ಆ್ಯಪ್ನಗರ

ಬೇಡಿಕೆ ಈಡೇರಿಕೆ ಭರವಸೆ : ಬಂದ್ ವಾಪಸ್

ತಾಲೂಕಿನಾದ್ಯಂತ ಸಮರ್ಪಕ ಕುಡಿವ ನೀರೊದಗಿಸಲು ಹಾಗೂ ರೈತರ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರೈತ ಸಂಘ ಮಾ.28ರಂದು ಕರೆ ನೀಡಿದ್ದ ಮಾನ್ವಿ ಬಂದ್‌ನ್ನು, ಬೇಡಿಕೆ ಈಡೇರಿಕೆ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು.

ವಿಕ ಸುದ್ದಿಲೋಕ 28 Mar 2016, 7:57 am
ಮಾನ್ವಿ ; ತಾಲೂಕಿನಾದ್ಯಂತ ಸಮರ್ಪಕ ಕುಡಿವ ನೀರೊದಗಿಸಲು ಹಾಗೂ ರೈತರ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರೈತ ಸಂಘ ಮಾ.28ರಂದು ಕರೆ ನೀಡಿದ್ದ ಮಾನ್ವಿ ಬಂದ್‌ನ್ನು, ಬೇಡಿಕೆ ಈಡೇರಿಕೆ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು.
Vijaya Karnataka Web
ಬೇಡಿಕೆ ಈಡೇರಿಕೆ ಭರವಸೆ : ಬಂದ್ ವಾಪಸ್


ಶನಿವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಹಸೀಲ್ದಾರ್ ಎಸ್.ಟಿ.ಯಂಪುರೆ, ಕೆಆರ್‌ಎಸ್ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸಭೆ ನಡೆಸಿದರು. ತಹಸೀಲ್ದಾರ್ ಹತ್ತು ದಿನಗಳೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಘಟನೆಯ ಕಾರ್ಯಕರ್ತರು ಬಂದ್ ವಾಪಸ್ ಪಡೆದರು. ಕೆಆರ್‌ಎಸ್‌ನ ತಾಲೂಕು ಅಧ್ಯಕ್ಷ ಮುದುಕಪ್ಪ ಮಾತನಾಡಿ, ಭರವಸೆ ಮೇರೆಗೆ ಬಂದ್ ಹಿಂಪಡೆದಿದ್ದೇವೆ. ಹತ್ತು ದಿನಗಳೊಳಗೆ ಬೇಡಿಕೆ ಈಡೇರದಿದ್ದಲ್ಲಿ ಪುನಃ ಹೋರಾಟ ನಡೆಸಲಾಗುವದು ಎಂದರು. ನೀರಾವರಿ ಅಧಿಕಾರಿ ವಿನೋದಕುಮಾರ್ ಗುಪ್ತಾ, ಗ್ರಾಮೀಣ ನೀರು ಸರಬರಾಜು ಎಇಇ ನರಸಿಂಗ್‌ರಾವ್, ಸಿಪಿಐ ಪಂಪನಗೌಡ, ಪಿಎಸ್‌ಐ ಉಮೇಶ್ ಕಾಂಬ್ಳೆ, ಆಶೋಕ್ ನಿಲೋಗಲ್ ಸೇರಿದಂತೆ ಕೆಆರ್‌ಎಸ್ ಪದಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ