ಆ್ಯಪ್ನಗರ

ಅಂಗನವಡಿಗೆ ಜಾಲಿಗಿಡದ 'ಸಿಂಗಾರ'

ಇಲ್ಲೊಂದು ಹರಕು-ಮುರಕು ಅಂಗನವಾಡಿ ಇದೆ. ಇಲ್ಲಿ ಪಾಠ ಕೇಳಲು ಚಿಣ್ಣರ ಜತೆಗೆ ಇಲಿ, ಹೆಗ್ಗಣ, ಹಾವುಗಳೂ ಹಾಜರಾಗುತ್ತವೆ.

ವಿಕ ಸುದ್ದಿಲೋಕ 17 Sep 2016, 9:00 am

ಸೋಮಣ್ಣ ಗುರಿಕಾರ, ಹಟ್ಟಿಚಿನ್ನದಗಣಿ

ಇಲ್ಲೊಂದು ಹರಕು-ಮುರಕು ಅಂಗನವಾಡಿ ಇದೆ. ಇಲ್ಲಿ ಪಾಠ ಕೇಳಲು ಚಿಣ್ಣರ ಜತೆಗೆ ಇಲಿ, ಹೆಗ್ಗಣ, ಹಾವುಗಳೂ ಹಾಜರಾಗುತ್ತವೆ.

ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8ನೇ ವಾರ್ಡಿನ ಮಾರುತಿ ದೇವಸ್ಥಾನದ ಬಳಿ ಸುತ್ತ-ಮುತ್ತ ಜಾಲಿಗಿಡ ಬೆಳೆದ ಶೆಡ್‌ವೊಂದರಲ್ಲಿ ನಡೆಯುತ್ತಿರುವ ಅಂಗನವಾಡಿಯ ವಾಸ್ತವ ಸ್ಥಿತಿ ಇದು.

ಸಂತೆ ಬಜಾರ್‌ ಹಾಗೂ ಮಾರುತಿ ದೇವಸ್ಥಾನದ ವರೆಗಿನ ನಿವಾಸಿಗಳ ಮಕ್ಕಳಿಗೋಸ್ಕರ ಈ ಅಂಗನವಾಡಿ ಕೇಂದ್ರ ತೆರೆಯಲಾಗಿದೆ. ಕಳೆದ 10 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಚಿಕ್ಕ ಶೆಡ್‌ನಲ್ಲೇ ಕೇಂದ್ರ ನಡೆಯುತ್ತಿದೆ. ಇದರಲ್ಲೇ ಮಕ್ಕಳಿಗೆ ಅಡುಗೆ ತಯಾರಿಕೆ, ಅಡುಗೆ ಸಾಮಾಗ್ರಿಗಳ ಸಂಗ್ರಹ, ಆಟ, ಪಾಠ ನಡೆಸುವಂತಾಗಿದೆ.

ಕ್ರಿಮಿ ಕೀಟಗಳ ಹಾವಳಿ: ಶೆಡ್‌ ಕೂಡ ಸುತ್ತಲೂ ಕಿತ್ತುಹೋಗಿದೆ. ಸುತ್ತ-ಮುತ್ತ ಜಾಲಿಗಿಡಗಳು ಬೆಳದಿದ್ದು ಹೊರಗಿನಿಂದ ಇಲಿ, ಹೆಗ್ಗಣಗಳು ಒಳನುಸುಳುತ್ತವೆ. ಹೆಗ್ಗಣಗಳು ರಾತ್ರೋ ರಾತ್ರಿ ಶೆಡ್‌ ತುಂಬಾ ನೆಲ ಬಗೆದು ಮಣ್ಣಿನ ಗುಂಪಿ ಹಾಕುತ್ತವೆ. ಇಲಿ, ಹೆಗ್ಗಣಗಳು ವಾಸವಾಗಿರುವುದರಿಂದ ಹಾವುಗಳು ಸಹ ಶೆಡ್‌ನೊಳಗೆ ಬರುತ್ತವೆ. ಇದನ್ನು ಕಂಡು ಅಕ್ಕಪಕ್ಕದ ಮನೆಯವರು ಮಕ್ಕಳನ್ನು ಶೆಡ್‌ನಲ್ಲಿ ಕೂರಿಸದೆ ತಮ್ಮ ಮನೆಯಲ್ಲಿ ಕೂರಿಸಿ ಪಾಠ ಹೇಳುವಂತೆ ಜಾಗ ಕೊಡುತ್ತಿದ್ದಾರೆ.

ಆಟ, ಪಾಠ ಹೊರಗಡೆ : ಕೇಂದ್ರದಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ಇದ್ದು, ಇಷ್ಟು ಮಕ್ಕಳಿಗೂ ಆಟ, ಪಾಠ ಹೇಳಿಕೊಡಲು ಕೇಂದ್ರದೊಳಗೆ ಸ್ಥಳಾವಕಾಶವಿಲ್ಲದಿದ್ದರಿಂದ ಶೆಡ್‌ ಹೊರಗಡೆ ಇರುವ ಖಾಲಿ ಜಾಗದಲ್ಲಿ ಆಟವಾಡಿಸುತ್ತಿದ್ದಾರೆ. ಕೇಂದ್ರದ ಸ್ಥಿತಿಗತಿ ಕಂಡ ಪಾಲಕರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.

----

ಉತ್ತಮ್ಮ ಮನೆ ಸಿಗದಿದ್ದರಿಂದ ಅನಿವಾರ್ಯವಾಗಿ ಶೆಡ್‌ನಲ್ಲಿ ಕೇಂದ್ರ ನಡೆಸುವಂತಾಗಿದೆ. ಹುಳ-ಹುಪ್ಪಡಿಗಳ ಕಾಟವಿದೆ. ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಮಂಜೂರಾಗಿದ್ದರೂ ಗ್ರಾ.ಪಂ. ನಿರ್ಲಕ್ಷ್ಯದಿಂದ ಕಟ್ಟಡ ನಿರ್ಮಾಣಗೊಂಡಿಲ್ಲ .

-ಉಮಾ, ಮೇಲ್ವಿಚಾರಕಿ, ಹಟ್ಟಿ ವಿಭಾಗ.

-----

Vijaya Karnataka Web
ಅಂಗನವಡಿಗೆ ಜಾಲಿಗಿಡದ 'ಸಿಂಗಾರ'

ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಮಂಜೂರಾಗಿದೆ. ಆದರೆ ಗ್ರಾ.ಪಂ.ಆಡಳಿತದ ಅಸಡ್ಡೆಯಿಂದ ಜಾಗ ದೊರೆಯುತ್ತಿಲ್ಲ. ಪ್ರತಿಯೊಂದು ಎನ್‌ಎ ಲೇಔಟ್‌ನಲ್ಲಿ ಸಾರ್ವಜನಿಕ ಬಳಕೆಗಾಗಿ ಜಾಗ ಬಿಟ್ಟಿರುತ್ತಾರೆ. ಅಂಥ ಜಾಗವನ್ನು ನೀಡದೆ ಇಲ್ಲವೆಂದು ಹೇಳುತ್ತಿದ್ದಾರೆ.

-ಗುರುಪಾದಪ್ಪ ನಾಯಿಕೋಡಿ, ಗ್ರಾಮಸ್ಥ, ಹಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ