ಆ್ಯಪ್ನಗರ

ಅನಧಿಕೃತ ಲೇಔಟ್: ಲೋಕಾ ಹೆಚ್ಚುವರಿ ತನಿಖೆ

ನಗರಸಭೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಅನಧಿಕೃತ ಲೇಔಟ್‌ಗಳಿಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂಬ ದೂರು ಆಧರಿಸಿ, ಬೆಂಗಳೂರಿನ ಲೋಕಾಯುಕ್ತ ಅಪರ ನಿಬಂಧಕ (ವಿಚಾರಣೆ) ಚಂದ್ರಶೇಖರ ಪಾಟೀಲ್ ಅವರು, ಇಲ್ಲಿನ ನಗರಸಭೆಗೆ ಸೋಮವಾರ ಭೇಟಿನೀಡಿ ಕಡತಗಳನ್ನು ಪರಿಶೀಲಿಸಿದರು.

ವಿಕ ಸುದ್ದಿಲೋಕ 28 Jun 2016, 7:01 am
ರಾಯಚೂರು; ನಗರಸಭೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಅನಧಿಕೃತ ಲೇಔಟ್‌ಗಳಿಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂಬ ದೂರು ಆಧರಿಸಿ, ಬೆಂಗಳೂರಿನ ಲೋಕಾಯುಕ್ತ ಅಪರ ನಿಬಂಧಕ (ವಿಚಾರಣೆ) ಚಂದ್ರಶೇಖರ ಪಾಟೀಲ್ ಅವರು, ಇಲ್ಲಿನ ನಗರಸಭೆಗೆ ಸೋಮವಾರ ಭೇಟಿನೀಡಿ ಕಡತಗಳನ್ನು ಪರಿಶೀಲಿಸಿದರು.
Vijaya Karnataka Web
ಅನಧಿಕೃತ ಲೇಔಟ್: ಲೋಕಾ ಹೆಚ್ಚುವರಿ ತನಿಖೆ


2002ರಲ್ಲಿ ನಗರಸಭೆಯ ಸದಸ್ಯರಾಗಿದ್ದ ಎಂ.ವಿರೂಪಾಕ್ಷಿ ಅವರು, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ‘‘ನಗರದ ಯಕ್ಲಾಸಪುರ, ಯರಮರಸ್, ಪೋತಗಲ್, ಅಸ್ಕಿಹಾಳ, ಬೋಳಮಾನದೊಡ್ಡಿ ರಸ್ತೆ, ಚಂದ್ರಬಂಡಾ ರಸ್ತೆಯ ಅನಧಿಕೃತ ಲೇಔಟ್‌ಗಳ ವಿನ್ಯಾಸಕ್ಕೆ ನಗರಸಭೆ ಸಂಖ್ಯೆ ನೀಡಲಾಗಿದೆ. ಎನ್‌ಎ, ಅಭಿವೃದ್ಧಿ ಶುಲ್ಕದ ಮೂಲಕ ಸಂದಾಯವಾಗಬೇಕಾಗಿದ್ದ ಲಕ್ಷಾಂತರ ಹಣ ದುರುಪಯೋಗವಾಗಿದೆ. ಇದರಲ್ಲಿ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ಭಾಗಿಯಾಗಿದ್ದಾರೆ’’ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ದೂರಿನ ವಿಚಾರಣೆ ಅಂತಿಮ ಹಂತ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ಆದೇಶ ಹೊರಡಿಸಬೇಕಿರುವುದರಿಂದ ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ಭೇಟಿನೀಡಿದ್ದಾರೆ. ಈ ಸಂದರ್ಭದಲ್ಲಿ ದೂರುದಾರರಿಂದಲೂ ಹೇಳಿಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ