ಆ್ಯಪ್ನಗರ

ಅಮೆರಿಕದ ಐಯೋವಾದಲ್ಲಿ ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ದೂರದ ಅಮೆರಿಕದಲ್ಲೂ ಜೋರಾಗಿ ನಡೆದಿದೆ.

Vijaya Karnataka Web 15 Nov 2017, 8:17 pm
ಐಯೋವಾ: ನವೆಂಬರ್‌ ಬಂತೆಂದರೆ ಎಲ್ಲೆಡೆ ಕನ್ನಡ ಡಿಂಡಿಮ. ಕರ್ನಾಟಕದಲ್ಲಿ ಮಾತ್ರವಲ್ಲ ದೂರದ ಅಮೆರಿಕದಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಜೋರಾಗಿ ಸಾಗಿದೆ.
Vijaya Karnataka Web kannada rajyotsava in america
ಅಮೆರಿಕದ ಐಯೋವಾದಲ್ಲಿ ಕನ್ನಡ ರಾಜ್ಯೋತ್ಸವ


ಅಮೆರಿಕದಲ್ಲಿರುವ ಹಲವಾರು ಕನ್ನಡಿಗರು ರಾಜ್ಯೋತ್ಸವವನ್ನು ತಪ್ಪದೆ ಆಚರಿಸುತ್ತಾರೆ. ಈ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಈ ಬಾರಿಯೂ ಕನ್ನಡ ರಾಜ್ಯೋತ್ಸಾವ ಆಚರಣೆ ಜೋರಾಗಿದೆ.

ಅಮೆರಿಕದ ಐಯೋವಾದ ಈಸ್ಟರ್ನ್‌ ಐಯೋವಾ ಕನ್ನಡ ಕೂಟದಿಂದ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಐಯೋವಾದಲ್ಲಿರುವ ಕನ್ನಡಿಗರು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮುಖ್ಯವಾಗಿ ಚಿಣ್ಣರಿಂದ ಗೀತಗಾಯನ, ನೃತ್ಯ, ನಾಟಕ ಹಾಗೂ ಕನ್ನಡದ ಪರಂಪರೆಯ ಬಗ್ಗೆ ವಿಶೇಷ ಭಾಷಣಗಳನ್ನು ಆಯೋಜಿಸಲಾಗಿತ್ತು.

ಮಹಿಳೆಯರ ವಿಶೇಷ ನೃತ್ಯ ಕೂಡ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ಒಕ್ಕೂಟದ ಪ್ರಕಾಶ್‌ ದೊಡ್ಡ ಪತ್ತಾರ್, ಚಂದ್ರಶೇಖರ್‌ ಮೂಡುಗೆರೆ, ಉಮೇಶ್‌ ಸಾವೋಲ್ಕರ್‌, ಗೋಪಾಲಕೃಷ್ಣ, ವಿಘ್ನೇಶ್‌, ಗೋವಿಂದ್‌, ಗಿರೀಶ್‌ ಕುಲಕರ್ಣಿ, ದೀಪಕ್‌, ಮಹೇಂದ್ರ ಮಿರ್ಜಾಕರ್, ಗಣೇಶ್‌ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು.

Kannada Rajyotsava in America

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ