ಆ್ಯಪ್ನಗರ

ಸಾರಿಗೆ ಮುಷ್ಕರ: ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಇಳಿಕೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಬಿಸಿ, ಮಂತ್ರಾಲಯಕ್ಕೆ ಆಗಮಿಸುತ್ತಿದ್ದ ಭಕ್ತರಿಗೂ ತಟ್ಟಿತು.

ವಿಕ ಸುದ್ದಿಲೋಕ 26 Jul 2016, 8:09 am
ರಾಯಚೂರು; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಬಿಸಿ, ಮಂತ್ರಾಲಯಕ್ಕೆ ಆಗಮಿಸುತ್ತಿದ್ದ ಭಕ್ತರಿಗೂ ತಟ್ಟಿತು.
Vijaya Karnataka Web
ಸಾರಿಗೆ ಮುಷ್ಕರ: ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಇಳಿಕೆ


ಸೋಮವಾರ, ರಾಯರ ದರ್ಶನಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿ ಇತರ ನಗರಗಳಿಂದ ಮಂತ್ರಾಲಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 30ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಆದರೆ, ಭಾನುವಾರ ರಾತ್ರಿಯಿಂದಲೇ ರಾಜ್ಯದ ಬಹುತೇಕ ಕಡೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಂತ್ರಾಲಯಕ್ಕೆ ತೆರಳಲು ನಿರ್ಧರಿಸಿದ್ದ ನೂರಾರು ಪ್ರಯಾಣಿಕರು ಪ್ರಯಾಣ ರದ್ದುಗೊಳಿಸಿದರು. ನಿತ್ಯ ಕಂಡುಬರುತ್ತಿದ್ದ ಭಕ್ತರ ದಂಡು ಮಂತ್ರಾಲಯದಲ್ಲಿ ಸೋಮವಾರ ಕಂಡುಬರಲಿಲ್ಲ.

ಸಾಮಾನ್ಯ ದಿನಗಳಲ್ಲಿ ಕನಿಷ್ಠ 5 ರಿಂದ 8 ಸಾವಿರ ಭಕ್ತರು, ಮಂತ್ರಾಲಯಕ್ಕೆ ಭೇಟಿನೀಡುತ್ತಾರೆ. ಅವರಲ್ಲಿ ಬಹುಪಾಲು ಕರ್ನಾಟಕದವರೇ ಆಗಿರುತ್ತಾರೆ. ಕರ್ನಾಟಕದಿಂದ ಬಸ್‌ಗಳು ತೆರಳದೇ ಇದ್ದುದರಿಂದ ಹಾಗೂ ಮುಷ್ಕರ ಅಂತ್ಯಗೊಳ್ಳುವ ಬಗ್ಗೆ ಅನಿಶ್ಚಿತತೆ ಹಿನ್ನೆಲೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ