ಆ್ಯಪ್ನಗರ

‘ಸ್ವಚ್ಛತೆ ಕಡೆಗೆ ನಿಗಾವಹಿಸಿ’

ವಿದ್ಯಾರ್ಥಿಗಳು ಸ್ವಚ್ಚತೆ ಕಡೆಗೆ ನಿಗಾವಹಿಸಬೇಕು ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿದರು.ರಾಯಚೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಸೇಂಟ್ ಮದರ್ ಥೆರೆಸಾ ಪದವಿ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.

ವಿಕ ಸುದ್ದಿಲೋಕ 28 Mar 2016, 6:37 am
ರಾಯಚೂರು; ವಿದ್ಯಾರ್ಥಿಗಳು ಸ್ವಚ್ಚತೆ ಕಡೆಗೆ ನಿಗಾವಹಿಸಬೇಕು ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿದರು.
Vijaya Karnataka Web
‘ಸ್ವಚ್ಛತೆ ಕಡೆಗೆ ನಿಗಾವಹಿಸಿ’


ರಾಯಚೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಸೇಂಟ್ ಮದರ್ ಥೆರೆಸಾ ಪದವಿ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.

ಸ್ವಚ್ಛತೆ ಮಹಾತ್ಮಗಾಂಧೀಜಿಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಎಸ್ ಘಟಕದ ಶ್ರಮ ಅತ್ಯಗತ್ಯ ಎಂದರು.

ಜೆಡಿಎಸ್ ಮುಖಂಡ ಎಂ.ವಿರೂಪಾಕ್ಷಿ ಹೊಸೂರು ಮಾತನಾಡಿ, ಶಿಬಿರಾರ್ಥಿಗಳು ಉತ್ತಮ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು ಎಂದರು.

ಎಸ್‌ಆರ್‌ಕೆಬಿಎಡ್ ಕಾಲೇಜಿನ ಉಪನ್ಯಾಸಕ ನರಸಿಂಹ ಮಾತನಾಡಿ, ನಾಯಕನಾಗುವವನು ತಾಳ್ಮೆ, ಛಲ, ಪಾದರಸದಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು. ಪ್ರಾಚಾರ್ಯ ದೇವದಾಸ ಹೊಸೂರು, ಆಡಳಿತ ಮಂಡಳಿ ಕಾರ್ಯದರ್ಶಿ ಥಾಮಸ್ ಬೆಂಜಮಿನ್, ಮುಖ್ಯ ಶಿಕ್ಷಕ ರಾಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಭಂಡಾರಿ, ಉಪನ್ಯಾಸಕರಾದ ನರೇಶ ಸಾಗರ, ವೆಂಕಟೇಶ ಪಾಣಿ, ಚಂದ್ರಶೇಖರ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುರೇಶ, ಅಜರುದ್ದೀನ್, ವಿದ್ಯಾರ್ಥಿಗಳಾದ ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ