ ರಾಜ್ಯೋತ್ಸವ; ಎಡಿನ್‌ಬರ್ಗ್‌ನಲ್ಲಿ ಮೊಳಗಿದ ಕನ್ನಡ ಡಿಂಡಿಮ

ಸ್ಕಾಟ್ಲೆಂಡ್‌ನಲ್ಲಿ ಕನ್ನಡ ಡಿಂಡಿಮದ ಸದ್ದು ಜೋರಾಗಿಯೇ ಮೊಳಗಿದೆ. ನವೆಂಬರ್‌ 12ರಂದು ಎಡಿನ್‌ಬರ್ಗ್‌ನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದ್ದು, ಸೇಂಟ್ ಕಥಬರ್ಟ್ಸ್ ಚರ್ಚ್‌ನಲ್ಲಿ ಸಂಪೂರ್ಣ ಕನ್ನಡಮಯವಾಗಿತ್ತು. ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಭಾಗವಹಿಸಿದ್ದ ಕನ್ನಡಿರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

Edited byಅವಿನಾಶ ವಗರನಾಳ | Vijaya Karnataka Web 15 Nov 2022, 10:07 pm

ಹೈಲೈಟ್ಸ್‌:


  • ಸ್ಕಾಟ್ಲೆಂಡ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ
  • ರಾಜಧಾನಿ ಎಡಿನ್‌ಬರ್ಗ್‌ನಲ್ಲಿ ಮೊಳಗಿತು ಕನ್ನಡ ಡಿಂಡಿಮ
  • ಎಡಿನ್‌ಬರ್ಗ್‌ನ ಕನ್ನಡ ಅಸೋಸಿಯೇಶನ್‌ ಆಫ್‌ ಸ್ಕಾಟ್ಲೆಂಡ್‌ನಿಂದ ಆಚರಣೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Scotland Kannada
ಎಡಿನ್‌ಬರ್ಗ್ (ಸ್ಕಾಟ್ಲೆಂಡ್): ಸ್ಕಾಟ್ಲೆಂಡ್‌‌ ರಾಜಧಾನಿ ಎಡಿನ್‌ಬರ್ಗ್‌ನಲ್ಲಿ ಕನ್ನಡ ಡಿಂಡಿಮ ಜೋರಾಗಿತ್ತು. ಎಡಿನ್‌ಬರ್ಗ್‌ನ ಕನ್ನಡ ಅಸೋಸಿಯೇಶನ್‌ ಆಫ್‌ ಸ್ಕಾಟ್ಲೆಂಡ್‌ನಿಂದ ಶನಿವಾರದಂದು (ನ.12) ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸೇಂಟ್ ಕಥಬರ್ಟ್ಸ್ ಚರ್ಚ್‌ನಲ್ಲಿ ಕನ್ನಡದ ಧ್ವಜಗಳು ರಾರಾಜಿಸಿದವು.
ಹೊಸಬಟ್ಟೆ ಧರಿಸಿ ಕನ್ನಡಿಗರು ಸಡಗರದಿಂದ ಭಾಗವಹಿಸಿದ್ದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಅನುರಣನ ನಡೆಯಿತು. ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಮಕ್ಕಳು, ಮಹಿಳೆಯರು, ಪುರುಷರು ನೃತ್ಯ ಮಾಡಿ ಸಂಭ್ರಮಿಸಿದರು.

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ಸೇರಿ ಇತರ ಹಾಡುಗಳು ಚರ್ಚ್‌ನ ತುಂಬೆಲ್ಲಾ ಕನ್ನಡದ ಇಂಪು ಪಸರಿಸಲು ಕಾರಣವಾದವು. ನೃತ್ಯ, ಹಾಡು, ಫ್ಯಾಷನ್ ಶೋಗಳು ನೆರೆದವರನ್ನು ರಂಜಿಸಿದವು. ಸವಿ ಸವಿಯಾದ ಅಡುಗೆ ಹೊಟ್ಟೆಗೆ ಹಿತಕಾರಿಯಾಗಿತ್ತು.


ಕಾರ್ಯಕ್ರಮ ಉದ್ಘಾಟಿಸಿದ ಭಾರತದ ರಾಯಭಾರಿ ಬಿಜಯ್ ಸೆಲ್ವರಾಜ್ ಮಾತನಾಡಿ, ಕನ್ನಡಿಗರು ಎಡಿನ್‌ಬರ್ಗ್‌ನಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಇಷ್ಟೊಂದು ವೈಭವೋಪೇತವಾಗಿ ಆಚರಿಸುತ್ತಿರುವುದು ನನ್ನನ್ನು ಪುಳಕಿತನನ್ನಾಗಿಸಿದೆ. ಇಂತಹ ಆಚರಣೆಗಳು ವಿದೇಶಗಳಲ್ಲಿರುವ ಭಾರತೀಯರನ್ನು ಒಂದೆಡೆ ಸೇರಿಸಲು ಯಶಸ್ವಿಯಾಗುತ್ತವೆ. ಹಬ್ಬಗಳ ನೆಪದಲ್ಲಿ ಕನ್ನಡಿಗರು ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಂಧವ್ಯ ವೃದ್ಧಿಸಲು ನೆರವಾಗುತ್ತವೆ ಎಂದರು.


ಕೌನ್ಸಿಲರ್ ಯೆಮಿ ಮೆಕ್ನಿಸ್, ಮೆಖನ್ ಹಾಗೂ ಚರ್ಚ್‌ನ ಮುಖ್ಯಸ್ಥ ಫಾದರ್ ಪ್ರಾನ್ಸಿಸ್ ಉತುಟೋ ಸಾನಿಧ್ಯ ವಹಿಸಿದ್ದರು. ಕೊನೆಯಲ್ಲಿ ಸಂಘದ ಹರೀಶ್‌ ನಾಗಪ್ಪ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಪ್ರಾಯೋಜಕರಿಗೂ, ಆಗಮಿಸಿದ ಅತಿಥಿಗಳಿಗೂ ಹಾಗೂ ನೆರೆದ ಎಲ್ಲ ಕನ್ನಡಿಗರಿಗೆ ಧನ್ಯವಾದಗಳನ್ನು ತಿಳಿಸಿದರು.

Kannada Rajyotsava: ಕತಾರ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ; ಟಿಎಸ್‌ ನಾಗಾಭರಣ, ಅನೂಪ್‌ ಭಂಡಾರಿ ಭಾಗಿ
ರಾಘವೇಂದ್ರ ಕಾಮತ್, ಶಿರೀಷ ಕಾಂತಾರಾಜ, ಆಶಾ ಭಾರದ್ವಾಜ, ವಿಮಲ್ ಡಿಸೋಜಾ, ಸೌಮ್ಯ, ಶ್ರುತಿ ಅರವಿಂದ್, ಪಾವನಾ ನಾಗರಾಜ್‌, ಜಗದೀಶ್‌ ಹಿರೇಮಠ್‌, ರಾಧಾಕೃಷ್ಣ, ಧೀರಜ್ ಮಲ್ಲಪ್ಪ, ಪ್ರಸಾದ ಸಾಲವಾಡಗಿ ಇತರರು ಆಯೋಜಕರಾಗಿದ್ದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ