ಆ್ಯಪ್ನಗರ

ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ರಂಗೋಲಿ ಮೇಳ ಮತ್ತು ಗಾಳಿಪಟ ಸ್ಪರ್ಧೆ

ಆಂಧ್ರ ಕಲಾ ವೇದಿಕೆ ಮತ್ತು ಗುಜರಾತ್ ಸಮಾಜದ ಸಹಯೋಗದಿಂದ ಈ ವರ್ಷದ ಮಕರ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಂಪ್ರದಾಯಿಕ ವಿಧಾನದಲ್ಲೇ ಆಚರಿಸುವ ಸಲುವಾಗಿ ರಂಗೋಲಿ ಮೇಳ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.​

Vijaya Karnataka Web 17 Jan 2022, 3:40 pm
ಕತಾರ್: ಮಕರ ಸಂಕ್ರಾಂತಿಯು ಭಾರತದಾದ್ಯಂತ ನಡೆಯುವ ಮಹತ್ವದ ಹಬ್ಬ. ಪ್ಯಾನ್ - ಇಂಡಿಯನ್ ಸೌರ ಹಬ್ಬ ಎಂದೇ ಖ್ಯಾತಿ ಪಡೆದಿರುವ ಮಕರ ಸಂಕ್ರಾಂತಿ, ಕನ್ನಡಿಗರ ಪಾಲಿಗೆ ಸುಗ್ಗಿ ಹಬ್ಬ. ಈ ಹಬ್ಬಕ್ಕೆ ಹಲವಾರು ಹೆಸರುಗಳು.. ಪೊಂಗಲ್, ಲೋಹ್ರಿ, ಬಿಹು.. ಮಕರ ಸಂಕ್ರಾಂತಿ.. ಹೀಗೆ ದೇಶದ ಉದ್ದಲಗಕ್ಕೂ ಹಲವು ಹೆಸರುಗಳು.. ಈ ಮಕರ ಸಂಕ್ರಾಂತಿ ಇದೀಗ ದೂರದ ಕತಾರ್‌ನಲ್ಲೂ ಹೆಸರು ಮಾಡಿದೆ..
Vijaya Karnataka Web sankranti
ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ರಂಗೋಲಿ ಮೇಳ ಮತ್ತು ಗಾಳಿಪಟ ಸ್ಪರ್ಧೆ



ಕತಾರ್‌ನ ಆಂಧ್ರ ಕಲಾ ವೇದಿಕೆ ಮತ್ತು ಗುಜರಾತ್ ಸಮಾಜದ ಸಹಯೋಗದಿಂದ ಈ ವರ್ಷದ ಮಕರ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಆಚರಣೆಯನ್ನು ಸಾಂಪ್ರದಾಯಿಕ ವಿಧಾನದಲ್ಲೇ ಆಚರಿಸುವ ಸಲುವಾಗಿ ರಂಗೋಲಿ ಮೇಳ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

50ರ ಸಂಭ್ರಮದಲ್ಲಿರುವ ‘ಕಾವೇರಿ’ಗೆ ಈ ವಿಶಿಷ್ಟ ಪತ್ರ ಬರೆದವರು ಯಾರು?
ಕತಾರ್‌ನ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್, ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್ ಮತ್ತು ಐಸಿಸಿ ಸಮನ್ವಯ ಅಧಿಕಾರಿ ಕ್ಸೇವಿಯರ್ ಧನರಾಜ್ ಅವರು ಉತ್ಸವದಲ್ಲಿ ಭಾಗವಹಿಸಿದ್ದರು.

ವೆಂಕಪ್ಪ ಭಾಗವತುಲ ನೇತೃತ್ವದ ಆಂಧ್ರ ಕಲಾ ವೇದಿಕೆಯ ನೂತನ ನಿರ್ವಹಣಾ ತಂಡದ ಸಹಯೋಗದಲ್ಲಿ ಮಹಿಳಾ ತಂಡ ಐಸಿಸಿ ಮಹಿಳೆಯರೊಂದಿಗೆ ಸೇರಿ ಅಶೋಕ ಸಭಾಂಗಣದಲ್ಲಿ ವರ್ಣರಂಜಿತ ರಂಗೋಲಿಗಳನ್ನು ರಚಿಸಿದರು.

'ಅನಂತಾಶ್ವಥ' ಗಾಯನ ಲೋಕದ ದಿಗ್ಗಜರಿಗೆ ಗೀತ ನಮನ: ಅನಿವಾಸಿ ಕನ್ನಡಿಗರಿಗೆ 'ಕೆಓಟಿಟಿ'ಯಲ್ಲಿ ಕಾರ್ಯಕ್ರಮ
ಗುಜರಾತ್ ಸಮಾಜದ ಅಧ್ಯಕ್ಷ ದೇವಾಂಗ್ ಪಟೇಲ್ ಅವರು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಐಸಿಸಿ ಮೈದಾನದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಐಸಿಸಿ ಅಧ್ಯಕ್ಷ ಪಿಎನ್ ಬಾಬು ರಾಜನ್ ನೇತೃತ್ವದಲ್ಲಿ ಗಾಳಿಪಟ ಉತ್ಸವ ಹಾಗೂ ರಂಗೋಲಿ ಮೇಳದಲ್ಲಿ ಭಾಗವಹಿಸಿದ್ದ ಸಮಸ್ತ ಕತಾರ್ ಭಾರತೀಯರು ಸಂಭ್ರಮಪಟ್ಟರು. ತಾಯ್ನಾಡಿನಿಂದ ದೂರದಲ್ಲಿದ್ದರೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಈ ಕಾರ್ಯಕ್ರಮ ಸಹಕಾರಿಯಾಯ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ